ಆಕ್ಸಿಜನ್ ಪೂರೈಕೆಗಾಗಿ ತನ್ನ ದುಬಾರಿ ಕಾರನ್ನೇ ಮಾರಿದ ! ಇದರ ಹಿಂದಿರುವ ಕತೆ ಕೇಳಿದ್ರೆ ಗ್ರೇಟ್ ಅಂತೀರಾ..

Advertisements

ಸ್ನೇಹಿತರೇ, ಬೆಂಗಳೂರು ಸೇರಿದಂತೆ ದೇಶದಾದ್ಯಂತ ಕೊ’ರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾ’ವಿನ ಸಂಖ್ಯೆ ಕೂಡ ದುಪ್ಪಟ್ಟಾಗುತ್ತಲೇ ಇದೆ. ಇನ್ನು ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗುತ್ತಿಲ್ಲ ಜೊತೆಗೆ ಸಮಯಕ್ಕೆ ಸರಿಯಾಗಿ ಸೋಂಕಿತರಿಗೆ ಆಕ್ಸಿಜನ್ ಸಿಗದೇ ಸಾ’ವುಗಳಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನ ದುಬಾರಿ ಕಾರನ್ನ ಮಾರಿ ಆಕ್ಸಿಜನ್ ಪೂರೈಕೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

[widget id=”custom_html-4″]

ನಿಮಗೆಲ್ಲಾ ಗೊತ್ತಿರುವ ಹಾಗೆ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಕೊ’ರೋನಾ ರ’ಣಕೇಕೆ ಹಾಕುತ್ತಿದೆ. ಆಕ್ಸಿಜನ್ ಸಿಗದೇ ಸಾ’ಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಹಾಗಾಗಿಯೇ ಮುಂಬೈನ ಶೆಹನಾಜ್ ಶೇಖ್ ಎಂಬ ವ್ಯಕ್ತಿ ಬರೋಬ್ಬರಿ 22ಲಕ್ಷದ SUV ಫೋರ್ಡ್ ಕಾರನ್ನ ಮಾರಿ ಸಂಕಷ್ಟದಲ್ಲಿರುವ ಸೋಂ’ಕಿತರಿಗೆ ಕೃತಕ ಆಕ್ಸಿಜನ್ ಪೂರೈಕೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಆಕ್ಸಿಜನ್ ಮ್ಯಾನ್ ಎಂಬ ಬಿರುದು ಪಡೆದುಕೊಂಡಿದ್ದಾನೆ. ತನ್ನ ಕಾರ್ ಮಾರಿ ಬಂದ ಹಣದಿಂದ ೧೬೦ ಆಕ್ಸಿಜನ್ ಸಿಲಿಂಡರ್ ಗಳನ್ನ ಖರೀದಿಸಿರುವ ಈತ ಸಂಕಷ್ಟದ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಪೂರೈಕೆ ಮಾಡುತ್ತಿದ್ದಾರೆ.

[widget id=”custom_html-4″]

Advertisements

ಇನ್ನು ಇದರ ಹಿಂದೆ ಶೆಹನಾಜ್ ಅವರ ಕಣ್ಣೀರಿನ ಕತೆಯೇ ಇದೆ. ಹೌದು, ಇವರ ಪತ್ನಿಗೂ ಕೂಡ ಸೋಂಕು ತಗಲಿದ್ದು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೇ ಆಟೋದಲ್ಲಿಯೇ ತಮ್ಮ ಪ್ರಾ’ಣ ಕಳೆದುಕೊಂಡಿದ್ದರು. ಈ ಕ’ಹಿ ಘಟನೆ ಬಳಿಕವಷ್ಟೇ ಶೆಹನಾಜ್ ಅವರು ಮುಂಬೈನಲ್ಲಿ ರೋಗಿಗಳಿಗಾಗಿ ಆಮ್ಲಜನಕ ಪೂರೈಕೆ ಮಾಡಲು ಶುರು ಮಾಡಿದ್ರು. ಇನ್ನು ಅವರಲ್ಲಿದ್ದ ಹಣವೆಲ್ಲಾ ಖಾಲಿಯಾದಾಗ ತಮ್ಮ ಸ್ವಂತ ಕಾರನ್ನೇ ಮಾರಿ ಕೃತಕ ಆಮ್ಲಜನಕ ಖರೀದಿ ಮಾಡಿ ರೋಗಿಗಳಿಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವ್ಯಕ್ತಿಗೆ ನಮ್ಮ ಕಡೆಯಿಂದ ಹ್ಯಾಟ್ಸಾಪ್..