ನಾನು 4 ತಿಂಗಳ ಗರ್ಭಿಣಿ ಎಂದ ಶುಭಾ ಪೂಂಜಾ ! ಶಾಕ್ ಆದ್ರು ಬಿಗ್ ಬಾಸ್ ಸ್ಪರ್ಧಿಗಳು..

Entertainment
Advertisements

ಬಿಗ್‍ಬಾಸ್ ಮನೆಯ ಬಬ್ಲಿ ಬಬ್ಲಿ ಬೆಡಗಿ ನಟಿ ಶುಭಾ ಪೂಂಜಾ ಬಿಗ್ ಮನೆಯಲ್ಲಿ ಎಲ್ಲರನ್ನ ನಗಿಸ್ತಾ, ಮಗುವಿನ ಥರ ಕ್ಯೂಟ್ ಕ್ಯೂಟ್ ಆಗಿ ಆಡ್ತಿರ್ತಾರೆ. ಇವರ ಪೆದ್ದು ಪೆದ್ದು ತುಂಟಾಟವೇ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗೋದು. ಯಾವುದೇ ಟಾಸ್ಕ್ ತಮ್ಮ ಕೈನಲ್ಲಿ ಆಗದಿದ್ರು ಕಷ್ಟಪಟ್ಟಾದ್ರೂ, ಗೆಲ್ಲದಿದ್ರೂ ಟಾಸ್ಕ್ ಮಾತ್ರ ಮಾಡೇ ಮಾಡ್ತಾರೆ. ಬಿಗ್‍ಬಾಸ್ ಮನೆಯಲ್ಲಿ ಹೆಚ್ಚು ಪ್ರೇಕ್ಷಕರಿಗೆ ಎಂಟರ್‍ಟೈನ್‍ಮೆಂಟ್ ಕೊಡೋದೇ ಒಂದು ಮಂಜು ಪಾವಗಡ, ಮತ್ತೊಬ್ರು ನಟಿ ಶುಭಾ ಪೂಂಜಾ. ಬಟ್ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ದಿವ್ಯಾ ಸುರೇಶ್ ನಡುವೆ ಜಗಳದಿಂದಲೋ, ಚಕ್ರವರ್ತಿ ಚಂದ್ರಚೂಡ್ ಅವರಿಂದ ತುಂಬಾ ಸೈಲೆಂಟ್ ಆಗಿದ್ರು. ಅಲ್ಲದೇ, ದಿವ್ಯಾ ಸುರೇಶ್ ಜೊತೆ ಫ್ರೆಂಡ್‍ಶಿಪ್ ಕೂಡ ಕಟ್ಟಾಗೋ ಸಾಧ್ಯತೆ ಹೆಚ್ಚಾಗಿತ್ತು. ಶುಭಾ ಪೂಂಜಾ ಹೆಚ್ಚಾಗಿ ನಿಧಿ ಬಿಟ್ರೆ, ಮಂಜು ಪಾವಗಡ ಜೊತೆ ಬೆರೆಯುತ್ತಿದ್ದಾರೆ. ಅಲ್ಲದೇ, ನಟಿ ಶುಭಾ ಪೂಂಜಾಗೆ ಮದುವೆ ಫಿಕ್ಸ್ ಆಗಿರೋದು ಎಲ್ಲರಿಗೂ ಗೊತ್ತೇ ಇದೆ.

