ಅಂದು ನಡೆದಿತ್ತು ನಡೆದಾಡುವ ದೇವರ ಪವಾಡ ! ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಇವರು ನಿಜವಾಗಿಯೂ ದೇವರು..

Adhyatma
Advertisements

ಸ್ನೇಹಿತರೇ, ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿರುವ ಶಿವಕುಮಾರಸ್ವಾಮಿಯವರು ಶಿವಣ್ಣನಿಂದ ಶಿವಕುಮಾರಸ್ವಾಮಿಯಾಗಿದ್ದು ಹೇಗೆ ಗೊತ್ತಾ? ಪೂಜ್ಯ ಶ್ರೀಗಳ ಬದುಕಿನ ಕತೆಯನ್ನು ಹೇಳ್ತಿವಿ..ಮಾಗಡಿ ಹೊನ್ನೇಗೌಡ ಹಾಗೂ ದೇವಮ್ಮ ದಂಪತಿಗಳ ಹದಿಮೂರನೇ ಪುತ್ರನೇ ಶಿವಣ್ಣ. ಶಿವಣ್ಣ ಎಲ್ಲರಿಗಿಂತ ಕಿರಿಯವರಾಗಿದ್ದರು. 1907ಎಪ್ರೀಲ್ ಒಂದನೇ ತಾರೀಕಿನಿಂದು ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಿಸ್ತಾರೆ. ಹುಟ್ಟಿದಾಗ, ಬೆಳೆಯುವಾಗ ಮಾಗಡಿ ಹೊನ್ನೇಗೌಡ ದಂಪತಿಗಳಿಗೆ ಗೊತ್ತಿರಲಿಲ್ಲ, ಮುಂದೆ ಇವರು ಜಗತ್ ಪ್ರಸಿದ್ಧ ನಡೆದಾಡುವ ದೇವರಾಗುತ್ತಾರೆ ಅಂತ ಮರಳಿನಲ್ಲಿ ಅಕ್ಷರ ಬರೆಯುತ್ತಾ, ನಂತರ ಪಾಲನಹಳ್ಳಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಶಿವಣ್ಣ ಅವರು ಮುಗಿಸ್ತಾರೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನ ಕಳೆದುಕೊಂಡು ಅಕ್ಕಂದಿರ ಮುದ್ದಿನ ತಮ್ಮನಾಗಿ ಬೆಳೆಯುತ್ತಾರೆ.

Advertisements

ತುಮಕೂರಿನ ಸಮೀಪದ ನಾಗವಲ್ಲಿಯಲ್ಲಿ ಇಂಟರ್‌ಮಿಡಿಯೇಟ್ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸ್ತಾರೆ, ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಎಂಟ್ರೆನ್ಸ್ ಎಕ್ಸಾಮ್ ಬರೆದು ಪಾಸ್ ಆಗಿ ಅಲ್ಲಿ ಪದವಿ ಪಡೆಯಲು ಹೋಗ್ತಾರೆ. ಆಗ ಶಿವಣ್ಣ ಅವರಿಗೆ ತುಮಕೂರು ಸಿದ್ಧಗಂಗಾ ಮಠದ ಪೀಠಾಧಿಕಾರಿಗಳಾದ ಶ್ರೀ ಶ್ರೀ ಉದ್ಧಾನ ಶಿವಯೋಗಿಗಳ ಪರಿಚಯ ಆಗುತ್ತೆ, ಹಾಗೆಯೇ ಮಠದ ಕಿರಿಯ ಪೀಠಾಧಿಕಾರಿಗಳಾದ ಶ್ರೀ ಶ್ರೀ ಮರುಳಾರಾಧ್ಯರ ಪರಿಚಯವೂ ಆಗುತ್ತೆ. ಹಿರಿಯ ಹಾಗೂ ಕಿರಿಯ ಶ್ರೀಗಳ ಪರಿಚಯ ಶಿವಣ್ಣನ ಬದುಕಿಗೆ ಬೆಳಕಿನ ದಾರಿ ದೀಪವಾಗುತ್ತದೆ. ಹೀಗೆ ತುಮಕೂರು ಸಿದ್ಧಗಂಗಾ ಮಠಕ್ಕೆ ಆಗಾಗ ಶಿವಣ್ಣ ಬಂದು ಹೋಗಿ ಮಾಡ್ತಾ ಇರ‍್ತಾರೆ. ಒಂದು ಸಲ ತುಮಕೂರು ಜಿಲ್ಲೆಯನ್ನು ಮಹಾಮಾ’ರಿ ಪ್ಲೇಗ್ ಆವರಿಸಿದಾಗ ಆಹ ಸಹ ಶಿವಣ್ಣ ಜನರ ಶ್ರೇಯೋಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸಿದ್ದರು.

