ರಕ್ಷಿತ್ ಶೆಟ್ಟಿಯನ್ನು ರಶ್ಮಿಕ ರಾತ್ರಿ 2 ಗಂಟೆಗೆ ಮನೆಯಿಂದ ಹೊರ ಹಾಕಿದ್ದು ನಿಜಾನಾ !ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು..

Cinema
Advertisements

ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಕನ್ನಡದ ಪ್ರಸಿದ್ಧ ಖಾಸಗಿ ಸುದ್ದಿವಾಹಿನಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಸುದ್ದಿ ವಾಹಿನಿಯ ಕಚೇರಿ ಮುಂದೆ ಹೋಗಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದಕ್ಕೆ ಕಾರಣ ಆ ವಾಹಿನಿ ರಕ್ಷಿತ್ ಶೆಟ್ಟಿ ಮೇಲೆ ಪ್ರಸಾರ ಮಾಡಿದ ಒಂದು ಟಿವಿ ಕಾರ್ಯಕ್ರಮ. ಇದರಲ್ಲಿ ಅವರು ರಕ್ಷಿತ್ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತಾ ವೈಯಕ್ತಿಕವಾಗಿಯೂ ದಾಳಿ ಮಾಡಿದ್ದಾರೆ. ನಟ ನಟಿಯರು ರಾಜಕಾರಣಿಗಳು ಸಿನಿಮಾ ತಾರೆಯರು ಮುಂತಾದ ಪ್ರಸಿದ್ಧ ವ್ಯಕ್ತಿಗಳ ಕುರಿತು ಸುದ್ದಿ ವಾಹಿನಿಗಳು ಕಾರ್ಯಕ್ರಮಗಳನ್ನು ಮಾಡುವುದು ಹೊಸದಲ್ಲ. ಅವರ ವೃತ್ತಿ ಹಾಗೂ ವಯಕ್ತಿಕ ಬದುಕಿನಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳನ್ನ ಪ್ರಸಾರ ಮಾಡುತ್ತವೆ. ಅಂತಹ ಸಂದರ್ಭದಲ್ಲಿ ತಾರೆಯರ ಮೇಲೆ ಋಣಾತ್ಮಕವಾಗಿ ಮಾತನಾಡುವುದು ಅಸಜವಲ್ಲ. ಏಕೆಂದರೆ ಸಮಯ ಸಂದರ್ಭಗಳಿಗೆ ತಕ್ಕಂತೆ ಅವರು ಮಾತನಾಡುತ್ತಾರೆ. ಉದಾಹರಣೆಗೆ ಯಾವುದೋ ಹೀರೋ ತನ್ನ ಹೆಂಡತಿಗೆ ಕಿ’ರುಕು’ಳ ನೀಡಿ ಅಥವಾ ಡೈವರ್ಸ್ ಗಾಗಿ ಕೋರ್ಟ್ ಮೆಟ್ಟಿಲು ಏರಿದರೆ ಆಗ ಅದನ್ನು ಖಂಡಿಸಿ ಋಣಾತ್ಮಕವಾಗಿ ವರದಿ ಮಾಡುತ್ತವೆ.

[widget id=”custom_html-4″]

Advertisements

ಯಾರದಾದರೂ ಮನೆಯ ಮೇಲೆ ಐಟಿ ರೈಡ್ ಆದಾಗ, ವೃತ್ತಿ ಬದುಕು ವಯಕ್ತಿಕ ಬದುಕಿನಲ್ಲಿ ಸಿಹಿ ಅಥವಾ ಕಹಿ ಘ’ಟನೆಗಳು ನಡೆದಾಗ ನೇರ ನೇರವಾಗಿ ವರದಿ ಮಾಡುವುದು ತಪಲ್ಲ. ಆದರೆ ಇಲ್ಲಿಯ ವಿಷಯ ಬೇರೆಯೇ ಇದೆ. ಯಾವುದೇ ಕರಾಣವಿಲ್ಲದೇ, ಸಮಯ ಸಂದರ್ಭ ಇಲ್ಲದೆ ಇದ್ದಕಿದ್ದಂತೆ ಖಾಸಗಿ ಸುದ್ದಿ ವಾಹಿನಿಯೊಂದು ರಕ್ಷಿತ್ ಶೆಟ್ಟಿ ಮೇಲೆ ದಾಳಿ ಮಾಡಿದೆ. ಅವರ ಕುರಿತು ಅ’ವಹೇಳನ ಕಾರಿ ಕಾರ್ಯಕ್ರಮ ಒಂದನ್ನು ಪ್ರಾಸಾರ ಮಾಡಿದೆ. ಅದರಲ್ಲಿ ನಟ ಸಿಂಪಲ್ ಸ್ಟಾರ್ ರಕ್ಷಿತ್ ಅವರ ತೇಜೋವ’ಧೆ ಮಾಡಲಾಗಿದೆ. ರಕ್ಷಿತ್ ಶೆಟ್ಟಿಯವರು ಮಧ್ಯ ವಯಸ್ಸಿನಲ್ಲಿ ಸಿನಿಮಾ ಹುಚ್ಚು ಇಟ್ಟುಕೊಂಡು ಬೆಂಗಳೂರಿಗೆ ಬಂದರಂತೆ. ಅವರಿಗೆ ಯಶಸ್ಸು ತಂದುಕೊಟ್ಟ ಚಿತ್ರಗಳು ಕೇವಲ ನಿರ್ದೇಶಕರ ಪ್ರತಿಭೆಯಿಂದ ಗೆದ್ದಿವೆಯಂತೆ.. ರಕ್ಷಿತ್ ಅವರ ನಟನೆ ಅಷ್ಟಕ್ಕೇ ಅಷ್ಟೇಯೆ. ಯೋಗ್ ರಾಜ್ ಭಟ್ ಅಂತಹ ಪ್ರತಿಭಾವಂತ ನಿರ್ದೇಶಕ ರಕ್ಷಿತ್ ಅವರನ್ನು ಜನಪ್ರಿಯ ನಾಯಕ ಮಾಡಲು ಪ್ರಯತ್ನಿಸಿದರೂ ಅವರ ಮುಖ ವನ್ನೂ ಜನರು ನೊಡಲಿಲ್ಲವಂತೆ. ಪ್ರತಿಭಾವಂತ ನಿರ್ದೇಶಕ ರಿಷಬ್ ರಿಷಬ್ ಶೆಟ್ಟಿಯ ಪ್ರಯತ್ನದ ಫಲವಾಗಿ ಕಿರಿಕ್ ಪಾರ್ಟಿ ದೊಡ್ಡ ಮಟ್ಟದಲ್ಲಿ ಯಶಸ್ಸು ಖಂಡಿತಂತೆ. ಆದರೆ ರಕ್ಷಿತ್ ಶೆಟ್ಟಿ ತನ್ನಿಂದಲೇ ಕಿರಿಕ್ ಪಾರ್ಟಿ ಚಿತ್ರ ಗೆದ್ದಿತೆಂದು ಬೀಗಿದರಂತೆ. ರಕ್ಷಿತ್ ಸ್ವಘೋಷಿತ ಸಿಂಪಲ್ ಸ್ಟಾರ್ ಅಂತೆ. ನಾನು ನಾನು ಎಂಬ ಅಹಂಕಾರದಿಂದಹಾಳಾದರಂತೆ.

[widget id=”custom_html-4″]