[widget id=”custom_html-4″]

Advertisements

ಸುಮಂತ್ ಅನ್ನುವವರ ಜೊತೆ ಮದುವೆ ಆಗುವುದಾಗಿ ಶುಭಾ ಅವರೇ ಹೇಳಿಕೊಂಡಿದ್ದಾರೆ. ನಟಿ ಶುಭಾ ಪೂಜಾ ಮತ್ತು ಅವರ ಉಡ್ಬಿ ಸುಮಂತ್ ಜೊತೆಗಿರೋ ಫೋಟೋ ಎಲ್ಲಡೆಯೂ ವೈರಲ್ ಆಗಿದೆ. ನೀವು ಕೂಡ ಅವರನ್ನ ನೋಡೇ ಇರ್ತಿರಿ. ಇನ್ನೇನು ವಯಸ್ಸಿಗೆ ಬಂದ ಮಗಳನ್ನ ಮದುವೆ ಮಾಡೋಣ, ಒಳ್ಳೆಯ ಕೆಲಸದಲ್ಲಿರೋ ಹುಡುಗ ಸಿಕ್ಕಿದ್ದಾನೆ ಅಂತ ನಟಿ ಶುಭಾ ಮನೆಯವರು ಯೋಚನೆ ಮಾಡ್ತಿದ್ದಂತೆ, ದಿಢೀರ್ ಅಂತ ನಟಿಯ ನಿರ್ಧಾರ ಬದಲಾಗಿತ್ತು. ಮದುವೆಯನ್ನ ಪೋಸ್ಟ್‍ಪೋನ್ ಮಾಡಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ರು ಶುಭಾ. ಅದಾದ ಮೇಲೆ ಮನೆಯಿಂದ ಸುಮಾರು ದಿನ ನಟಿ ಶುಭಾ ದೂರವಿದ್ರು. ಉಡ್ಬಿ ಸುಮಂತ್‍ನಿಂದಲೂ ನಟಿ ಶುಭಾ ದೂರವೇ ಇದ್ದಾರೆ. ಅದಾಗ್ಯೂ ನಟಿ ಶುಭಾ ಸಿಹಿಸುದ್ದಿ ಒಂದನ್ನ ಕೊಟ್ಟಿದ್ದಾರೆ. ನಾನು 4 ತಿಂಗಳ ಗರ್ಭಿಣಿಯಾಗಿದ್ದೇ ಅನ್ನೋ ಮೂಲಕ ಬಿಗ್ ಬಾಸ್ ಮನೆ ಮಂದಿಗೆಲ್ಲಾ ಶಾಕ್ ನೀಡಿದ್ದಾರೆ.

[widget id=”custom_html-4″]

ಅರೆ, ಬಿಗ್‍ಬಾಗ್ ಮನೆ ಪ್ರವೇಶಕ್ಕೂ ಮುನ್ನ ಯಾವುದೇ ಸುಳಿವನ್ನು ನೀಡದ ಶುಭ ಅದೇಗೆ ಪ್ರಗ್ನೆಂಟ್ ಆದ್ರು ಅಂತ ಎಲ್ಲರಿಗೂ ಕಾಮನ್ ಆಗಿ ಯೋಚನೆ ಬಂದೇ ಬಂದಿರುತ್ತೆ ಅಲ್ವಾ..? ಶುಭಾ ಪೂಂಜಾಗೆ ಇನ್ನೂ ಮದುವೆನೇ ಆಗಿಲ್ಲ. ಇನ್ನ ಪ್ರಗ್ನೆಂಟ್ ಎಲ್ಲಿ ಅಂತ ಅನ್ಕೊತ್ತಿದೀರಿ ತಾನೇ..? ಯಾಕಿಂಗಾಯ್ತು ಅಂತ ಹೇಳ್ತಿವಿ ಕೇಳಿ. ಬಿಗ್‍ಬಾಸ್ ಮನೆಯಲ್ಲಿ ಬೆಳಗ್ಗೆ ಏಳುತ್ತಲೇ ಶುಭಾ ಪೂಂಜಾ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ವಿವಾಹವಾಗಿ ತಾವು ಪ್ರಗ್ನೆಂಟ್ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ಇದನ್ನ ಕೇಳಿದ ಮನೆ ಮಂದಿ ಫುಲ್ ನಕ್ಕಿದ್ದಾರೆ. ಹೌದು, ತಮಗೆ ಬಿದ್ದ ಕನಸಿನ ಕುರಿತು ಶುಭಾ ಹೇಳಿದ್ದು, ಬೆಳಗ್ಗೆ ಏಳುತ್ತಲೇ ನಾನು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದೆ ಅನ್ನುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದಾರೆ. ಗುರುವಾರ ಮಂಜಾ, ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ತಕ್ಷಣ ಮದುವೆ ಮಾಡಿಕೊಳ್ತಿಯಾ? ಏನ್ ಕಥೆ ಅಂತ ಕೇಳುತ್ತಿದ್ದ. ಅದಕ್ಕೆ ನಾನು ಹು ಹೋದ್ ತಕ್ಷಣ ಆಗ್ತಿನಿ ಕಣೋ ಅಂತಿದ್ದೆ. ಹೌದು ಸಿಂಪಲ್ ಆಗಿಯಾದರೂ ಆಗು ಎಂದು ಮಂಜಾ ಹೇಳುತ್ತಿದ್ದ.

