ಸಂಚಾರಿ ವಿಜಯ್ ಗೆ ಸ್ಯಾಂಡಲ್ ವುಡ್ ಮಾಡಿದ ಆ ಒಂದು ದೊಡ್ಡ ಅನ್ಯಾಯ ಏನು ಗೊತ್ತೇ ? ಕೇಳಿದ್ರೆ ನಿಮಗೂ ಕಣ್ಣೀರು ಬರುತ್ತೆ..

Cinema
Advertisements

ತಮ್ಮ ನಟನೆಗಾಗಿ ನ್ಯಾಷನಲ್ ಅವಾರ್ಡ್ ಪಡೆದ ಕನ್ನಡದ ಏಕೈಕ ನಟ ಸಂಚಾರಿ ವಿಜಯ್. ಇವರು ಎಲ್ಲರಂತೆ ಅಲ್ಲ. ಬಡತನದಲ್ಲಿ ಹರಳಿದ ಪ್ರತಿಭೆ. ಹುಟ್ಟಿನಿಂದಲೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಾ ಕಷ್ಟದಲ್ಲೇ ಬೆಳೆದ ಅಧ್ಭುತ ವ್ಯಕ್ತಿ. ಅವರು ಒಬ್ಬ ಅಧ್ಭುತ ನಟ ಮಾತ್ರ ಅಲ್ಲ ಒಬ್ಬ ಸಹೃದಯಿ ವ್ಯಕ್ತಿ ಎಂದೇ ಹೆಸರುವಾಸಿಯಾದವರು. ಈಗ ಎಲ್ಲರನ್ನೂ ಬಿಟ್ಟು ದೂರವಾಗಿದ್ದಾರೆ. ಇಂದು ಜಗತ್ತೇ ಅವರ ಒಳ್ಳೆ ವ್ಯಕ್ತಿತ್ವದ, ಅಮೋಘ ಪ್ರತಿಭೆಯ ಗುಣಗಾನ ಮಾಡುತ್ತಿದೆ. ಆದರೆ ಅವರು ಬದುಕಿದ್ದಾಗ ಅವಕಾಶದಿಂದ ವಂಚಿತರಾಗಿದ್ದಲ್ಲದೆ ಅನ್ಯಾಯಕ್ಕೂ ಒಳಗಾಗಿದ್ದರು. ಈ ವಿಷಯಗಳೆಲ್ಲ ಈಗ ಒಂದೊಂದೇ ಬೆಳಕಿಗೆ ಬರುತ್ತಿವೆ. ಸಂಚಾರಿ ವಿಜಯ್ ಒಬ್ಬ ಮಹಾನ್ ಕಲಾವಿದ. ಅವರ ನಟನೆಗೆ ಸರಿಸಾಟಿ ಇರಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದಿದ್ದ ರಿಂದ ಅವರಿಗೆ ಎಂದೂ ಗರ್ವ ಅಹಂಕಾರ ಬರಲಿಲ್ಲ. ಹೆಮ್ಮೆಯಿಂದ ಬೀಗಲಿಲ್ಲ.

[widget id=”custom_html-4″]

