ರಾಜ್ ಕುಮಾರ್ ಅವರನ್ನ ಟೀಕಿಸಿದ್ದ ಖ್ಯಾತ ಸಾಹಿತಿ ! ಆಣ್ಣಾವ್ರನ್ನ ಅವಮಾನ ಮಾಡಿದ್ದ ಆ ಸಾಹಿತಿ ಯಾರು ಗೊತ್ತಾ?

Cinema
Advertisements

ರಾಜ್ ಕುಮಾರ್ ಎಂಬ ಹೆಸರು ಕೇಳಿದ್ರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೋಮಾಂಚನವಾಗುತ್ತೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರು ಮಾಡದ ಪಾತ್ರಗಳೂ ಇಲ್ಲ. ಇನ್ನು ಅಮೇರಿಕಾದ ಪ್ರತಿಷ್ಠಿತ ಕೆಂಟಗಿ ಕರ್ನಲ್ ಪ್ರಶಸ್ತಿ ಪಡೆದ ಮೊದಾಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಜ್ ಕುಮಾರ್ ಅವರಿಗೆ ಸಿಕ್ಕ ಪ್ರೀತಿ ಬಿರುದುಗಳಿಗೆ ಲೆಕ್ಕವೇ ಇಲ್ಲ.

Advertisements

ತಮ್ಮ ಸರಳ ವ್ಯಕ್ತಿತ್ವದಿಂದಲೇ ಜನರಿಗೆ ಹತ್ತಿರವಾದ ರಾಜಣ್ಣ, ಅಭಿಮಾನಿಗಳನ್ನ ದೇವರೆಂದು ಕರೆದ ಮೊದಲ ನಟ. ಅವರ ಸಿನಿಮಾಗಳು ಸಾಮಾಜಿಕವಾಗಿ ಜನರ ಮೇಲೆ ಹೇಗೆ ಪ್ರಭಾವ ಬೀರಿದ್ದವು ಎಂಬುದಕ್ಕೆ ‘ಬಂಗಾರದ ಮನುಷ್ಯ’ಚಿತ್ರವೇ ಸಾಕ್ಷಿ. ಇನ್ನು ಅಣ್ಣಾವ್ರ ಮಾತಿಗೆ ಇಂತಹ ಅದ್ಭುತ ಶಕ್ತಿ ಇತ್ತೆಂದರೆ ಗೋಕಾಕ್ ಚಳುವಳಿಯಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿ. ಕನ್ನಡ ನಾಡು ಕಂಡ ಇಂತಹ ದೇವತಾ ಮನುಷ್ಯ ಮಹಾನ್ ನಟನನ್ನ ಖ್ಯಾತ ಸಾಹಿತಿ ಕಾದಂಬರಿಕಾರರೊಬ್ಬರು ಟೀಕಿಸಿದ್ದು, ತುಂಬಾ ಹಳೆಯದಾದ ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಚಿತ್ರಗಳನ್ನ ನಿರ್ದೇಶನ ಮಾಡಿದ ನಿರ್ದೇಶಕರಲ್ಲಿ ಭಗವಾನ್ ಕೂಡ ಒಬ್ಬರು. ಇದೇ ಡೈರೆಕ್ಟರ್ ಭಗವಾನ್ ಅವರು ಸಂದರ್ಶನವೊಂದರಲ್ಲಿ ರಾಜ್ ಕುಮಾರ್ ಅವರನ್ನ ಕುರಿತಂತೆ ಕೆಲವೊಂದು ವಿಷಯಗಳನ್ನ ಬಹಿರಂಗ ಮಾಡಿದ್ದು, ಈಗ ಸೋಷಿಯಲ್ ಮೀಡಿಯಾಗಳಲ್ಲಿ ಅದು ವೈರಲ್ ಆಗಿದೆ. ಹೌದು, ಸಂದರ್ಶನದ ಸಮಯದಲ್ಲಿ ರಾಜಣ್ಣನವರ ಕುರಿತಂತೆ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ಹೇಳಿರುವ ಮಾತೆ ಇದಕ್ಕೆ ಕಾರಣವಾಗಿದೆ.

