ಲಾಕ್ ಡೌನ್ ಹಿನ್ನಲೆಯಲ್ಲಿ ನಂದಿಬೆಟ್ಟಕ್ಕೆ ಹೋಗಿ ಮಾನವೀಯತೆ ಮೆರೆದ ಬಿಗ್ ಬಾಸ್ ಖ್ಯಾತಿಯ ನಟ ಚಂದನ್.?

Cinema
Advertisements

ಕೊರೋನಾ ಸೋಂಕು ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೆ ಇದರ ನೇರ ಎಫೆಕ್ಟ್ ಆಗಿರೋದು ಸಾಮಾನ್ಯ ಜನರ ಮೇಲೆ. ಇನ್ನು ಬಡವರು, ದಿನಗೂಲಿ ಕಾರ್ಮಿಕರು ಸಮಯಕ್ಕೆ ಊಟ ಸಿಗದೇ ಪರದಾಡುವಂತಿದೆ.

Advertisements

ಇನ್ನು ಜನರ ಪರಿಸ್ಥಿತಿಯೇ ಹೀಗಾದರೆ, ಪ್ರಾಣಿ ಪಕ್ಷಿಗಳ ಕತೆ ಕೇಳುವರ್ಯಾರು ಅಲ್ಲವೇ. ಆದರೂ ಹಲವಾರು ಪ್ರಾಣಿ ಪಕ್ಷಿಗಳ ತಮ್ಮ ಕೈಲಾದ ಮಟ್ಟಿಗೆ ಊಟ, ತಿಂಡಿ ನೀಡಿ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಕೂಡ ಒಬ್ಬರು.

ಹೌದು, ನಂದಿಬೆಟ್ಟಕ್ಕೆ ಹೋಗಿ ಅಲ್ಲಿರುವ ಕೋತಿಗಳಿಗೆ ಬಾಳೆಹಣ್ಣು ನೀಡಿ ಅವುಗಳ ಹಸಿವನ್ನು ಹಿಂಗಿಸುವ ಕೆಲಸವನ್ನು ಮಾಡಿರುವ ಚಂದನ್, ಮನೆಯಿಂದ ಆಚೆ ಬಂದು ಗುಂಪು ಸೇರುವುದಕ್ಕಿಂತ ೫೦೦ ಕೋತಿಗಳಿಗೆ ಬಾಳೆಹಣ್ಣು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಇನ್ನು ಲಾಕ್ ಡೌನ್ ಆಗಿದ್ದು ಚಿಕ್ಕಬಳ್ಳಾಪುರದ ಪ್ರವಾಸಿ ಸ್ಥಳ ನಂದಿಬೆಟ್ಟಕ್ಕೂ ಕೂಡ ಕೊರೋನಾ ಎಫೆಕ್ಟ್ ತಟ್ಟಿದೆ. ಇನ್ನು ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನೇ ನಂಬಿ ಅವರು ನೀಡುತ್ತಿದ್ದ ಹಣ್ಣು, ತಿಂಡಿಯಿಂದಲೇ ಜೀವನ ನಡೆಸುತ್ತಿದ್ದ ಕೋತಿಗಳು ಹೊಟ್ಟೆಗೆ ಏನೂ ಸಿಗದೇ ವನವಾಸ ಮಾಡುತ್ತಿದ್ದವು.

ಹಾಗಾಗಿಯೇ ನಂದಿಬೇಟಕ್ಕೆ ಹೋಗಿ ೫೦೦ಕ್ಕಿಂತ ಹೆಚ್ಚು ಕೋತಿಗಳಿಗೆ ಬಾಳೆಹಣ್ಣು ನೀಡಿ ಬಂದಿದ್ದಾರೆ ನಟ ಚಂದನ್. ಇನ್ನು ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಚಂದನ್ ಸಾಮಾಜಿಕ ಅಂತರ ಏನೆಂಬುದನ್ನ ಕಲಿಯುತ್ತೇವೆ ಎಂದರೆ ಗುಂಪು ಸೇರುವುದಕ್ಕಿಂತ 500ಕೋತಿಗಳಿಗೆ ಆಹಾರ ಕೊಡುವುದು ಒಳ್ಳೆಯದು ಎಂದು ನನಗೆ ಅರ್ಥವಾಯಿತು ಎಂದು ಅವರು ಬರೆದುಕೊಂಡಿದ್ದು, ಜೊತೆಗೆ ಮಂಗಗಳಿಗೆ ಬಾಳೆಹಣ್ಣು ನೋಡುತ್ತಿರುವ ಪೋಟೋವನ್ನ ಕೂಡ ಪೋಸ್ಟ್ ಮಾಡಿಕೊಂಡಿದ್ದಾರೆ.