Advertisements

ವಿನಯ, ಸರಳತೆ, ಸೌಜನ್ಯ, ತಾಳ್ಮೆ ಅವರ ರ’ಕ್ತದಲ್ಲೇ ಬಂದಿದ್ದವು. ರಾಷ್ಟ್ರಪ್ರಶಸ್ತಿ ಬಂದ ನಂತರವೂ ಅವರ ಜೀವನವೇನು ಬದಲಾಗಲಿಲ್ಲ. ಅವರ ಗುಣದಲ್ಲೂ ಬದಲಾವಣೆಯಾಗಲಿಲ್ಲ. ಗೌರವ ಸನ್ಮಾನಗಳು ದೊರಕಿದವು ವಿನಃ ಅವಕಾಶಗಳು ಹರಸಿ ಬರಲಿಲ್ಲ. ಜೊತೆಗೆ ವಿಜಯ್ ಅವರ ಸ್ವಭಾವ ಹೇಗೆಂದರೆ ಅವರು ಎಂದು ತಾನು ದೊಡ್ಡ ನಟ ಎಂದು ಮರೆಯಲಿಲ್ಲ. ಅವಕಾಶಕ್ಕಾಗಿ ಯಾರ ಕೈಕಾಲು ಹಿಡಿಯಲಿಲ್ಲ. ಜೀವನ ನಡೆಸುವುದಕ್ಕಾಗಿ ಯಾವುದೇ ಸಂಕೋಚವೂ ವಿಲ್ಲದೆ ತಮಗೆ ಸಿಕ್ಕ ಚಿಕ್ಕ ಚಿಕ್ಕ ಪಾತ್ರಗಳನ್ನೇ ಮಾಡುತಿದ್ದರು. ಕಷ್ಟಪಟ್ಟು ದುಡಿಯುತ್ತಿದ್ದರು. ತಾನು ನಡೆಯುತ್ತಿರುವ ದಾರಿ ಕಷ್ಟವಿದ್ದರೂ ತೊಂದರೆಯಿಲ್ಲ ತಾನು ಒಳ್ಳೆ ದಾರಿಯಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು. ಈ ಮಧ್ಯೆ ಅನೇಕ ಅವಮಾನ, ಅನ್ಯಾಯ ಎದುರಿಸಬೇಕಾಯಿತು.

[widget id=”custom_html-4″]

ಕಳೆದ ವರ್ಷ ಸಂಚಾರಿ ವಿಜಯ್ ಅವರ ಒಂದು ಚಲನಚಿತ್ರ ಸಿದ್ಧವಾಯಿತು. ಇದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೆರೆಕಂಡು ಬೇರೆಯ ಚಿತ್ರಗಳೊಂದಿಗೆ ಪೈಪೋಟಿಗೆ ಸಿದ್ಧವಾಯಿತು. ಈ ಚಿತ್ರವೇ “ತಲೆದಂಡ”. ಇದು ಅವರ ನ್ಯಾಷನಲ್ ಅವಾರ್ಡ್ ಗಳಿಸಿದ “ನಾನು ಅವನಲ್ಲ ಅವಳು” ಚಿತ್ರಕ್ಕಿಂತ ಒಳ್ಳೆಯ ಚಿತ್ರವಾಗಿತ್ತು. ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿತ್ತು. ಇದಕ್ಕಾಗಿ ವಿಜಯ್ ತಮ್ಮ ಪ್ರಾ’ಣವನ್ನು ಪಣಕ್ಕಿಟ್ಟು ಅಭಿನಯಿಸಿದ್ದರು. ಆದರೆ ಅವರಿಗೆ ಎಂತಹ ಅನ್ಯಾಯವಾಯಿತೆಂದರೆ ಈ ಚಿತ್ರವನ್ನು ಏಕಾಏಕಿ ಚಲನ ಚಿತ್ರೋತ್ಸವದಿಂದ ಹೊರಯಿಡಲಾಯಿತು. ಚಿತ್ರೋತ್ಸವ ಸ್ಪರ್ಧೆಯಿಂದ ತೆಗೆದು ಹಾಕಲಾಯಿತು. ಇದರಿಂದ ವಿಜಯ್ ಅವರ ಮನಸಿಗೆ ಎಷ್ಟು ನೋವಾಯಿತೆಂದರೆ ಅವರು ವಿಷಯ ತಿಳಿಯುತ್ತಿದ್ದಂತೆ ಮೊದಲ ಭಾರಿಗೆ ಲೈವ್ ಬಂದು ತಮಗೆ ಆದ ಅನ್ಯಾಯ, ನೋವನ್ನು ತೋಡಿಕೊಂಡರು. ಪ್ರಾ’ಣ ಪಣನಕಿಟ್ಟು ಒಳ್ಳೆ ಚಿತ್ರ ತಯಾರಿಸಿದ್ದೇವೆ, ನಿರ್ಮಾಪಕರು ಸಾಲ ಸೂಲ ಮಾಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಒಳ್ಳೆ ಚಿತ್ರ ಇದು. ಇದನ್ನೂ ನೀವು ತಿರಸ್ಕರಿಸಿದರೆ ನಾವು ಇನ್ನೂ ಎಂತಹ ಚಿತ್ರ ಮಾಡಬೇಕು? ನೀವೇ ಹೇಳಿ.

