ಟೈಮ್​ಗೆ​ ಸರಿಯಾಗಿ ಶೂಟಿಂಗ್​ಗೆ ಬರ್ತೀನಿ ಪ್ಲೀಸ್​ ಚಾನ್ಸ್​ ಕೊಡಿ !ನಿರ್ಮಾಪಕಿ ಬಳಿ ಕೇಳಿಕೊಂಡ ಬಾಲಿವುಡ್ ಬಾದ್​ ಷಾ ಶಾರುಖ್ ಖಾನ್!?

Cinema

ಬಾಲಿವುಡ್ ಬಾದ್​ ಷಾ, ಎಲ್ಲಾ ಹದಿಹರೆಯದ ಹುಡುಗಿಯರ ಕನಸಿನ ರಾಜಾ ನಟ ಶಾರುಖ್ ಖಾನ್. ಬಾಲಿವುಡ್ ಸಿನಿ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಬಾಲಿವುಡ್ ಬಾದ್ ಷಾ ಎಂಬ ಕೀರ್ತಿಗೆ ಹೆಸರಾಗಿದ್ದಾರೆ ನಟ ಶಾರುಖ್ ಖಾನ್. ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾದಲ್ಲಿ ಶಾರುಖ್​​ ಕಾಲ್ ಶೀಟ್​ಗೋಸ್ಕರ ಹಲವು ನಿರ್ದೇಶಕರು, ನಿರ್ಮಾಪಕರು ಕ್ಯೂ ನಿಲ್ತಿದ್ರು. ನಟಿ ಕಾಜಲ್ ಮತ್ತು ಶಾರುಖ್ ಜೋಡಿ ಅಂದಿನ ಕಾಲದಲ್ಲಿ ಮೋಡಿ ಮಾಡಿತ್ತು. ಡಿಡಿಎಲ್​​ಜೆ, ಬಾಜಿಗರ್, ಕುಚ್​​ ಕುಚ್ ಹೋತಾ ಹೆ, ದಿವಾನ, ದೇವಾದಾಸ್ ಸೇರಿ ಅನೇಕ ಹಿಟ್ ಸಿನಿಮಾಗಳಲ್ಲಿ ನಟ ಶಾರುಖ್ ಮಿಂಚಿದ್ದಾರೆ. ಶಾರುಖ್ ಸ್ಟೈಲ್, ಫ್ಯಾಷನ್, ಆ್ಯಕ್ಟಿಂಗ್, ಜೋಕ್​​ ಯಾರಿಗೆ ಇಷ್ಟ ಆಗಲ್ಲ ಹೇಳಿ..? ಶಾರುಖ್ ಆಟೋಗ್ರಾಫ್​​ಗಾಗಿ, ಒಂದೇ ಒಂದು ಸೆಲ್ಫಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ, ಬಾಲಿವುಡ್ ಬಾದ್​ ಶಾ ಕೇವಲ ಒಬ್ಬ ನಿರ್ಮಾಪಕಿ ಬಳಿ ಪ್ಲೀಸ್​ ಚಾನ್ಸ್​ ಕೊಡಿ ಅಂತ ಕೇಳ್ತಿರೋದ್ಯಾಕೆ? ಅವರಿಗೆ ಎಲ್ಲೂ ಫಿಲ್ಮ್ ಚಾನ್ಸ್ ಸಿಗ್ತಿಲ್ವಾ ಅನ್ನೋ ಪ್ರಶ್ನೆಗಳನ್ನ ನಿಮ್ಮನ್ನ ಕಾಡದೇ ಇರದು. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡ್ತಿವಿ ಕೇಳಿ. ಬಾಲಿವುಡ್​ನಲ್ಲಿ ಸದ್ಯ ಶಾರುಖ್​ ಖಾನ್​ ಸ್ಥಿತಿ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ಏನೇ ಪ್ರಯತ್ನಪಟ್ಟರೂ ವಿಜಯಲಕ್ಷ್ಮೀ ಅವರ ಕಡೆಗೆ ಸುಳಿಯುತ್ತಿಲ್ಲ. ಹೀಗಾಗಿ, ‘ಜೀರೋ’ ಸಿನಿಮಾ ಸೋತ ಬಳಿಕ ಅವರು ದೀರ್ಘ ಗ್ಯಾಪ್​ ಪಡೆದುಕೊಂಡಿದ್ದರು. ಈಗ ‘ಪಠಾಣ್​’ ಸಿನಿಮಾದಲ್ಲಿ ನಟ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಎಷ್ಟೇ ಬಾರಿ ಸೋತಿದ್ದರೂ ಕೂಡ, ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಮುಗಿಬೀಳುವುದನ್ನು ನಿಲ್ಲಿಸಿಲ್ಲ. ಆದರೆ ಅವರೆಲ್ಲರನ್ನೂ ಬಿಟ್ಟು, ಓರ್ವ ನಟಿಯ ಬಳಿ ಶಾರುಖ್​ ಅವಕಾಶ ಕೇಳಿದ್ದಾರೆ. ಹೌದು, ಬಾಲಿವುಡ್ ಬಾದ್ ಷಾ ಹೀಗೆ ಅವಕಾಶ ಕೇಳಿರುವುದು ನಟಿ ಆಲಿಯಾ ಭಟ್​ ಬಳಿ. ಇದು ನಿಜವೋ ಅಥವಾ ತಮಾಷೆಯೋ ಅಂತ ನೀವೇ ನಿರ್ಧರಿಸಿ. ಅಸಲಿಗೆ ನಡೆದ ಘಟನೆ ಏನೆಂದರೆ, ಈಗ ನಟಿ ಆಲಿಯಾ ಭಟ್​ ನಿರ್ಮಾಪಕಿ ಕೂಡ ಆಗಿದ್ದಾರೆ. ‘ಡಾರ್ಲಿಂಗ್ಸ್’ ಶೀರ್ಷಿಕೆಯ ಹೊಸ ಚಿತ್ರಕ್ಕೆ ಅವರು ಬಂಡವಾಳ ಹೂಡುವುದರ ಜೊತೆಗೆ ನಟಿಸುತ್ತಿದ್ದಾರೆ ಕೂಡ. ಆ ಚಿತ್ರದ ಮೊದಲ ದಿನದ ಚಿತ್ರೀಕರಣದ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದಕ್ಕೆ ಕಮೆಂಟ್​ ಮಾಡಿರುವ ಶಾರುಖ್ ಖಾನ್​ ಅವರು, ಆಲಿಯಾ ಬಳಿ ಬಹಿರಂಗವಾಗಿಯೇ ಅವಕಾಶ ಕೇಳಿದ್ದಾರೆ. ‘ಈ ಸಿನಿಮಾ ಆದ ಬಳಿಕ ನಿಮ್ಮ ಹೋಮ್​ ಪ್ರೊಡಕ್ಷನ್​ನಲ್ಲಿ ಬರುವ ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ.

