ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಈ ದಂಪತಿಗೆ 1 ವರ್ಷ ಜೈಲು 5ಕೋಟಿ ದಂಡ !

Cinema
Advertisements

ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಹಾಗೂ ಅವರ ಪತ್ನಿ ನಟಿಯೂ ಆಗಿರುವ ರಾಧಿಕಾ ಅವರು ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ. ಚೆನ್ನೈನ ವಿಶೇಷ ನ್ಯಾಯಾಲಯವು ಈ ದಂಪತಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಜೈಲು ಶಿ’ಕ್ಷೆಯನ್ನ ವಿಧಿಸಿದ್ದು ಶರತ್ ಕುಮಾರ್ ರಾಧಿಕಾ ದಂಪತಿ ಜೈಲು ಸೇರಲಿದ್ದಾರೆ. ರಾಜಕುಮಾರ, ಸಾರಥಿ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ನಟ ಶರತ್ ಕುಮಾರ್ ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಮಿಂಚಿರುವ ನಟಿ ರಾಧಿಕಾ ಅವರ ಮೇಲೆ ಚೆಕ್ ಬೌನ್ಸ್ ಕೇಸ್ ಇತ್ತು.

[widget id=”custom_html-4″]

Advertisements

ಮ್ಯಾಜಿಕ್ ಫ್ರೇಮ್ಸ್ ಪ್ರೊಡಕ್ಷನ್ ಸಂಸ್ಥೆಯಲ್ಲಿ ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಅವರು ಪಾಲುದಾರಿಕೆಯನ್ನ ಹೊಂದಿದ್ದರು. ಇನ್ನು ಈ ಸಂಸ್ಥೆಯ ವಿರುದ್ಧ ರ್ಯಾಡಿಯೆನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನೋ ಫೈನಾನ್ಸ್ ಸಂಸ್ಥೆಯು ಶರತ್ ಕುಮಾರ್ ದಂಪತಿ ವಿರುದ್ಧ ಚೆಕ್ ಬೌನ್ಸ್ ಮತ್ತು ಹಣ ವಂ’ಚನೆ ಪ್ರ’ಕರಣವನ್ನ ದಾಖಲು ಮಾಡಿತ್ತು. ಇನ್ನು ಇದೆ ಸಂಸ್ಥೆಯಿಂದ ಸುಮಾರು 1.50ಕೋಟಿ ಹಣವನ್ನ ಸಾಲವಾಗಿ ಪಡೆದಿದ್ದ ಶರತ್ ಕುಮಾರ್ ದಂಪತಿ ಅದಕ್ಕೆ ಶೂರಿಟಿಯಾಗಿ ಆ ಸಂಸ್ಥೆಗೆ ಎರಡು ಚೆಕ್ ಗಳನ್ನ ಕೊಟ್ಟಿದ್ದರು. ಇದರ ಬಳಿಕ ಕೂಡ ೫೦ಲಕ್ಷ ಸಾಲ ಪಡೆದ ಶರತ್ ಕುಮಾರ್ ಅವರು ಅದರ ಶೂರಿಟಿಯಾಗಿ ೧೦ಲಕ್ಷದ ೫ ಚೆಕ್ ಗಳನ್ನ ಸಂಸ್ಥೆಗೆ ಕೊಟ್ಟಿದ್ದರು.

[widget id=”custom_html-4″]

ಒಟ್ಟಾಗಿ ಏಳು ಚೆಕ್ ಗಳನ್ನ ಫೈನಾನ್ಸ್ ಸಂಸ್ಥೆಯು ನಗದನ್ನಾಗಿ ಮಾಡುವ ಉದ್ದೇಶದಿಂದ ಬ್ಯಾಂಕಿಗೆ ಹಾಕಿದಾಗ ಏಳಕ್ಕೆ ೭ಚೆಕ್ ಗಳು ಬೌನ್ಸ್ ಆಗಿವೆ. ಹಾಗಾಗಿ ಫೈನಾನ್ಸ್ ಸಂಸ್ಥೆಯು ಶರತ್ ಕುಮಾರ್ ದಂಪತಿ ವಿರುದ್ದ ಪ್ರ’ಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿತ್ತು. ಇನ್ನು ಈ ಪ್ರ’ಕರಣದ ಕುರಿತಂತೆ ೨೦೧೯ರಲ್ಲೇ ಶರತ್ ಕುಮಾರ್ ದಂಪತಿ ತಮ್ಮ ವಿರುದ್ಧ ದಾಖಲಾಗಿರುವ ಚೆಕ್ ಬೌನ್ಡ್ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಕ್ರಿ’ಮಿನಲ್ ಪ್ರಕರಣ ಕ್ಯಾನ್ಸಲ್ ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ವಿಚಾರಣೆ ಬಳಿಕ ಹೈಕೋರ್ಟ್ ರದ್ದು ಮಾಡುವ ಮನವಿಯನ್ನ ತಿರಸ್ಕರಿಸಿ ಈ ಪ್ರ’ಕರಣವನ್ನ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಈಗ ಅಲ್ಲಿ ವಿಚಾರಣೆ ನಡೆದಿದ್ದು ನಟ ಶರತ್ ಕುಮಾರ್ ಹಾಗೂ ನಟಿ ಹಾಗೂ ಪತ್ನಿಯು ಆಗಿರುವ ರಾಧಿಕಾ ಅವರಿಗೆ ಒಂದು ವರ್ಷಗಳ ಕಾಲ ಜೈಲು ಶಿ’ಕ್ಷೆ ವಿಧಿಸುವುದರ ಜೊತೆಗೆ 5ಕೋಟಿ ದಂಡವನ್ನು ಕೂಡ ವಿಧಿಸಿದೆ ನ್ಯಾಯಾಲಯ..