ನಿಖಿಲ್ ರೇವತಿ ಮದ್ವೆ ಬಗ್ಗೆ ವ್ಯಂಗ್ಯವಾಗಿ ಟೀಕೆ ಮಾಡಿದ ಕೆಜಿಎಫ್ 2 ನಟಿ..

Advertisements

ಲಾಕ್ ಡೌನ್ ಹಿನ್ನಲೆಯಲ್ಲಿ ನಿಖಿಲ್ ರೇವತಿ ಮದುವೆಯನ್ನ ತುಂಬಾ ಸರಳವಾಗಿ ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ತೋಟದ ಮನೆಯ ಬಳಿ ಮಾಜಿ ಸಿಎಂ ಕುಮಾರಸ್ವಾಮಿಯವರು ಮಾಡಿದ್ದಾರೆ. ಆದರೆ ಲಾಕ್ ಡೌನ್ ಸಾಮಾಜಿಕ ಅಂತರವನ್ನ ಕಾಪಾಡಿಕೊಂಡಿದ್ದರೂ ಲಾಕ್ ಡೌನ್ ನಿಯಮಗಳನ್ನ ಸರಿಯಾಗಿ ಪಾಲಿಸಿಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisements

ಹೌದು, ಕೆಜಿಎಫ್ 2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್ ನಿಖಿಲ್ ರೇವತಿ ಮದುವೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಿಟ್ಟರ್ ಮೂಲಕ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.

ನಿಖಿಲ್ ಹಾಗೂ ರೇವತಿ ಮದುವೆಯ ಸೂಪರ್ ವಿಡಿಯೋ..ಮಿಸ್ ಮಾಡದೆ ನೋಡಿ..

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಬಹುತೇಕ ಜನರು ಒಂದತ್ತು ಊಟಕ್ಕೂ ಇಲ್ಲದೆ ಹಸಿವಿನಿಂದ ಒದ್ದಾಡುತ್ತಿದ್ದಾರೆ. ಅನೇಕರಿಗೆ ತಮ್ಮ ಕುಟುಂಬವನ್ನು ತಲುಪಲು ಇಂದಿಗೂ ಕೂಡ ಸಾಧ್ಯವಾಗಿಲ್ಲ.

ಆದರೆ ಇದು ಕೆಲ ಆತ್ಮಗಳಿಗೆ ಅರ್ಥ ಆಗಿಲ್ಲ ಎಂದು ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದು, ಮದುವೆಗಾಗಿ ಏನೇನು ಅಡುಗೆ ಮಾಡಿದ್ದರುಎಂಬುದರ ಬಗ್ಗೆ ಕುತೂಹಲವಿದೆ ಎಂದು ವ್ಯಂಗ್ಯಭರಿತವಾಗಿ ಟೀಕೆ ಮಾಡಿದ್ದಾರೆ.