[widget id=”custom_html-4″]

ಹೀಗೆ ನನ್ನ ಮದುವೆ ಬಗ್ಗೆ ನಿನ್ನೆ ಮಾತನಾಡುತ್ತಿದ್ದೇವು. ಅದೇ ನನ್ನ ಮೈಂಡ್‍ನಲ್ಲಿ ಪ್ಲೇ ಆಗಿದೆ ಅನ್ಸುತ್ತೆ. ಅಚ್ಚರಿಯ ಕನಸು ಬಿದ್ದಿತ್ತು ಎಂದು ಮನೆ ತುಂಬಾ ಗೋಳಾಡುತ್ತಿದ್ದೇನೆ. ಇನ್ನೂ ಅಚ್ಚರಿ ಎಂಬಂತೆ ಬಿಗ್‍ಬಾಸ್ ಮನೆಯಲ್ಲಿ ಬಟ್ಟೆ ಮಡಚುತ್ತಿದ್ದೆ. ಬಳಿಕ ಓ ಹೆಂಗಪ್ಪ ಈಗ ಬಿಗ್‍ಬಾಸ್ ಮನೆಗೆ ಹೋಗೋದು ಅಂದುಕೊಳ್ತಿದ್ದೆ. ಇದನ್ನ ಕೇಳಿದ ಪ್ರಶಾಂತ್ ಸಂಬರಗಿ ಹಾಗೂ ಮನೆ ಮಂದಿ ಫುಲ್ ನಕ್ಕಿದ್ದು, ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿ, ಪ್ರಗ್ನೆಂಟ್ ಆಗ್ಬಿಟ್ಟೆ ಎಂದು ಜೋರಾಗಿ ನಕ್ಕಿದ್ದಾರೆ. ಅಲ್ಲದೇ ಮೊದಲೇ ಟಾಸ್ಕ್ ಮಾಡಲ್ಲ, ಇನ್ನ ಹೊಟ್ಟೆ ಇಟ್ಟುಕೊಂಡು ಹೇಗೆ ಟಾಸ್ಕ್ ಮಾಡೋದು ಎಂದು ಕೇಳಿ ನಕ್ಕಿದ್ದಾರೆ. ಬಳಿಕ ನಟಿ ಶುಭಾ ಪೂಂಜಾ ಅವರು, ಏನೆಲ್ಲಾ ಡ್ರೀಮ್ ಗೊತ್ತಾ ಎಂದು ಹೇಳಿ ಮಂದಹಾಸ ಬೀರಿದ್ದಾರೆ. ಆದ್ರೂ ಒಂದು ಕ್ಷಣ ಶುಭಾ ಪೂಂಜಾ ತಾನು ಗರ್ಭಿಣಿ ಅನ್ನುವ ಮೂಲಕ ಮನೆ ಮಂದಿಗೆಲ್ಲಾ ಚಮಕ್ ಕೊಟ್ಟಿದ್ದಂತೂ ಸತ್ಯ..