ಗಾಯಕಿಯ ಹಾಡಿಗೆ ಫಿದಾ..ದೊಡ್ಡ ಬಕೆಟ್ ಗಟ್ಟಲೆ ನೋಟು ಸುರಿದ ಅಭಿಮಾನಿಯ ವಿಡಿಯೋ ವೈರಲ್.!

Kannada Mahiti

ಸ್ನೇಹಿತರೆ ಗಾಯನ ಎಂಬುದೇ ಹಾಗೇನೆ, ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿಯೂ ಕೂಡ ಗಾಯನಕ್ಕೆ ತುಂಬಾನೇ ಬೆಲೆ ಇದೆ. ಜೊತೆಗೆ ಎಲ್ಲಾ ಕ್ಷೇತ್ರದ ಕಲಾವಿದರಿಗೂ ಕೂಡ ಬೆಲೆ ಇದೆ. ಈ ಗಾಯನಕ್ಕೆ ಸಂಬಂಧಿತವಾಗಿ ಸಾಕಷ್ಟು ಗಾಯಕರು ಹೆಚ್ಚು ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ. ಈ ಹಾಡುಗಾರಿಕೆಯ ಶಕ್ತಿಯೇ ಹಾಗಿರುತ್ತದೆ. ಒಬ್ಬ ಹಾಡುಗಾರ ಹಾಡನ್ನು ಹಾಡಲು ಮುಂದಾಗುತ್ತಿದ್ದಾರೆ ಎಂದ ತಕ್ಷಣವೇ ಆತನ ಕಂಠದ ಮೂಲಕ ಹೊರಬರುವ ಒಂದೊಂದು ಹಾಡಿನ ಸ್ವರಗಳು ಪದಗಳು ಸಾಕಷ್ಟು ಜನರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿರುತ್ತದೆ. ಹಾಗೆ ಸಂಗೀತಕ್ಕೆ ಅದರದ್ದೇ ವಿಶೇಷ ವೈಶಿಷ್ಟ್ಯತೆಯಿದೆ.

ಹೌದು ನಮ್ಮ ದೇಶದಲ್ಲಿ ಗಾಯನಕ್ಕೆ ತುಂಬಾ ಬೆಲೆ ಇದೆ. ಗಾಯಕರಿಗೂ ಕೂಡ ಅಷ್ಟೇ ಬೆಲೆ ಇದೆ. ಒಬ್ಬ ಗಾಯಕ ಸುಮಧುರ ಕಂಠದಿಂದ ಹಾಡುತ್ತಿದ್ದಾನೆ ಎಂದರೆ ಆತನಿಗೆ ತುಂಬಾನೇ ಪ್ರೀತಿ ಅಭಿಮಾನ ನೀಡುತ್ತಾರೆ. ಹಾಗೆ ಆತನ ಹಾಡಿಗೆ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಹೌದು ಇತ್ತೀಚಿಗಷ್ಟೇ ಗುಜರಾತಿ ಸಿಂಗರ್ ಒಬ್ಬರು ವೇದಿಕೆ ಮೇಲೆ ಹಾಡಿದ್ದು, ಇವರ ಹಾಡಿಗೆ ಮನಸೋತ ಒಬ್ಬ ಅಭಿಮಾನಿ ಇದ್ದಕ್ಕಿದ್ದಂತೆ ಬಕೆಟ್ ಒಳಗಿರುವ ನೋಟನ್ನೇ ಗಾಯಕಿ ಮೈಮೇಲೆ ಸುರಿದಿದ್ದಾನೆ. ಹೌದು ಗುಜರಾತ್ ನ ಈ ಗಾಯಕಿ ಹೆಸರು ಊರ್ವಶಿ ರಾಡಿಯಾ ಎಂದು. ಇವರು ತುಂಬಾನೇ ಸುಪ್ರಸಿದ್ಧ ಹಾಡುಗಾರ್ತಿ ಎಂದು ಕರೆಯಲಾಗುತ್ತದೆ.

ಈ ಗಾಯಕಿಯ ಕಂಠಕ್ಕೆ ದೊಡ್ಡ ಅಭಿಮಾನಿ ಬಳಗವಿದೆ. ಇವರ ಹಾಡಿಗೆ ಹೆಚ್ಚು ಅಭಿಮಾನಿಗಳು ವೇದಿಕೆ ಮೇಲೆ ನೋಡಿಯೇ ಮನಸೋತಿದ್ದಾರೆ. ಊರ್ವಶಿ ರಾಡಿಯಾ ಅವರೊಬ್ಬ ಜನಪದ ಗಾಯಕಿ. ಭಜನಾ ಪದಗಳನ್ನು ಕೂಡ ಹಾಡುತ್ತಾರೆ. ವೇದಿಕೆ ಮೇಲೆ ಭಜನೆಯ ಪದ ಹಾಡುತ್ತಿರುವಾಗ ಇವರ ಅಭಿಮಾನಿ ಒಬ್ಬ ಇವರ ಹಾಡಿಗೆ ಮನಸೋತು ಬಕೆಟ್ ಮೂಲಕ ಇವರ ತಲೆಯ ಮೇಲೆ ಹಣದ ಹೊಳೆಯನ್ನೇ ಹರಿಸಿದ್ದಾನೆ. ಹೌದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಗಾಯಕಿ ಊರ್ವಶಿ ಅವರು ಹೇಳುವ ಹಾಗೆ, ಆಗಾಗ ಅವರ ಅಭಿಮಾನಿಗಳು ಈ ರೀತಿ ವೇದಿಕೆ ಮೇಲೆ ಈ ಹಣದ ನೋಟಿನ ಮೂಲಕವಾಗಿ ಪ್ರೀತಿ ಅಭಿಮಾನ ತೋರಿಸುತ್ತಾರಂತೆ. ಈ ದುಡ್ಡನ್ನು ಊರ್ವಶಿ ಅವರು ಬಡ ಹೆಣ್ಣುಮಕ್ಕಳ ವಿವಾಹದ ಖರ್ಚಿಗೆ ಜೊತೆಗೆ ಅವರ ಸುತ್ತ ಮುತ್ತಲಿರುವ ಬಡಮಕ್ಕಳಿಗಾಗಿಯೇ ಈ ದುಡ್ಡನ್ನು ಮೀಸಲಿಡುತ್ತಾರೆ ಎನ್ನಲಾಗಿದೆ. ಈ ವಿಡಿಯೋ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..