ಖ್ಯಾತ ನಿರ್ದೇಶಕ ಭಗವಾನ್ ಅವರು ತಮ್ಮ ಚಿತ್ರಗಳ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ತನ್ನ ಸಿನಿಮಾಗಳಿಗಾಗಿ ಯಾವೆಲ್ಲಾ ಕವಿ. ಸಾಹಿತಿಗಳನ್ನ ಭೇಟಿ ಮಾಡಿದ್ದೆ ಎಂದು ಮಾತನಾಡುತ್ತಿದ್ದರು. ಇನ್ನು ಆ ಸಮಯದಲ್ಲಿ ರಾಜ್ ಕುಮಾರ್ ಅವರನ್ನ ಹಾಕಿಕೊಂಡು ಹೊಸಬೆಳಕು ಚಿತ್ರ ಮಾಡಬೇಕೆಂದು ಯೋಚಿಸಿದ್ದ ಭಗವಾನ್ ಅವರು ಆ ಚಿತ್ರಕ್ಕೆ ಸೂಕ್ತವಾಗುವಂತಹ ಹಾಡುಗಳನ್ನ ಹುಡುಕುತ್ತಿದ್ದು, ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ “ತೆರೆದಿದೆ ಬಾ ಮನೆ ಓ ಬಾ ಅತಿಥಿ, ಹೊಸ ಬೆಳಕಿನ ಹೊಸ ಬಾಳಿನ” ಕವಿತೆ ಇಷ್ಟವಾಗಿದ್ದು, ಕುವೆಂಪು ಅವರನ್ನ ಸಂಪರ್ಕಿಸಿ ಚಿತ್ರದಲ್ಲಿ ಬಳಸಿಕೊಳ್ಳಲು ಅನುಮತಿ ಕೋರಿದ್ದರೇನಂತೆ. ಆಗ ತತ್ ಕ್ಷಣವೇ ಕುವೆಂಪು ರವರು ಅಯ್ಯೋ ಹಾಕಿಕೊಳ್ಲಪ್ಪಾ, ಅದಕ್ಕೇನು ತೊಂದರೆಯಿಲ್ಲ ಎಂದು ಹೇಳಿದ್ದರಂತೆ.

ಇನ್ನು ರಾಜ್ ಕುಮಾರ್ ಅವರನ್ನ ಹಾಕಿಕೊಂಡು,ಖ್ಯಾತ ಕವಿ ಎಸ್.ಎಲ್.ಭೈರಪ್ಪನವರ ಅವರ ಗ್ರಹಣ ಕಾದಂಬರಿಯನ್ನ ಚಿತ್ರ ಮಾಡುವ ಸಲುವಾಗಿ, ಭೈರಪ್ಪನವರ ಬಳಿ ಪರ್ಮಿಶನ್ ಕೇಳಲು ಹೋಗಿದ್ದರಂತೆ ನಿರ್ದೇಶಕ ಭಗವಾನ್ ಅವರು. ಆಗ ಎಸ್.ಎಲ್.ಭೈರಪ್ಪನವರು”ರಾಜ್ ಕುಮಾರ್ ಒಬ್ಬ ಆಕ್ಟರ್ ಏನ್ರೀ.?” ಅಂತ ಹೇಳಿದ್ದಲ್ಲದೇ, ನಾನು ನನ್ನ ಕಾದಂಬರಿಯನ್ನ ಗಿರೀಶ್ ಕಾರ್ನಾಡ್ ಮತ್ತು ಕಾರಂತ್ ಅವರಿಗೆ ಮಾತ್ರ ಕೊಡೋದು ಅಂತ ಹೇಳಿಬಿಟ್ಟರಂತೆ.

ಆಗ ಭಗವಾನ್ ಅವರು ಸ್ವಾಮಿ ನಿಮ್ಮ ಕಾದಂಬರಿಗಳನ್ನ ನಿಮಗೆ ಯಾರಿಗೆ ಬೇಕೋ ಅವರಿಗೆ ಕೊಟ್ಕೊಳ್ಳಿ ಅಂತ ಹೇಳಿ ಅಲ್ಲಿಂದ ಎದ್ದು ಬಂದುಬಿಟ್ಟರಂತೆ. ನಮಗೆ ಕೊಡೋದಿಲ್ಲ ಅಂತ ಹೇಳಿದ್ದರೆ ಸಾಕಿತ್ತು, ದೊಡ್ಡ ಮನುಷ್ಯರಾಗಿ ಈ ರೀತಿ ಅವಮಾನ ಮಾಡುವ ಅವಶ್ಯಕೆತೆ ಇರಲಿಲ್ಲ ಎಂದು ನಿರ್ದೇಶಕ ಭಗವಾನ್ ಅವರು ಹೇಳಿದ್ದಾರೆ.