ರಶ್ಮಿಕಾ ಈಗ ಜೊತೆಗಿದ್ದಿದ್ದರೆ ಆಕೆಗೆ ಈ ಒಂದು ಉಡುಗೊರೆ ಕೊಡುತ್ತಿದ್ದರಂತೆ ರಕ್ಷಿತ್.?

Cinema

ರಕ್ಷಿತ್ ಶೆಟ್ಟಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಸ್ಟಾರ್ ನಟ. ಇತ್ತೀಚಿಗೆ ಅವರ ಅವನೇ ಶ್ರೀಮನ್ನಾರಾಯಣ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ನಟಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಮದುವೆಯವರೆಗೂ ಹೋಗಿ ನಂತರ ತಮ್ಮ ಸಂಬಂಧ ಮುರಿದುಕೊಂಡಿದ್ದು, ಈ ವಿಷವಾಗಿ ರಕ್ಷಿತ್ ಅಭಿಮಾನಿಗಳು ಸಾಮಾಜಿಕ ಜಾಲ ತಾಣದಲ್ಲಿ ರಶ್ಮಿಕಾಳನ್ನು ಹಿಗ್ಗಾ ಮುಗ್ಗಾ ಬೈದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಇದೇ ಕಾರಣಕ್ಕೆ ರೋಸಿ ಹೋದ ನಟ ಸೋಶಿಯಲ್ ಮೀಡಿಯಾಗಳಿಗೆ ಗುಡ್ ಬೈಯ್ ಹೇಳಿ ಹೋಗಿದ್ದರು. ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ಮರಳಿ ಬಂದಿದ್ದರು. ರಕ್ಷಿತ್ ಅಭಿಮಾನಿಗಳು ಮಾತ್ರವಲ್ಲ ಕನ್ನಡಾಭಿಮಾನಿಗಳು ರಶ್ಮೀಕ ವಿರುದ್ಧ ರಕ್ತ ಕಾರುತ್ತಾರೆ. ಕಾರಣ ಆಕೆಗೆ ಕನ್ನಡ ದ ಮೇಲೆ ಇರುವ ತಾತ್ಸಾರ ಮತ್ತು ಅಗೌರವ. ಇದೇ ವಿಷಯವಾಗಿ ಆಕೆ ಟ್ರೊಲ್ ಗಳಿಗೆ ಗುರಿಯಾಗಿದ್ದಾಳೆ. ಆಕೆಯ ವಿರುದ್ಧ ಸುದ್ದಿ ಲೇಖನಗಳು ಮೂಡಿ ಬಂದಿವೆ. ಈ ವಿಷವಾಗಿ ಆಕೆಎಷ್ಟೇ ಮಾತನಾಡಿದ್ದರು..ರಕ್ಷಿತ್ ಮಾತ್ರ ಆಕೆಯ ಬಗ್ಗೆ ಒಂದು ಮಾತು ಆಡಿರಲಿಲ್ಲ.

ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ತಾನು ಕ್ರಿಸ್ಮಸ್ ಗೆ ರಶ್ಮೀಕಾಗೆ ಉಡುಗೊರೆ ನೀಡಿದ್ದರೆ ಅದು ಆಕೆಯ ಕನಸೆಲ್ಲ ನನಸಾಗಲಿ ಎಂದು ಸಂತನಲ್ಲಿ ಕೇಳಿಕೊಳ್ಳುತ್ತಿದ್ದೆ ಎಂದಿದ್ದಾರೆ. ಅಲ್ಲದೆ ಜೀವನದಲ್ಲಿ ಇಂತಹ ನೋವುಗಳು ಸಹಜ. ಇದರಿಂದ ಪಾಠ ಕಲಿತು ನಾವು ಮುಂದೆ ಸಾಗಬೇಕು. ದ್ವೇಷ ದಿಂದ ಏನೂ ಪ್ರಯೋಜನವಿಲ್ಲ ನೆಮ್ಮದಿಯೂ ಇಲ್ಲ ಎಂದಿದ್ದಾರೆ. ನಡೆದಿದ್ದು ಮುಗಿದು ಹೋದ ಅಧ್ಯಾಯ. ಅದರಿಂದ ನಾನು ತುಂಬಾ ನೋವು ಅನುಭವಿಸಿದ್ದೇನೆ. ಪಾಠವನ್ನೂ ಕಲಿತಿದ್ದೇನೆ ಎಂದಿದ್ದಾರೆ.