ಶಿವಣ್ಣ ತಮ್ಮ ಅಳಿಯನ ಜೊತೆ ಮನೆಯಲ್ಲಿ ಹೇಗಿರುತ್ತಾರೆ ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಡಾ. ಶಿವರಾಜ್‍ಕುಮಾರ್ ಇವರು ಕನ್ನಡದ ಚಲನಚಿತ್ರ ರಂಗದ ಖ್ಯಾತ ನಟ ಡಾ. ರಾಜ್‍ಕುಮಾರ್ ಅವರ ಹಿರಿಯಪುತ್ರ ಕೂಡ ಹೌದು.. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್ ಅವರು ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಈ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಪಡೆದ ಹಿರಿಮೆ ನಮ್ಮ ಶಿವಣ್ಣ ಅವರದ್ದು. ಇನ್ನೂ ಕನ್ನಡ ಚಿತ್ರ ರಂಗದಲ್ಲಿ ಹ್ಯಾಟ್ರಿಕ್ ಹೀರೋ ಎಂದು ಎನಿಸಿಕೊಂಡಿರುವ ಶಿವರಾಜ್ ಕುಮಾರ್ ಅವರು ತಮ್ಮ 58 ನೇ ವಯಸ್ಸಿನಲ್ಲಿ ಕೂಡ‌ ಚಿರಯುವಕನ ಹಾಗೆ ಕಾಣಿಸುತ್ತಾರೆ.. ಶಿವಣ್ಣ ಅವರು ಈಗಲೂ ಕೂಡ ಎಗ್ ಅಂಡ್ ಲುಕ್ ಆಗಿ ಕಾಣುವುದರಿಂದ ಇವರಿಗೆ ಮದುವೆಯಾಗಿ ಮಗಳಿದ್ದಾಳೇ ಎಂದರೆ ಯಾರು ಕೂಡ ನಂಬಲು ಸಾದ್ಯವಿಲ್ಲ ಆ ರೀತಿ ತಮ್ಮ ದೇಹವನ್ನು ಫಿಟ್ನೆಸ್ ಆಗಿ ಇಟ್ಟಿದ್ದಾರೆ..

ಇನ್ನೂ ಶಿವಣ್ಣ ಅವರು ತಮ್ಮ ಹಿರಿಯ ಪುತ್ರಿ ನಿರುಪಮಾ ಅವರನ್ನು ಡಾ‌‌.ದಿಲೀಪ್ ಎನ್ನುವವರಿಗೆ 2015 ರಲ್ಲಿ ಮದುವೆ ಮಾಡಿದರು.. ಇವರ ವಿವಾಹ ಮಹೋತ್ಸವವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್ 31‌/ 2015 ರಲ್ಲಿ ಅದ್ದೂರಿಯಾಗಿ ನಡೆದಿತ್ತು. ಇನ್ನೂ ದಿಲೀಪ್ ಮತ್ತು ನಿರುಪಮಾ ಅವರು ವಿದ್ಯಾರ್ಥಿ ದಿನಗಳಿಂದಲೂ ಕೂಡ ಸ್ನೇಹಿತರಾಗಿದ್ದರು.. ಸುಮಾರು 8‌ ವರ್ಷದ ಇವರ ಪ್ರೀತಿಗೆ ಅಂತಿಮವಾಗಿ ಮದುವೆ ಎಂಬ ಮುದ್ರೆ ಬಿದ್ದಿತ್ತು.. ಇನ್ನೂ ಶಿವಣ್ಣ ನವರು ಅಳಿಯ ಡಾ.ದಿಲೀಪ್ ಅವರು ಕೂಡ ಶಿವಣ್ಣ ನವರ ಜೊತೆ ತುಂಬಾನೇ ಆತ್ಮೀಯತೆ ಇರುತ್ತಾರೆ..

ಶಿವಣ್ಣ ಕೂಡ ತಮ್ಮ ಅಳಿಯನನ್ನು ತಮ್ಮ ಸ್ವತಃ ಮಗನಂತೆ ಕಾಣುತ್ತಾರೆ.. ಇನ್ನೂ ಹಬ್ಬ ಹರಿದಿನಗಳು ಬಂದಾಗ ಶಿವಣ್ಣ ತಮ್ಮ ಅಳಿಯ ಮತ್ತು ಮಗಳನ್ನು ಮನೆಗೆ‌ ಕರೆದು ತುಂಬಾ ಸಂತೋಷದಿಂದ ಅವರೊಂದಿಗೆ ಸಮಯ ಕಳೆಯುತ್ತಾರೆ.. ಶಿವಣ್ಣ ಅವರು ಯಾವುದೇ ಪ್ರವಾಸವನ್ನು ಕೈಗೊಂಡರು ಕೂಡ ತಮ್ಮ ಅಳಿಯ ಮಗಳನ್ನು‌ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.. ಶಿವಣ್ಣ ಎಷ್ಟೇ ಬ್ಯುಸಿಯಾಗಿದ್ದರು ಕೂಡ ತಮ್ಮ ಪ್ರೀತಿಯ ಮತ್ತು ಸುಂದರ ಕುಟುಂಬಕ್ಕೆ ಎಂದು ಹೆಚ್ಚಿನ ಸಮಯ ನೀಡುತ್ತಾರೆ.. ಸ್ನೇಹಿತರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಗ್ಗೆ ನಿಮಗೆ ನಿಮ್ಮ ಅನಿಸಿಕೆ ತಿಳಿಸಿ..