ನಟಿ ರಶ್ಮಿಕಾ ಕುರಿತಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ರಕ್ಷಿತ್ ಶೆಟ್ಟಿ ಕೇಳಿಕೊಂಡಿದ್ದೇನು ಗೊತ್ತಾ ?

Cinema

ಸ್ನೇಹಿತರೇ, ಮೊನ್ನೆಯಷ್ಟೇ ತನ್ನ ೩೮ನೇ ವರ್ಷದ ಹುಟ್ಟುಹಬ್ಬವನ್ನ ತುಂಬಾ ಸರಳವಾಗಿ ಆಚರಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಲೈವ್ ಬಂದಿದ್ದು ಅಭಿಮಾನಿಗಳ ಜೊತೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಇದೆ ವೇಳೆ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರಗಳಾದ 777ಚಾರ್ಲಿ ಸಿನಿಮಾದ ಟೀಸರ್ ಹಾಗೂ ಮತ್ತೊಂದು ಮುಂದಿನ ಚಿತ್ರ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಮೊದಲ ಲುಕ್ ಬಿಡುಗಡೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಅಭಿಮಾನಿಗಳ ಜೊತೆ ಮಾತನಾಡೋ ವೇಳೆ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಹಾಗೂ ಸಿನಿಮಾಗಳ ಬಗ್ಗೆ ಪ್ರಶ್ನೆಗಳನ್ನ ಕೇಳಿದ್ದು, ರಕ್ಷಿತ್ ಅವರ ಮದುವೆ ಸೇರಿದಂತೆ ಅವರ ವೈಯುಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳನ್ನ ಕೇಳಿದ್ದಾರೆ.

ಇನ್ನು ಮದ್ವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಿಂದ ಬಂದಾಗ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರೋ ಸಿಂಪಲ್ ಸ್ಟಾರ್ ರಕ್ಷಿತ್, ಸಮಾಜಿಕ ಜಾಲತಾಣಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕುರಿತಂತೆ ಪದೇ ಪದೇ ಬರುತ್ತಿರುವ ಕಾಮೆಂಟ್ ಗಳ ಬಗ್ಗೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಮಾತನಾಡಿದ್ದಾರೆ ನಟ ರಕ್ಷಿತ್ ಶೆಟ್ಟಿ. ಹೌದು, ರಶ್ಮಿಕಾ ಕುರಿತಂತೆ ಬರುತ್ತಿರೋ ಕಾಮೆಂಟ್ ಗಳನ್ನ ನೋಡಿದ್ರೆ ತುಂಬಾ ಬೇಸರವಾಗುತ್ತೆ. ಅದೆಲ್ಲಾ ಮುಗಿದು ಹೋಗಿರುವ ವಿಚಾರ. ಮತ್ತೆ ಮತ್ತೆ ಆಗಿ ಹೋದ ವಿಚಾರದ ಬಗ್ಗೆ ಮಾತನಾಡಿದ್ರೆ ಪ್ರಯೋಜನ ಇಲ್ಲ.

ಯಾವುದೇ ವ್ಯಕ್ತಿಯ ಬಗ್ಗೆ ಅಸಹ್ಯವಾಗಿ ಕಾಮೆಂಟ್ ಗಳನ್ನ ಮಾಡುವುದು, ಅಗೌರವ ರೀತಿಯಲ್ಲಿ ಮಾತನಾಡುವುದು ಸರಿ ಇಲ್ಲ. ಎಲ್ಲರಿಗು ಗೌರವ ಕೊಟ್ಟು ನಾವು ಮಾನವರಾಗೋಣ. ನಾನು ಇನ್ನು ಮುಂದೆ ನನ್ನ ಕಾಮೆಂಟ್ ಬಾಕ್ಸ್ ನಲ್ಲಿ ಒಳ್ಳೆ ರೀತಿಯ ಕಾಮೆಂಟ್ ಗಳನ್ನ ನೋಡಲು ಇಷ್ಟಪಡುತ್ತೇನೆ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ನಟ ರಕ್ಷಿತ್ ಶೆಟ್ಟಿ. ಇನ್ನು ಯಾರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಲಾಗಿದೆ ಎಂಬುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ. ಅವರೇ ನಟಿ ರಶ್ಮಿಕಾ ಮಂದಣ್ಣ. ಅವರ ಹೆಸರನ್ನ ಹೇಳದೆ ತಮ್ಮ ಅಭಿಮಾನಿಗಳಲ್ಲಿ ಮನವಿಯೂ ಮಾಡಿಕೊಂಡಿರುವ ರೀತಿಗೆ ನಟ ರಕ್ಷಿತ್ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದಿದೆ.