ಕೊ’ರೋನಾದಿಂದ ಸ’ತ್ತ ತನ್ನ ಉದ್ಯೋಗಿಗೆ ಟಾಟಾ ಕಂಪನಿ ಮಾಡಿದ ಕೆಲಸ ನೋಡಿ ಇಡೀ ದೇಶವೇ ಗ್ರೇಟ್ ಎನ್ನುತ್ತಿದೆ !

Kannada News
Advertisements

ಸ್ನೇಹಿತರೇ, ದೇಶದ ಹಲವಾರು ರಾಜ್ಯಗಳಲ್ಲಿ ಇನ್ನು ನಿಯಂತ್ರಣಕೆ ಬಾರದೆ ಕಾಡುತ್ತಿರುವ ಮಹಾಮಾ’ರಿ ಕೊ’ರೋನಾಗೆ ಸಾವಿರಾರು ಜನರು ಜೀವ ಕಳೆದುಕೊಂಡಿದ್ದು, ತಮ್ಮವರನ್ನ ಕಳೆದುಕೊಂಡ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ದಿನಗೂಲಿ ಕಾರ್ಮಿಕರಿಂದ ಹಿಡಿದು, ಬೀದಿ ವ್ಯಾಪರರಿಗಳು, ಉದ್ಯೋಗಿಗಳು ಹೀಗೆ ಹಲವು ವರ್ಗದ ಜನರು ಈ ಸೋಂಕಿಗೆ ಜೀವ ತೆತ್ತಿದ್ದಾರೆ. ಇನ್ನು ಕೆಲ ಕಂಪನಿಗಳು ಈ ಕೊ’ರೋನಾ ದಿನದ ಜೀವ ಕಳೆದುಕೊಂಡ ತಮ್ಮ ಉದ್ಯೋಗಿಗಳ ಕುಟುಂಬಗಳಿಗೆ ಇನ್ಸೂರೆನ್ಸ್ ಸೇರಿದಂತೆ ಹಲವಾರು ರೀತಿಯಲ್ಲಿ ಪರಿಹಾರವನ್ನ ನೀಡಿದೆ. ಆದರೆ ಈಗ ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಎನಿಸಿರುವ ಟಾಟಾ ಕಂಪನಿಯು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೇ ಒಂದು ದೊಡ್ಡ ಹೆಜ್ಜೆ ಮುಂದಕ್ಕೆ ಹೋಗಿದೆ.

[widget id=”custom_html-4″]

ಹೌದು, ಟಾಟಾ ಗ್ರೂಪ್ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರಿಗೆ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಾರಣ ತಮ್ಮ ಜೀವ ಕಳೆದುಕೊಂಡಿದ್ದರು. ಇನ್ನು ಬೀದಿಗೆ ಬೀಳಬೇಕಿದ್ದ ತಮ್ಮ ಕಂಪನಿಯ ಉದ್ಯೋಗಿಯ ಕುಟುಂಬದ ಜೊತೆ ನಿಂತಿರುವ ಟಾಟಾ ಸ್ಟೀಲ್ ಕಂಪನಿ ಇಡೀ ದೇಶ ಗ್ರೇಟ್ ಎನ್ನುವಂತಹ ಕೆಲಸ ಮಾಡಿದೆ. ಹೌದು, ಬೇರೆ ಕಂಪೆನಿಗಳಿಗಿಂತ ಒಂದೆಜ್ಜೆ ಮುಂದೆ ಹೋಗಿರುವ ಟಾಟಾ ಸ್ಟೀಲ್ ಸಾ’ವನ್ನಪ್ಪಿರುವ ತನ್ನ ಉದ್ಯೋಗಿಗೆ 60 ವರ್ಷ ಆಗುವವರೆಗೂ ಆ ಉದ್ಯೋಗಿಯ ಕುಟುಂಬಕ್ಕೆ ಪ್ರತೀ ತಿಂಗಳು ಸ್ಯಾಲರಿ ನೀಡುವ ಮಹತ್ವದ ನಿರ್ಧಾರ ಘೋಷಣೆ ಮಾಡಿದೆ.

[widget id=”custom_html-4″]

Advertisements

ಅಷ್ಟೇ ಅಲ್ಲದೆ, ಸೋಂಕಿನಿಂದಾಗಿ ಸಾ’ವಿಗೀಡಾಗಿರುವ ತನ್ನ ಉದ್ಯೋಗಿಯ ಕುಟುಂಬದವರಿಗೆ ನಿವೇಶನ ಸೇರಿದಂತೆ, ಉಚಿತ ವೈದ್ಯಕೀಯ ಸೌಲಭ್ಯ ನೀಡುವುದಾಗಿ ಟಾಟಾ ಸ್ಟೀಲ್ ಹೇಳಿದ್ದು, ಇದರ ಬಗ್ಗೆ ತನ್ನ ಕಂಪನಿಯ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇನ್ನು ಟಾಟಾ ಸ್ಟೀಲ್ ಕಂಪನಿ ಹೇಳಿರುವ ಹಾಗೆ, ನಾವು ಯಾವಾಗಲು ತಮ್ಮ ಉದ್ಯೋಗಿಗಳ ಪರವಾಗಿ ನಿಲ್ಲುತ್ತೇವೆ. ನಮ್ಮ ಕಂಪನಿಯ ನೌಕರರ ಯೋಗಕ್ಷೇಮ, ಭದ್ರತೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಇನ್ನು ಇದೆಲ್ಲದರ ಜೊತೆಗೆ ಸೋಂಕಿನ ಕಾರಣದಿಂದಾಗಿ ಸಾ’ವನಪ್ಪಿದ ಕೆಲಸಗಾರರ ಕುಟುಂಬದ ಹಾಗೂ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿ ಕೂಡ ನಮ್ಮದೇ ಎಂದು ದೇಶದ ಹೆಮ್ಮೆಯ ಟಾಟಾ ಗ್ರೂಪ್ ನ ಟಾಟಾ ಸ್ಟೀಲ್ ಕಂಪನಿ ಹೇಳಿದೆ. ಸ್ನೇಹಿತರೇ, ಟಾಟಾ ಸ್ಟೀಲ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಮಾಡಿ ತಿಳಿಸಿ..