ನಮಸ್ತೇ ಸ್ನೇಹಿತರೇ, ಹಿಂದಿಯಿಂದ ಡಬ್ ಆಗಿ ಕನ್ನಡ ಕಿರುತೆರೆ ವಾಹಿಯಲ್ಲಿ ಪ್ರಸಾರವಾಗುತ್ತಿರುವ ಮಹಾನ್ ದೃಶ್ಯಕಾವ್ಯ ಮಹಾಭಾರತ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಾಸುದೇವ ಕೃಷ್ಣ ಸೇರಿಡ್ನಾತೆ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ತಮ್ಮ ಎದುರಲ್ಲೇ ಕೌರವ ಪಾಂಡವರ ಕತೆ ನಡೆಯುತ್ತದೆಯೋ ಏನೋ ಎಂಬಂತೆ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ ನಟರು. ಶ್ರೀ ಕೃಷ್ಣನ ಪಾತ್ರವಂತೂ ಅದ್ಭುತವಾಗಿ ಮೂಡಿ ಬಂದಿದ್ದು ಸ್ವಯಂ ಭಗವಾನ್ ಕೃಷ್ಣ ಧರೆಗಿಳಿದು ಬಂದಿದ್ದಾನೋ ಎಂಬಂತೆ ಭಾಸವಾಗುತ್ತಿದೆ. ಪ್ರೇಕ್ಷಕರು ಸಹ ಕೃಷ್ಣ ಪಾತ್ರ ಮಾಡಿದ ನಟನಿಗೆ ಫಿದಾ ಆಗಿಬಿಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಎಷ್ಟೋ ಜನ ಮಹಾಭಾರತ ಪ್ರಸಾರವಾಗುವ ವೇಳೆ ಕೃಷ್ಣನ ಪಾತ್ರದಾರಿ ಅವರನ್ನ ಕಂಡು ನಿಜವಾದ ದೇವರು ಸ್ವಯಂ ಶ್ರೀಕೃಷ್ಣನೇ ಬಂದಿದ್ದಾರೆ ಎಂದು ಆಶೀರ್ವಾದ ಪಡೆಯುತ್ತಿದ್ದರಂತೆ.

ಹೌದು, ಭಗವಾನ್ ಕೃಷ್ಣನ ಪಾತ್ರದಲ್ಲಿ ನಟಿಸಿ ಎಲ್ಲರ ಮನಗೆದ್ದಿರುವ ನಟ ಸೌರಭ್ ರಾಜ್ ಜೈನ್. ಶ್ರೀ ಕೃಷ್ಣನ ಪಾತ್ರಕ್ಕೆ ಜೀವ ತುಂಬಿದ ನಟ. ಕೃಷ್ಣ ಮಾತ್ರವಲ್ಲದೆ ಭಗವಾನ್ ವಿಷ್ಣು, ಶಿವ, ತಿರುಪತಿ ಬಾಲಾಜಿ ಸೇರಿದಂತೆ ಹಲವಾರು ಪೌರಾಣಿಕ ಪಾತ್ರಗಲ್ಲಿ ನಟಿಸಿದ್ದಾರೆಸೌರಭ್. ಇನ್ನು ಇವರಿಗೆ ಕೃಷ್ಣನ ಪಾತ್ರ ಮಾಡುವ ಸಮಯದಲ್ಲಿ ಒಂದು ಒಂದು ಪ್ರಶ್ನೆ ಹೆಚ್ಚಾಗಿ ಕಾಡುತ್ತಿತ್ತಂತೆ. ಅದು ಭಗವಂತ ಕೃಷ್ಣ ಏಕೆ ಯಾವಾಗಲು ಹಸನ್ಮುಖಿಯಾಗಿ ನಗುತ್ತಿರುತ್ತಾನೆ ಎಂದು..ದೇವಾಲಯದಲ್ಲಾಗಲಿ, ಫೋಟೋಗಳಲ್ಲಾಗಲಿ ಕೃಷ್ಣ ಸದಾ ಏಕೆ ನಗುತ್ತಿರುತ್ತಾನೆ ಎಂಬ ಪ್ರಶ್ನೆ ಅವರನ್ನ ಹೆಚ್ಚಾಗಿ ಕಾದಿದ್ದು ಹಲವರ ಬಳಿ ಇದರ ಬಗ್ಗೆ ಚರ್ಚೆ ಮಾಡಿದ್ದರಂತೆ ಸೌರಭ್.ಅದರೊಲ್ಲೊಬ್ಬರು “ನಿನಗೇನು ಬೇಕೋ ಅದನ್ನೇ ನೀನು ಮಾಡು, ಆಮೇಲೆ ನಾನು ಏನು ಮಾಡಬೇಕೋ ಅದನ್ನೇ ಮಾಡುವೆ” ಎಂದು ಹೇಳಿದ್ದು ಅದೂ ಸತ್ಯವೇ ಅಲ್ಲವೇ ಅಂತ ನನಗೆ ಅನ್ನಿಸಿತು ಎಂದು ಅವರು ಹೇಳಿದ್ದಾರೆ.