ಒಂದು ದಿನ ಇದ್ದಕ್ಕಿದ್ದಂತೆ ಕಿರಿಯ ಶ್ರೀಗಳಾದ ಮರುಳಾರಾಧ್ಯರ ಸ್ವಾಮಿಗಳು ದೈವೈಕ್ಯರಾಗ್ತಾರೆ. ಆಗ ಶ್ರೀಗಳ ಅಂತಿಮ ಸಂ’ಸ್ಕಾರಕ್ಕೆ ಅಂತ ಶಿವಣ್ಣ ಬೆಂಗಳೂರಿನಿಂದ ಬಂದಿದ್ದರು. ಶ್ರೀಗಳ ವಿಧಿವಿದಾನ ಮುಗಿದ ಮೇಲೆ ಮಠದಲ್ಲಿ ಹೊಸ ಗೊಂದಲ ಶುರು ಆಗ್ತದೆ. ಮುಂದಿನ ಕಿರಿಯ ಪೀಠಾಧಿಕಾರಿಗಳು ಯಾರು ಅಂತ ಆಲೋಚಿಸಲಿಕ್ಕೆ ಶುರು ಮಾಡ್ತಾರೆ. ಆದರೆ ಮಠದ ಹಿರಿಯ ಪೀಠಾಧಿಕಾರಿಗಳಾದ ಶ್ರೀ ಶ್ರೀ ಉದ್ಧಾನ ಶಿವಯೋಗಿಗಳು ಮಾತ್ರ ಯಾರೊಂದಿಗೂ ಚರ್ಚೆಸದೇ ನೇರವಾಗಿ ಶಿವಣ್ಣನೇ ಮಠಕ್ಕೆ ಮುಂದಿನ ಉತ್ತರಾಧಿಕಾರಿ ಅಂತ ಘೋಷಿಸ್ತಾರೆ. ಆಗ ಮರುಮಾತನಾಡದೇ ಶ್ರೀಗಳು ಕೊಟ್ಟ ಖಾವಿ ಬಟ್ಟೆಯನ್ನು ರುದ್ರಾಕ್ಷಿಯನ್ನು ಧರಿಸಿ, ಸನ್ಯಾಸತ್ವವನ್ನು ಸ್ವೀಕರಿಸಿ ಶಿವಣ್ಣ, ಶಿವಕುಮಾರಸ್ವಾಮಿಯಾಗಿ ಬದಲಾಗ್ತಾರೆ. ಇನ್ನೊಂದು ಮೆಚ್ಚುವ ವಿಚಾರ ಎಂದರೆ ತಾನೂ ಮಠದ ಉತ್ತರಾಧಿಕಾರಿಯಾದಾಗಲೂ ಶಿವಕುಮಾರಸ್ವಾಮಿಗಳು ಓದುವುದನ್ನು ನಿಲ್ಲಿಸುವುದಿಲ್ಲ.

ಮತ್ತೆ ಬೆಂಗಳೂರಿಗೆ ಹೋಗಿ ಸನ್ಯಾಸತ್ವಕ್ಕೆ ಕೊಂಚವೂ ದಕ್ಕೆ ಬಾರದಂತೆಯೇ ತನ್ನ ವಿಧ್ಯಾಭ್ಯಾಸ ಪೂರೈಸಿ ಮಠಕ್ಕೆ ಹಿಂದಿರುಗುತ್ತಾರೆ. ನಂತರ ಶ್ರೀ ಶ್ರೀ ಉದ್ಧಾನ ಶ್ರೀಗಳು ಶಿವೈಕ್ಯರಾದಾಗ ಮಠದ ಸಂಪೂರ್ಣ ಜವಬ್ದಾರಿಯನ್ನು ಶಿವಕುಮಾರಸ್ವಾಮಿಗಳು ವಹಿಸಿಕೊಳ್ತಾರೆ. ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದಿಂದ ಹಿಡಿದು, ಮಠದ ಆಡಳಿತ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ನಡೆದಾಡುವ ದೇವರು ಎಂದೇ ಪ್ರಖ್ಯಾತರಾದರು. 1930ರಿಂದ 2019 ಜನವರಿ 21ರವರೆಗೆ ಸುದೀರ್ಘ ಜನಸೇವೆ ಮಾಡಿದ ಶತಾಯುಷಿ ಶ್ರೀಗಳು ಜನವರಿ 21ರಂದು ಧೈವಾದೀನರಾಗ್ತಾರೆ. ಶ್ರೀಗಳು ನಮ್ಮನ್ನ ಅಗಲಿ ಎರಡು ವರ್ಷವಾದರೂ ಅದು ದೈಹಿಕವಾಗಿ ಮಾತ್ರ, ಮಾನಸಿಕವಾಗಿ ಶ್ರೀಗಳ ಅಸ್ತಿತ್ವ ಈ ಪ್ರಪಂಚದಲ್ಲಿ ಹಾಗೇಯಿದೆ, ಶ್ರೀಗಳ ಆದರ್ಶ, ಬದುಕಿನ ಮೌಲ್ಯ, ಮಾನವೀಯತೆ, ಸೇವಾಭಾವ ಎಲ್ಲವೂ ಇಂದಿಗೂ ಜೀವಂತ..