ಇನ್ನೆಂದೂ RCBಯಲ್ಲಿ ಆಡೋದಿಲ್ಲ ಡಿವಿಲಿಯರ್ಸ್.!ಬಿಟ್ಟು ಹೋಗ್ಬೇಡಿ ಎಂದ ನೆಟ್ಟಿಗರು..

Sports

ಸ್ನೇಹಿತರೆ ಕ್ರಿಕೆಟ್ ಜಗತ್ತಿನ ಅತ್ಯದ್ಭುತವಾದ ಆಪತ್ಬಾಂಧವ, ಸ್ಪೋ’ಟಕ ಬ್ಯಾಟ್ಸ್ಮನ್, ಮಿಸ್ಟರ್ 360ಎಂದು ಖ್ಯಾತರಾಗಿದ್ದ ಜಗತ್ತಿನ ಏಕೈಕ ಕ್ರಿಕೆಟ್ ಆಟಗಾರ, ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಅವರು ಎಲ್ಲ ಕ್ರಿಕೆಟ್ ಮಾದರಿಗೂ ವಿದಾಯ ಘೋಷಿಸಿದ್ದಾರೆ ಎಂದು ಈಗ ತಿಳಿದುಬಂದಿದೆ. ಈ ವಿಚಾರ ಆರ್ಸಿಬಿ ಅಭಿಮಾನಿಗಳಿಗೆ ತುಂಬಾನೇ ನೋವು ತಂದಿದೆ ಎನ್ನಬಹುದು. ಹೌದು, ಕ್ರಿಕೆಟ್ ಜಗತ್ತು ಕಂಡ ಮಹಾನ್ ಆಟಗಾರ ಎಬಿ ಡಿವಿಲಿಯರ್ಸ್ ಇಂಟರ್ನ್ಯಾಷನಲ್ ಸೇರಿದಂತೆ ಎಲ್ಲಾ ಕ್ರಿಕೆಟ್ ಮಾದರಿಗೂ ಈ ಮುಂಚೆಯೇ ವಿದಾಯ ಹೇಳಿದ್ದರು. ಟೆಸ್ಟ್, ಒಂಡೇ, ಹಾಗೂ ಟಿ ಟ್ವೆಂಟಿ ಗೂ ತಮ್ಮ ದೇಶದಿಂದ ವಿದಾಯ ಹೇಳಿದ್ದರು.

ಆದರೆ ಇದೀಗ ಐಪಿಎಲ್, ಬಿಬಿಲ್, ಎಲ್ಲಾ ಕ್ರಿಕೆಟ್ ಮಾದರಿಗೂ ವಿದಾಯ ಹೇಳಿದ್ದಾರೆಂದು ತಿಳಿದುಬಂದಿದೆ. ಇನ್ನು ಐಪಿಎಲ್ ನ ಆರ್ಸಿಬಿ ತಂಡಕ್ಕೆ ಆಪತ್ಬಾಂಧವರಾಗಿದ್ದ ಎಬಿ ಡಿವಿಲಿಯರ್ಸ್ ಅವರು ನಿವೃತ್ತಿ ಘೋಷಿಸಿಕೊಂಡಿರುವುದು ಆರ್ಸಿಬಿ ತಂಡದ ಅಭಿಮಾನಿಗಳಿಗೆ ತುಂಬಾ ನೋವಿನ ವಿಷಯವಾಗಿದೆ. ಇನ್ನು ಅಧಿಕೃತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೇಸ್ಬುಕ್ ಅಕೌಂಟ್ ನಿಂದ ಎಬಿಡಿ ಅವರ ವಿದಾಯದ ವಿಷಯ ಹೊರಬಿದ್ದಿದೆ. ಇನ್ನು ನೆಟ್ಟಿಗರಂತೂ ಎಬಿಡಿ ನಮ್ಮನ್ನ ಬಿಟ್ಟು ಹೋಗ್ಬೇಡಿ ಎಂದು ಸಾಮಾಜಿಕ ಜಾತನಗಳಲ್ಲಿ ಕಾಮೆಂಟ್ಸ್ ಮೂಲಕ ಮನವಿ ಮಾಡುತ್ತಿದ್ದಾರೆ.

ಹೌದು, ಎಲ್ಲಾ ರೀತಿಯ ಕ್ರಿಕೆಟ್‌ ಮಾದರಿಯಿಂದ ಡಿವಿಲಿಯರ್ಸ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಂದು ಯುಗದ ಅಂ’ತ್ಯವಾಗಿದೆ! ನಿಮ್ಮಂತೆ ಯಾರೂ ಇಲ್ಲ, ಎಬಿ. ಆರ್ಸಿಬಿ ನಲ್ಲಿ ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಮ್ಮ ತಂಡಕ್ಕೆ, ನಿಮ್ಮ ಎಲ್ಲಾ ಅಭಿಮಾನಿಗಳಿಗೆ ಮತ್ತು ಸಾಮಾನ್ಯವಾಗಿ ಕ್ರಿಕೆಟ್ ಪ್ರೇಮಿಗಳಿಗೆ ನೀವು ಕೊಟ್ಟ ಕೊಡುಗೆ ಅಪಾರ, ಹಾಗೆ ನೀವು ಎಲ್ಲದನ್ನು ನೀಡಿದಕ್ಕೆ ಧನ್ಯವಾದಗಳು, ನಿವೃತ್ತಿಯ ಶುಭಾಶಯಗಳು..ಎಂದು RCB ತನ್ನ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದೆ. ಒಟ್ಟಿನಲ್ಲಿ RCB ತಂಡದ ಮಹಾನ್ ಆಟಗಾರರಾಗಿದ್ದ ಎಬಿ. ಡಿವಿಲಿಯರ್ಸ್ ಅವರು ನಿವೃತ್ತಿ ತೆಗೆದುಕೊಂಡಿರುವುದಂತೂ RCBಗೆ ಹಾಗೂ ಅಭಿಮಾನಿಗಳ ಪಾಲಿಗೆ ದೊಡ್ಡ ನಷ್ಟವೇ ಸರಿ..