ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮದುವೆಯ ಲಗ್ನ ಪತ್ರಿಕೆ ಹೇಗಿತ್ತು ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಡಾ ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ ರಾಜ್‍ಕುಮಾರ್ರ ಹಿರಿಯಪುತ್ರ. ಸ್ಯಾಂಡಲ್ವುಡ್ ನ ಶಿವಣ್ಣ ಎಂದೇ ಖ್ಯಾತರಾಗಿರುವ ಶಿವರಾಜ್‍ಕುಮಾರ್ ಅವರು ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನಗಳ ಕಾಲ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನ್ನುವ ಬಿರುದು ಪಡೆದ ಹಿರಿಮೆ ಇವರದ್ದು.. ಇನ್ನು ಇದೀಗ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೇ 19ರಂದು ತಮ್ಮ ಪತ್ನಿಯ ಜೊತೆ 35ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದರು..ಶಿವಣ್ಣನಿಗೆ ಈಗ 58 ವರ್ಷ ವಯಸ್ಸಾಗಿದ್ದರೂ ಯುವ ನಟನಂತೆ ಪ್ರತೀ ಸಿನಿಮಾದಲ್ಲೂ ಅಭಿನಯ ಮಾಡುತ್ತಾರೆ. ಹಾಗಾಗಿಯೇ ಸಿನಿಮಾ ರಂಗದ ಅನೇಕ ನಟರು ಶಿವಣ್ಣ ನಿಮಗೆ ವಯಸ್ಸು ಆಗೋದೇ ಇಲ್ವಾ ಎಂದು ಹೇಳುವುದು ಉಂಟು..

ಮೇ 19/1986 ರಂದು ಶಿವರಾಜ್ ಕುಮಾರ್ ಹಾಗು ಗೀತಾ ಅವರ ಮದುವೆ ಅದ್ದೂರಿಯಾಗಿ ನಡೆಯಿತು. ಶಿವಣ್ಣ ಅವರು ಮದುವೆಯಾಗಿ ಇಂದಿಗೆ 35 ವರ್ಷಗಳೆ ಕಳೆದಿವೆ.. ಇನ್ನೂ ಶಿವರಾಜ್ ಕುಮಾರ್ ಅವರು ತಮ್ಮ‌ ವಿವಾಹ ವಾರ್ಷಿಕೋತ್ಸವದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ..ಶಿವಣ್ಣ ಹಾಗು ಗೀತಾ ಅವರದ್ದು ಆರೇಂಜ್ ಮ್ಯಾರೇಜ್ ಅಂತಾನೇ ಹೇಳಬಹುದು. ವಿಶೇಷ ಎಂದರೆ ಶಿವಣ್ಣ ಅವರು ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು..

ಡಾ ರಾಜ್ ಕುಮಾರ್ ಅವರ ಕುಟುಂಬದ ಮೇಲೆ ಅಪಾರ ಪ್ರೀತಿ ಅಭಿಮಾನ‌ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನವರು ತಮ್ಮ ಮಗಳಾದ ಗೀತಾ ಅವರನ್ನ ಶಿವಣ್ಣ ಅವರ ಜೊತೆ ಮದುವೆ ಮಾಡಿ ಕೊಟ್ಟರು. ಇನ್ನೂ ಇವರ ಮದುವೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ತುಂಬಾನೇ ವಿಜೃಂಭಣೆಯಿಂದ ನಡೆದಿತ್ತು.. ಶಿವಣ್ಣನವರ ಮದುವೆಗೆ ಸ್ಯಾಂಡಲ್ವುಡ್ ಎಲ್ಲಾ ನಟ ನಟಿಯರು, ಕಲಾವಿದರು ಸೇರಿದಂತೆ, ದಕ್ಷಿಣ ಭಾರತದ ಖ್ಯಾತ ನಟರಾದ ನಟ ಕಮಲಾ ಹಾಸನ್, ತಮಿಳು ನಾಡಿನ ಆರಾಧ್ಯ ದೈವ ಮೇರು ನಟ MG ರಾಮಚಂದ್ರನ್ (MGR), ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಕಲಾವಿದರು ಮದುವೆಗೆ ಬಂದು ಶಿವಣ್ಣ ಅವರಿಗೆ ಶುಭಾಶಯ ಕೋರಿ‌ ಹಾರೈಸಿದ್ದರು.

ಇನ್ನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ರಾಜಕಾರಣಿ ಆಗಿದ್ದ ಕಾರಣ, ಬಹುತೇಕ ಅಂದಿನ ರಾಜಕೀಯ ನಾಯಕರು ಅಸಂಖ್ಯಾತ ಅಭಿಮಾನಿಗಳು ಕೂಡ ನಟ‌‌ ಶಿವಣ್ಣ ಅವರ ಮದುವೆ ಪಾಲ್ಗೊಂಡಿದ್ದರು. ಇನ್ನೂ ನಟ ರಾಘವೇಂದ್ರ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಅಣ್ಣನ ಮದುವೆಯ ವಾರ್ಷಿಕೋತ್ಸವಕ್ಕೆ‌ ಶುಭಾಶಯ ತಿಳಿಸಿದ್ದಾರೆ. ಸಿನಿಮಾ ರಂಗದ ಅನೇಕ ನಟ ನಟಿಯರು ಹಾಗು ಅಭಿಮಾನಿಗಳು ಶಿವಣ್ಣ ಹಾಗು ಗೀತಾ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯವನ್ನ ತಿಳಿಸಿದರು..ಸ್ನೇಹಿತರೇ, ಶಿವರಾಜ್ ಕುಮಾರ್ ಅವರು ನಟಿಸಿರುವ ಯಾವ ಸಿನಿಮಾವನ್ನ ಪದೇ ಪದೇ ನೋಡಿದ್ರೂ ಬೇಜಾರಾಗೋದಿಲ್ಲ ಎಂದು ಕಾಮೆಂಟ್ ಮಾಡಿ ತಿಳಿಸಿ..