ಸರಿಯಾದ ಸಮಯಕ್ಕೆ ನಾನು ಶೂಟಿಂಗ್​ಗೆ ಬರುತ್ತೇನೆ. ತುಂಬಾ ಪ್ರೊಫೆಷನಲ್​ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್​ ಮಾಡುತ್ತೇನೆ’ ಎಂದು ಶಾರುಖ್​ ಖಾನ್​ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಆಲಿಟ್ ಭಟ್ ಕೂಡ ಪ್ರತಿಕ್ರಿಯಿಸಿ, ಹಹಹ ನಾನು ನಿಮ್ಮ ಬಳಿ ಜಾಸ್ತಿ ಏನು ಕೇಳಲ್ಲ. ತಕ್ಷಣವೇ ಅಗ್ರಿಮೆಂಟ್​ಗೆ ನಿಮ್ಮಿಂದ ಸೈನ್​​ ಮಾಡಿಸಿಕೊಳ್ತೇನೆ. ಲವ್ ಯು ನನ್ನ ಫೇವರೇಟ್ ಅಂತ ಮರು ಟ್ವೀಟ್ ಮಾಡಿದ್ದಾರೆ. ಇದು ಸದ್ಯ ಭಾರೀ ವೈರಲ್​ ಆಗುತ್ತಿದೆ. ನಟಿ ಆಲಿಯಾ ನಿರ್ಮಿಸುತ್ತಿರುವ ‘ಡಾರ್ಲಿಂಗ್ಸ್​’ ಚಿತ್ರಕ್ಕೆ ನಟ ಶಾರುಖ್​ ಖಾನ್ ಪತ್ನಿ ಗೌರಿ ಖಾನ್​ ಕೂಡ ನಿರ್ಮಾಪಕಿ ಎಂಬುದು ಗಮನಿಸಬೇಕಾದ ಅಂಶ. ಅದೇನೇ ಇದ್ರೂ, ಇದೆಲ್ಲ ಗಮನಿಸಿದ್ರೆ, ನಟ ಶಾರುಖ್ ಖಾನ್ ತಮಾಷೆಯಾಗಿಯೇ ಈ ರೀತಿ ಮಾತನಾಡಿದ್ದಾರೆ ಅಂತ ತಿಳಿಯುತ್ತದೆ. ಆದ್ರೂ, ಶಾರುಖ್ ಹೀಗಂದಿದ್ದು ಅಭಿಮಾನಿಗಳನ್ನ ಇನ್ನೂ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ತಮ್ಮ ನೆಚ್ಚಿನ ನಾಯಕನ ಮತ್ತೊಂದು ಹಿಟ್ ಸಿನಿಮಾಗಾಗಿ ಪ್ರೇಕ್ಷಕರಂತೂ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ನಾವು ಕಾಯ್ತಾ ಇರೋಣ, ಬಾಲಿವುಡ್ ಬಾದ್ ಷಾ, ತಮ್ಮ ಅಭಿಮಾನಿಗಳಿಗೆ ಯಾವ ಸಿನಿಮಾ ಗಿಫ್ಟ್ ಕೊಡ್ತಾರೆ ಅಂತ.