ನಟ ರವಿಚಂದ್ರನ್ ಅವರನ್ನ ಕೋರ್ಟ್ ಮೆಟ್ಟಿಲೇರಿಸಿದ್ದ ನಟಿ ಈಗ ಹೇಗಿದ್ದಾರೆ ಗೊತ್ತಾ ?ಇವರೇ ನೋಡಿ ನಟಿಯ ಪತಿ..

Cinema

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹಳ್ಳಿ ಮೇಷ್ಟ್ರು ಚಿತ್ರವನ್ನ ಬಹುಷಃ ನೀವೆಲ್ಲರೂ ನೋಡಿಯೇ ಇರುತ್ತೀರಿ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡಿದವರು ನಟಿ ಫರೀನಾ. ಮೂಲತಃ ತಮಿಳುನಾಡಿನವರಾದ ಫರೀನಾ ಹುಟ್ಟಿದ್ದು ಚೆನ್ನೈನಲ್ಲಿ. ಇನ್ನು ಈ ನಟಿಯನ್ನ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬಿಂದಿಯಾ ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಇವರು ಕನ್ನಡ ಸೇರಿದಂತೆ ತಮಿಳು ಹಾಗು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ೧೯೯೨ರಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಫರೀನಾ ನಟಿಸಿದ ಮೊದಲ ಚಿತ್ರ ಜಾನ್ ತೇರೆ ನಾಮ್ ಎಂದು. ಇದರ ಬಳಿಕ ಹಲವಾರು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ ನಟಿ ಫರೀನಾ.

ನೋಡುವುದಕ್ಕೆ ಥೇಟ್ ನಟಿ ಮಾಧುರಿ ದೀಕ್ಷಿತ್ ಅವರಂತಯೇ ಕಾಣಿಸುವ ಫರೀನಾ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟದ್ದು ೧೯೯೨ರಲ್ಲಿ ತೆರೆಕಂಡ ಹಳ್ಳಿಮೇಷ್ಟ್ರು ಸಿನಿಮಾದ ಮೂಲಕ ನಟ ರವಿಚಂದ್ರನ್ ಅವರ ಜೋಡಿಯಾಗಿ. ಇನ್ನು ಹಳ್ಳಿ ಮೇಷ್ಟ್ರು ಸಿನಿಮಾಗಾಗಿ ರವಿಚಂದ್ರನ್ ಅವರು ನಾಯಕಿ ನಟಿಯನ್ನ ಹುಡುಕುತ್ತಿದ್ದಾಗ ಫರೀನಾ ಅವರನ್ನ ಕಂಡಿದ್ದು, ಥೇಟ್ ಮಾಧುರಿ ದೀಕ್ಷಿತ್ ಅವರಂತಯೇ ಕಾಣಿಸುತ್ತಿದ್ದ ನಟಿ ಫರೀನಾ ಅವರನ್ನ ಹಳಿಮೇಷ್ಟ್ರು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡ್ರು. ಹಳ್ಳಿ ಹುಡುಗಿಯಾಗಿ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ನಟಿಸಿದ್ದ ನಟಿ ಫರೀನಾ ಇದರ ಬಳಿಕ ನಟಿಸಿದ್ದು ೧೯೯೩ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್ ಅವರ ಅಭಿನಯದ ರಾಯರು ಬಂದರು ಮಾವನ ಮನೆಗೆ ಅನ್ನೋ ಚಿತ್ರದಲ್ಲಿ.

ಹಳ್ಳಿ ಮೇಷ್ಟ್ರು ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟಿ ಫರೀನಾ ಕಿರಿಕ್ ಮಾಡಿಕೊಂಡಿದ್ದು ಹಲವು ವಿವಾದಗಳಿಗೆ ಕಾರಣರಾಗಿದ್ದರು. ಇಷ್ಟೇ ಅಲ್ಲದೆ ಈ ನಟಿ ರವಿ ಚಂದ್ರನ್ ಅವರ ಮೇಲೆ ಗಂಭೀರ ಆರೋಪ ಕೂಡ ಮಾಡಿ ಆಗ ಸುದ್ದಿಯಾಗಿದ್ದರು. ನಟ ರವಿಚಂದ್ರನ್ ಅವರು ಲೈಂ’ಗಿಕವಾಗಿ ನನ್ನ ಮೇಲೆ ದೌ’ರ್ಜನ್ಯ ಎಸಗಲು ಮುಂದಾಗಿದ್ದರು ಎಂಬ ಗಂಭೀರವಾದ ಆರೋಪ ಮಾಡಿದ್ದರು.

ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ರವಿಚಂದ್ರನ್ ಅವರು ನ್ಯಾಲಯದಲ್ಲಿ ಫರೀನಾ ಅಲಿಯಾಸ್ ಬಿಂದಿಯಾ ಮೇಲೆ ೧ರೂಪಾಯಿ ಮಾನನಷ್ಟ ಮೊಕದೊಮ್ಮೆ ಹೂಡಿದ್ದು, ನಂತರ ರವಿಚಂದ್ರನ್ ಅವರ ಪರವಾಗಿ ತೀರ್ಪು ಬಂದ ಬಳಿಕ ನಟಿ ಫರೀನಾ ಅಲಿಯಾಸ್ ಬಿಂದಿಯಾ ಎಲ್ಲರ ಮುಂದೆಯೇ ಅದೂ ನ್ಯಾಯಾಲಯದಲ್ಲಿ ನಟ ರವಿಚಂದ್ರನ್ ಅವರ ಬಳಿ ಕ್ಷಮೆ ಕೋರಿದ್ದರು ಎಂದು ಹೇಳಲಾಗಿದೆ.