ನನಗಿನ್ನೂ ಮಕ್ಕಳಾಗಿಲ್ಲ, ನನ್ನ ಗಂಡನ ಬಳಿ ಕರೆದುಕೊಂಡು ಹೋಗಿ ಎಂದು ಮೋದಿ ಬಳಿ ಮನವಿ ಮಾಡಿಕೊಂಡ ನಟಿ..

Advertisements

ಇಡೀ ದೇಶ ಲಾಕ್ ಡೌನ್ ಆಗಿದ್ದು ಯಾರೂ ಮನೆ ಬಿಟ್ಟು ಹೊರಬರುವಂತಿಲ್ಲ. ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಮಾತ್ರ ಹೊರಬರಬಹುದಾಗಿದೆ. ಇದರ ನಡುವೆ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ನನ್ನನ್ನ ನನ್ನ ಗಂಡನ ಬಳಿಗೆ ಕರೆದುಕೊಂಡು ಹೋಗಿ ಎಂದು ಪ್ರಧಾನಿ ಮೋದಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ.

Advertisements

ಹೌದು, ಮುಂಬೈನಲ್ಲಿ ಈಗಾಗಲೇ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿದ್ದು. ಇದರಿಂದ ಆತಂಕಕ್ಕೆ ಒಳಗಾಗಿರುವ ನಟಿ ರಾಖಿ ಸಾವಂತ್ ಮುಂಬೈನಲ್ಲಿ ಸದ್ಯಕ್ಕೆ ಕೊರೋನಾ ಕಡಿಮೆ ಆಗುತ್ತಿಲ್ಲ. ಮೋದಿ ಜಿಯವರೇ ದಯವಿಟ್ಟು ನನ್ನನ್ನ ಹೆಲಿಕಾಪ್ಟರ್ ನಲ್ಲೋ, ಇಲ್ಲವೋ ಪ್ರೈವೇಟ್ ಜೆಟ್ ನಲ್ಲೋ ಮುಂಬೈನಿಂದ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ನಾನು ಕೇವಲಕೆಲವು ತಿಂಗಳುಗಳ ಹಿಂದಷ್ಟೇ ಮದುವೆಯಾಗಿದ್ದು, ಈಗ ನಾನು ಮಾತ್ರ ಮನೆಯಲ್ಲಿ ಬಂಧಿಯಾಗಿದ್ದೇನೆ. ನನಗಿನ್ನೂ ಮಕ್ಕಳು ಕೂಡ ಆಗಿಲ್ಲ.ಹಾಗಾಗಿ ನನ್ನನ್ನ ನನ್ನ ಪತಿಯ ಬಳಿಗೆ ಕರೆದುಕೊಂಡು ಹೋಗಿ ಬಿಟ್ಟು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಮುಂಬೈನಲ್ಲಿ ಕೆಲವು ತಿಂಗಳುಗಳ ಮಟ್ಟಿಗೆ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇಲ್ಲ.ಆದರೆ ಗುಡಿಸಿಲಿನಲ್ಲಿ ವಾಸ ಮಾಡುತ್ತಿರುವವರು ಸುಮ್ಮನೆ ಹೊರಗಡೆ ಬಂದು ಓಡಾಡುತ್ತಿದ್ದಾರೆ. ಅವರಿಂದಾನೆ ಕೊರೋನಾ ಹೆಚ್ಚಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ ರಾಖಿ ಸಾವಂತ್.