ಬಾಲಕಿ ಹಸಿವು ಅಂತ ಕೇಳಿದ್ರು ಕ್ಯಾರೇ ಅನ್ನದ ರಶ್ಮಿಕಾ.!ವಿಡಿಯೋ ನೋಡಿ ಗರಂ ಆದ ನೆಟ್ಟಿಗರು..

Advertisements

ಕನ್ನಡದ ಕಿರಿಕ್ ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದಾರೆ. ಆದ್ರೆ ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಟ್ರಾಲ್ ಗೆ ಒಳಗಾಗೋದು ಇದೇನು ಮೊದಲಲ್ಲ. ಕನ್ನಡದ ಭಾಷೆಯ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ರಶ್ಮಿಕಾ ಮಂದಣ್ಣ ಹಲವು ಬಾರಿ ಕನ್ನಡಿಗರ ಆ’ಕ್ರೋಶಕ್ಕೆ ಗುರಿಯಾಗಿದ್ದು ಉಂಟು. ಇನ್ನು ಇತ್ತೀಚೆಗಷ್ಟೇ ಮುಂಬೈನಲ್ಲಿ ಮಾಡಿಕೊಂಡಿರುವ ಯಡವಟ್ಟಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಿಮಗೆ ಮಾನವೀಯತೆ ಇಲ್ಲವೇ ಎಂದು ನೆಟ್ಟಿಗರು ರಶ್ಮಿಕಾ ಮೇಲೆ ಕಿ’ಡಿಕಾರಿದ್ದಾರೆ.

[widget id=”custom_html-4″]

ಹೌದು, ಇತ್ತೀಚೆಗಷ್ಟೇ ಮುಂಬೈನ ರೆಸ್ಟೋರೆಂಟ್ ಗೆ ಹೋಗಿದ್ದ ರಶ್ಮಿಕಾ ಮಂದಣ್ಣ ಹೊರಬರುವ ವೇಳೆ ಕೆಲ ಬಾಲಕಿಯವರು ಅವರನ್ನ ಸುತ್ತುವರಿದಿದ್ದಾರೆ. ಮುಂದುವರೆದು ಅವರನ್ನ ಮಾತನಾಡಿಸುತ್ತಾ ನೀವು ಸಿನಿಮಾದಲ್ಲಿ ಮಾಡಿದ್ದೀರಾ ಎಂದು ಕೇಳಿದ್ದು, ರಶ್ಮಿಕಾ ಅವರನ್ನ ಮಾತನಾಡಿಸಿದ್ದಾರೆ. ಇದೆ ವೇಳೆ ಮತ್ತೊಬ್ಬ ಬಾಲಕಿ ನನಗೆ ಹೊಟ್ಟೆ ಹಸಿದಿದ್ದು, ಊಟ ಮಾಡಬೇಕೆಂದು ಕೈ ಸನ್ನೆ ಮಾಡುವ ಮೂಲಕ ಬೇಡಿಕೊಂಡಿದ್ದಾಳೆ. ಆದ್ರೆ ಆ ಬಾಲಕಿ ಬೇಡುತ್ತಿದ್ದರು ರಶ್ಮಿಕಾ ಮಂದಣ್ಣ ಅದನ್ನ ನೋಡಿದ್ರೂ ಆ ಬಾಲಕಿಯ ಮಾತಿಗೆ ಏನೂ ಪ್ರತಿಕ್ರಿಯೆ ನೀಡದೆ ಕಾರ್ ಹತ್ತಿದ್ದಾರೆ.

[widget id=”custom_html-4″]

[widget id=”custom_html-4″]

[widget id=”custom_html-4″]

ಆ ಬಾಲಕಿ ಅಷ್ಟು ಬೇಡಿಕೊಂಡಿದ್ದರೂ, ಸ್ವಲ್ಪ ಹಣ ಕೂಡ ಕೊಡದೆ, ಕಾರ್ ಹತ್ತಿ ಹೋಗಿದ್ದಾರೆ ರಶ್ಮಿಕಾ ಮಂದಣ್ಣ. ಇನ್ನು ರಶ್ಮಿಕಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೋಟ್ಯಂತರ ರೂಪಾಯಿ ಗಳಿಸಿರುವ ರಶ್ಮಿಕಾ ಆ ಬಾಲಕಿಗೆ ಸ್ವಲ್ಪ ಸಹಾಯ ಮಾಡುವ ಯೋಗ್ಯತೆ ಇಲ್ಲವಾ ಎಂದು ನೆಟ್ಟಿಗರು ಕಿ’ಡಿಕಾರಿದ್ದು, ಸ್ಟಾರ್ ನಟಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆ ಬಾಲಕಿಯರು ಏನೋ ಕೇಳುತ್ತಿದ್ದಾರೆ, ಮತ್ತೊಬ್ಬ ಬಾಲಕಿ ಹೊಟ್ಟೆ ಹಸಿವು ಎಂದು ಬೇಡಿಕೊಳ್ಳುತ್ತಿದ್ದಾರೆ.

[widget id=”custom_html-4″]

ಆದರೆ ಸ್ವಲ್ಪ ಹಣ ಕೂಡ ಕೊಡದೆ ಆಗೇ ಹೋದ ರಶ್ಮಿಕಾ ಅವರಿಗೆ ಹೃದಯವೇ ಇಲ್ವಾ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ. ಮತ್ತೊಬ್ಬರು ನೆಟ್ಟಿಗ, ನಾವು ಇಂತಹವರ ಸಿನಿಮಾಗಳನ್ನ ನೋಡಿ ಅವರು ಕೋಟ್ಯಂತರ ಹಣ ಗಳಿಸುವಂತೆ ಅಲ್ಲವಾ..ನಮಗೆ ಬುದ್ದಿ ಇಲ್ಲಾ ಎಂದು ಕೋಪದಿಂದ ಮಾತನಾಡದಿದ್ದಾರೆ. ಸ್ನೇಹಿತರೆ, ಈಗಾಗ್ಲೇ ಕನ್ನಡದ ವಿಷಯವಾಗಿ ಕನ್ನಡಿಗರ ಕೋ’ಪಕ್ಕೆ ಗುರಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಈ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-4″]