33ವರ್ಷಗಳ ಬಳಿಕವೂ ಅತೀ ದೊಡ್ಡ ದಾಖಲೆ ಸೃಷ್ಟಿಸಿದ ರಾಮಾಯಣ..

Entertainment
Advertisements

ಕೊರೋನಾ ಸೋಂಕು ಹಿನ್ನಲೆಯಲ್ಲಿ ದೇಶದಾದ್ಯಂತವೂ ಲಾಕ್ ಡೌನ್ ಆಗಿದ್ದು, ಜನರು ಹೊರಗಡೆ ಬರದೇ, ಮನೆಯಲ್ಲೇ ಇರಬೇಕಾಗಿದೆ. ಅದು ೨೧ ದಿನಗಳ ಕಾಲ. ಇನ್ನು ಮನೆಯಲ್ಲೇ ಇದ್ದು ಜನರಿಗೆ ಸಮಯ ಕಳೆಯುವುದು ತುಂಬಾ ಕಷ್ಟದ ಕೆಲಸವಾಗಿದೆ.

Advertisements

ಹೀಗಾಗಿಯೇ ೮೦ರ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯನ್ನ ಮತ್ತೆ ಮರು ಪ್ರಸಾರಮಾಡಬೇಕೆಂದು ಜನರು ಕೇಳಿಕೊಂಡಿದ್ದರು. ಅದರಂತೆ ಡಿಡಿ ನ್ಯಾಷನಲ್ ಚಾನೆಲ್ ನಲ್ಲಿ ಬೆಳಿಗ್ಗೆ ೯ ರಿಂದ ೧೦ ಮತ್ತೆ ರಾತ್ರಿ ೯ರಿಂದ ೧೦ ಗಂಟೆಯ ಸಮಯದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಇನ್ನು ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಸೂಪರ್ ಹಿಟ್ ಆಗಿದೆ. ಅತೀ ಹೆಚ್ಚು ಜನ ವೀಕ್ಷಕರನ್ನ ತನ್ನ ಕಡೆ ಸೆಳೆಯುತ್ತಿದೆ. ಇನ್ನು ಕಳೆದ ಶನಿವಾರ, ಭಾನುವಾರವಷ್ಟೇ ಒಟ್ಟು ನಾಲ್ಕು ಎಪಿಸೋಡ್ ಗಳು ಪ್ರಸಾರವಾಗಿದ್ದು ಬರೋಬ್ಬರಿ ೧೭ಕೋಟಿ ಜನರು ವೀಕ್ಷಣೆ ಮಾಡಿದ್ದು, ಸೂಪರ್ ಹಿಟ್ ಆಗಿದೆ.

ಇನ್ನು ಚಾನೆಲ್ ಮುಖ್ಯಸ್ಥರೇ ಈ ಅಂಕಿ ಅಂಶಗಳನ್ನ ಕೊಟ್ಟಿದ್ದು, ಶನಿವಾರ ಪ್ರಸಾರವಾದ ರಾಮಾಯಣ ಸೀರಿಯಲ್ ನ್ನ ಶನಿವಾರ ಬೆಳಿಗ್ಗೆ ೩.೪ ಕೋಟಿ ಜನರು ವೀಕ್ಷಣೆ ಮಾಡಿದ್ದು, ಅದೇ ಶನಿವಾರ ಸಾಯಂಕಾಲ ೪.೫ ಕೋಟಿ ಜನರು ರಾಮಾಯಣವನ್ನ ವೀಕ್ಷಣೆ ಮಾಡಿದ್ದಾರೆ. ಇನ್ನು ಭಾನುವಾರ ಪ್ರಸಾರವಾದ ರಾಮಾಯಣ ಎಪಿಸೋಡ್ ನ್ನ ಬೆಳಿಗ್ಗೆ ೪.೫ ಕೋಟಿ ಜನ ವೀಕ್ಷಣೆ ಮಾಡಿದ್ದರೆ, ರಾತ್ರಿಯ ಎಪಿಸೋಡ್ ನ್ನ ೫.೧ ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.