[widget id=”custom_html-4″]

ನಮ್ಮ ಚಿತ್ರಕ್ಕೆ ಅನ್ಯಾಯ ಮಾಡ್ಬೇಡಿ ಎಂದು ಬೇಡಿಕೊಂಡರು. ಆದರೆ ಅಂದು ಅವರ ಕೂಗು ಯಾರಿಗೂ ಕೇಳಲಿಲ್ಲ. ಅದರ ಬಗ್ಗೆ ಜನರಿಗೆ ತಿಳಿಯಲೂ ಇಲ್ಲ. ಹೀಗೆ ಸ್ಯಾಂಡಲ್ ವುಡ್ ಪ್ರತಿಭಾವಂತ ನಟನಿಗೆ ಅನ್ಯಾಯ ಅಗೌರವ ತೋರಿತು. ಅದು ಅಂದು ಅಷ್ಟು ದೊಡ್ಡ ಮಟ್ಟಿಗೆ ಸುದ್ದಿಯಾಗಲಿಲ್ಲ. ಆದರೆ ಅಂದು ಅವರ ಮನಸಿಗೆ ಆದ ನೋವು ದೊಡ್ಡದು. ಇಂದೂ ಇದೇ “ತಲೆ ದಂಡ” ಚಿತ್ರ ಮತ್ತೊಂದು ನ್ಯಾಷನಲ್ ಅವಾರ್ಡ್ ಗೆ ಯೋಗ್ಯವಾದ ಚಿತ್ರ ಎಂದು ಮಾತುಗಳು ಸಿನಿಮಾ ಗಣ್ಯರಿಂದಲೇ ಕೇಳಿ ಬರುತ್ತಿದೆ. ಕೇವಲ ಇಷ್ಟೇ ವಿಷಯವಲ್ಲ ಇತ್ತೀಚೆಗೆ ತೀರಿಹೋದ ಸ್ಯಾಂಡಲ್ ವುಡ್ ಗಣ್ಯರಿಗೆ ಕನ್ನಡ ಫಿಲ್ಮ್ ಚೇಂಬರ್ ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಗ ನಟ ಸಂಚಾರಿ ವಿಜಯ್ ಅವರ ಭಾವ ಚಿತ್ರ ಇರಿಸಿರಲಿಲ್ಲಿ. ಇದು ಕೂಡ ವಿಜಯ್ ಅವರ ಅಭಿಮಾನಿಗಳಿಗೆ ಸಿಟ್ಟು ಬರುವಂತೆ ಮಾಡಿತ್ತು. ಅಪೂರ್ವ ಪ್ರತಿಭೆ, ಪ್ರಶಸ್ತಿ ಪುರಸ್ಕಾರ ಮೀರಿ ಸಂಚಾರಿ ವಿಜಯ್ ತಮ್ಮ ವ್ಯಕ್ತಿತ್ವದಿಂದಲೇ ಕರ್ನಾಟಕದ ಕೋಟಿ ಕೋಟಿ ಜನರ ಹೃದಯವನ್ನುಗೆದ್ದಿದ್ದಾರೆ. ಶಂಕರ್ ನಾಗ್, ಸುನಿಲ್ ಮುಂತಾದ ಗಣ್ಯರ ಸಾಲಿನಲ್ಲಿ ಬರುವ ವ್ಯಕ್ತಿಯಾಗಿದ್ದಾರೆ. ಅವರು ಮತ್ತೆ ಕರ್ನಾಟಕದಲ್ಲಿ ಹುಟ್ಟಿಬರಲಿ ಎಂಬುದು ಎಲ್ಲರ ಆಶಯವಾಗಿದೆ.