ಇನ್ನು ಹಿಂದಿಯಲ್ಲಿ ಮೂಡಿಬಂದಿರುವ ಶ್ರೀಕೃಷ್ಣನ ಪಾತ್ರಕ್ಕೆ ಅದ್ಭುತವಾಗಿ ಕಂಠ ದಾನ ಮಾಡಿದ ನಮ್ಮ ಕನ್ನಡಿಗ ಯಾರೆಂಬ ಕುತೂಹಲ ಎಲ್ಲರಲ್ಲೂ ಇದೆ..ಅಪ್ಪಟ ಕನ್ನಡಿಗರಾಗಿರುವ ಇವರ ಹೆಸರು ದೇವು ರೂಪಾಂತರ ಎಂದು. ರಂಗ ಭೂಮಿ ಕಲಾವಿದ ಕೂಡ. ಶ್ರೀಕೃಷ್ಣನಿಗೆ ಕನ್ನಡದ ಧ್ವನಿಯಾಗಿ ಜೀವ ತುಂಬಿದವರು..ಯಾರೆಂದು ತಿಳಿಯಲಿ ಕೆಳಗಿರುವ ಈ ವಿಡಿಯೋ ನೋಡಿ..
ಇನ್ನು ಸೌರಭ್ ಜೈನ್ ಅವರು ತಮ್ಮ ಪಾತ್ರ ಶುರುವಾಗುವ ಮುಂಚೆ ಹನುಮಾನ್ ಚಾಲೀಸಾ ಓದುತ್ತಿದ್ದರಂತೆ..ಹಾಗಾಗಿಯೇ ಅವರು ಮಹಾಭಾರತದ ಉದ್ದುದ್ದದ ಡೈಲಾಗ್ ಗಳನ್ನ ನಿರರ್ಗಳವಾಗಿ ಹೇಳಲು ಸಾಧ್ಯವಾಯಿತು ಎಂದು ಅವರೇ ಹೇಳಿದ್ದಾರೆ. ಇನ್ನು ಧಾರವಾಹಿ ಸಿನಿಮಾ ಸೇರಿದಂತೆ ರಿಯಾಲಿಟಿ ಶೋಗಳಲ್ಲೂ ಕೂಡ ನಟಿಸಿರುವ ಸೌರಭ್ ಜೈನ್ ರಿಯಾಲಿಟಿ ಷೋ ಗಳಲ್ಲೂ ಕೂಡ ಸ್ಪರ್ಧೆ ಮಾಡಿದ್ದಾರೆ. ಜೊತೆಗೆ ರೇಡಿಯೋ ನಿರೂಪಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ ಸೌರಭ್.

ಡಾನ್ಸ್ ಕ್ಲಾಸ್ ಒಂದರಲ್ಲಿ ಭೇಟಿಯಾದ ರಿಧಿಮಾ ಎಂಬುವವರ ಜೊತೆ ಸ್ನೇಹಯಾವಾಗಿ, ಸ್ನೇಹ ಪ್ರೀತಿಯಾಗಿ ಮದುವೆಯಾಗಿದ್ದು ಸೌರಭ್ ಜೈನ್ ಅವಳಿ ಜವಳಿ ಮಕ್ಕಳ ತಂದೆಯಾಗಿದ್ದಾರೆ. ಇನ್ನು ತಮ್ಮ ಪತ್ನಿಯ ಜೊತೆಗೆ ರಿಯಾಲಿಟಿ ಷೋವೊಂದರಲ್ಲಿ ಸ್ಪರ್ದಿಸಿದ್ದರು ಎಂದು ಹೇಳಲಾಗಿದೆ. ಇನ್ನು ಸೌರಭ್ ತುಂಬಾ ಚಿಕ್ಕವಯಸ್ಸಿಗೆ ಮದುವೆಯಾದ್ರು ಎಂಬ ಮಾತು ಕೂಡ ಇದೆ. ಇನ್ನು ಕೇವಲ ೩೪ ವರ್ಷದ ಈ ನಟನನ್ನ ಸ್ವಯಂ ಭಗವಂತನಂತೆ ಜನ ಆರಾಧಿಸುತ್ತಿರುವುದು ಸೌರಭ್ ಅವರ ಶ್ರೀ ಕೃಷ್ಣನ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಜೀವ ತುಂಬಿದ್ದಾರೆ ಎಂಬುದಕ್ಕೆ ಸಾಕ್ಷಿ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244