ಇನ್ನು ರಕ್ಷ್ಮಿಕ ಮಂದಣ್ಣ ಕೈ ಕೊಟ್ಟಳು ಎಂಬ ಕಾರಣಕ್ಕೆ ಪ್ಯಾನ್ ಇಂಡಿಯಾ ಚಿತ್ರ ಮಾಡುತ್ತೇನೆ ಎಂದು ಅಹಂಕಾರದಿಂದ ಅವನೇ ಶ್ರೀಮಾನ್ ನಾರಾಯಣ ಚಿತ್ರ ಮಾಡಿ ಸೋತರಂತೆ. ನಿರ್ದೇಶಕರಿಗೆ ಸರಿಯಾಗಿ ಕೆಲಸ ಮಾಡಲು ಬಿಡದೆ ತಮ್ಮ ಕೈ ಚಳಕ ತೋರಿಸಿ ಅವನೇ ಶ್ರೀಮಾನ್ ನಾರಾಯಣ ಚಿತ್ರವನ್ನು ಕೆಡಿಸಿದರಂತೆ. ಅಷ್ಟೇ ಅಲ್ಲದೆ ನಿರ್ಮಾಪಕರು ಸಿನಿಮಾ ಪ್ರಚಾರಕ್ಕೆ ಕೊಟ್ಟ ಹಣವನ್ನು ತಿಂದು ಹಾಕಿದರಂತೆ. ನಿರ್ಮಾಪಕರಿಗೆ ದ್ರೋಹ ಬಗೆದರಂತೆ. ಆದ್ದರಿಂದಲೇ ನಿರ್ಮಾಪಕ ಪುಷ್ಕರ್ ಮಾಲಿಕಾರ್ಜುನ್ ತಾವು ಒಪ್ಪಿಕೊಂಡಿದ್ದ ರಕ್ಷಿತ್ ಅವರ ಚಿತ್ರಗಳನ್ನು ಕೈ ಬಿಟ್ಟರಂತೆ. ಹೀಗೆ ಸುದ್ದಿ ವಾಹಿನಿಯು ಜಿದ್ದಿಗೆ ಬಿದ್ದಂತೆ ಏಕಾಏಕಿ ರಕ್ಷಿತ್ ಶೆಟ್ಟಿಯವರ ಬಗ್ಗೆ ಅವಹೇಳನ ಮಾಡಿದೆ. ಇಷ್ಟೇ ಸಾಲದು ಎಂಬಂತೆ ರಶ್ಮೀಕ ಮಂದಣ್ಣ ರಕ್ಷಿತ್ ಶೆಟ್ಟಿಯನ್ನು ರಾತ್ರಿ ಎರಡುವರೆ ಗಂಟೆಗೆ ಹೈದ್ರಾಬಾದ್ ನಲ್ಲಿ ತಮ್ಮ ಮನೆಯಿಂದ ಹೊರ ಹಾಕಿದರು ಎಂದು ಹೇಳಿದೆ ನಂತರ ಅವರು ಇಂತಹ ಕೀ’ಳು ವ್ಯಕ್ತಿಯ ಜೊತೆ ಜೀವನ ನಡೆಸುವುದಕ್ಕಿಂತ ತಮ್ಮ ಪಾಡಿಗೆ ಇರುವುದೇ ಲೇಸೆಂದು ತಮ್ಮ ಮದುವೆ ಮುರಿದು ಈಗ ಟಾಲಿವುಡ್ ಬಾಲಿವುಡ್ ನಲ್ಲಿ ನಾಯಕಿಯಾಗಿ ಮಿಂಚುತಿದ್ದಾರೆ ಎಂದು ಹೇಳಿದೆ.

[widget id=”custom_html-4″]

ರಶ್ಮಿಕಾ ರಕ್ಷಿತ್ ಯಿಂದ ದೂರವಾಗಲು ರಕ್ಷಿತ್ ಶೆಟ್ಟಿಯ ಧು’ರ್ವರ್ತನೆ ಕಾರಣವಂತೆ. ಹೀಗೆ ಕಾರ್ಯಕ್ರಮದ ಉದ್ದಕ್ಕೂ ರಕ್ಷಿತ್ ಅವರ ಘನತೆಗೆ ಹಾನಿಯಾಗುವ ಪದಗಳನ್ನೇ ಬಳಸುತ್ತ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದರಿಂದ ಕೋಪಗೊಂಡ ಅಭಿಮಾನಿಗಳು ಸುದ್ದಿ ವಾಹಿನಿಯನ್ನು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ರಕ್ಷಿತ್ ಅವರು ಬೇಕಂತಲೇ ಆ ವಾಹಿನಿ ಹೀಗೆ ಮಾಡಿದೆ. ಎರಡು ವರ್ಷಗಳಿಂದ ತನ್ನನು ಟಾರ್ಗೆಟ್ ಮಾಡುತ್ತಿದೆ ಇದಕ್ಕೆ ಉತ್ತರವನ್ನು ಜುಲೈ 11 ರಂದು ಕೊಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿದ್ದಾರೆ. ಕನ್ನಡದ ಇತರೆ ಕಲಾವಿದರೂ ರಕ್ಷಿತ್ ಪರ ನಿಂತಿದ್ದಾರೆ. ಇತ್ತ ಕನ್ನಡದವರೇ ಕನ್ನಡದವರು ತುಳಿದರೆ ಕನ್ನಡ ಚಿತ್ರರಂಗ ಕಲಾವಿದರು ಹೇಗೆ ಉದ್ದಾರ ಆಗುತ್ತಾರೆ ಎಂದು ಜನರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.