ಒಂದು ಕಾಲದ ಟಾಪ್ ನಟಿ ಸರಿತಾ ಅವರ ಮಗ ಯಾರು ಗೊತ್ತಾ? ದೊಡ್ಡ ನಟ ಆದ್ರೆ ಈ ವಿಷಯ ಯಾರಿಗೂ ತಿಳಿದಿಲ್ಲ !

Cinema

ಸೂಪರ್ ಹಿಟ್ ಚಿತ್ರ ಹೊಳಬೆಳಕು ಸೇರಿದಂತೆ ಅಣ್ಣಾವ್ರ ಜೊತೆಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸರಿತಾ ಮೂಲತಃ ಆಂಧ್ರಪ್ರದೇಶದವರು. ಆದರೂ ಕೂಡ ಕನ್ನಡ ಭಾಷೆಯನ್ನ ಬಹಳ ಚೆನ್ನಾಗಿಯೇ ಮಾತನಾಡುತ್ತಿದ್ದರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ ನಟಿ ಸರಿತಾ.ಸುಮಾರು ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸರಿತಾ ಅವರನ್ನ ಪಾರ್ವತಮ್ಮ ರಾಜ್ ಕುಮಾರ್ ಅವರು ಬಹುವಚನದಿಂದಲೇ ಕರೆಯುತ್ತಿದ್ದರಂತೆ.

ತೆಲುಗಿನ ಮರೋಚರಿತ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸರಿತಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚರಿತ್ರಿಯನ್ನೇ ಸೃಷ್ಟಿ ಮಾಡಿದ್ರು. ಎರಡು ಬಾರಿ ಮದುವೆಯಾಗಿರುವ ಬಹುಭಾಷಾ ನಟಿ ಸರಿತಾ ಅವರಿಗೆ ಶ್ರವಣ್ ಮತ್ತು ತೇಜಸ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ನು ಇವರ ಸಹೋದರಿಯಾಗಿರುವ ವಿಜಿ ಚಂದ್ರ ಶೇಖರ್ ಕೂಡ ನಟಿಯಾಗಿದ್ದಾರೆ. ಇನ್ನು ಮಗ ಶ್ರವಣ್ ಜೊತೆ ನಟಿ ಸರಿತಾ ದುಬೈನಲ್ಲಿದ್ದಾರೆ ಎಂದು ಹೇಳಲಾಗಿದೆ. ಒಂದು ಕಾಲಕ್ಕೆ ದೊಡ್ಡ ನಟಿಯಾಗಿ ಮೆರೆದ ಸರಿತಾ ಮತ್ತು ರಾಜ್ ಕುಮಾರ್ ಜೋಡಿ ತುಂಬಾ ಫೇಮಸ್ ಆಗಿತ್ತು.