ಹಾಲು ಮಾರಿಕೊಂಡು ಜೀವನ ನಡೆಸುತ್ತಿದ್ದ 26 ವರ್ಷದ ಹಳ್ಳಿಹುಡುಗಿ ಈಗ ಜಡ್ಜ್.!

Inspire

ನಮಸ್ತೇ ಸ್ನೇಹಿತರೇ, ಕಾಲವೊಂದಿತ್ತು, ಮಹಿಳೆಯರೆಂದರೆ ಕೇವಲ ಅಡುಗೆ ಕೋಣೆಗೆ ಮಾತ್ರ ಸೀಮಿತವಾದವರು ಎಂದು. ಆದರೆ ಹೆಣ್ಣು ಮನಸ್ಸು ಮಾಡಿದ್ರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಲೇಖನವೇ ಒಂದು ನೈಜ ನಿದರ್ಶನ. ಹೌದು, ವಿಧ್ಯೆ ಯಾರಪ್ಪನ ಸ್ವತ್ತಲ್ಲ. ಅವಿರತವಾದ ಪರಿಶ್ರಮ, ಗುರಿ ಇದ್ದಲ್ಲಿ ಯಾರೂ ಯಾವ ಸ್ಥಾನಕ್ಕಾದರೂ ಹೋಗಬಹುದು ಎಂಬುದಕ್ಕೆ ಈ ಹಾಲು ಮಾರುತ್ತಿದ್ದ ಯುವತಿಯೇ ಆತ್ತ್ಯುತ್ತಮ ನಿದರ್ಶನ. ಹಸುಗಳನ್ನ ಸಾಕಿ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಜನಿಸಿದ, ಈಗ ತನ್ನ ಮೊದಲ ಪ್ರಯತ್ನದಲ್ಲೇ ನ್ಯಾಯಾಂಗದ ಆತ್ತ್ಯುತ್ತಮ ಸ್ಥಾನವಾದ ಜಡ್ಜ್‌ ಸ್ಥಾನಗೇರಲು ಹೊರಟಿರುವ ಈ ಸೋನಲ್ ಶರ್ಮಾ ಎಂದು.

ರಾಜಸ್ಥಾನದ ಉದಯಪುರದವರಾದ ಸೋನಲ್ ಶರ್ಮಾ ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಖ್ಯಾಲಿ ಲಾಲ್ ಶಾರ್ಮ ಎಂಬುವವರ ಎರಡನೆಯ ಪುತ್ರಿ. ಇವರ ತಂದೆ ಹಸುಗಳನ್ನ ಸಾಕುತ್ತಿದ್ದರಿಂದ ಯುವತಿ ಸೋನಲ್ ಶರ್ಮಾ ಪ್ರತೀ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹಸುಗಳ ಬಳಿ ಸಗಣಿ ಎತ್ತಿ, ಶುಚಿ ಮಾಡಿ ಹಾಲು ಕರೆದು ಮಾರಿ ಬರುತ್ತಿದ್ದಳು. ಇದು ಅವರ ದಿನನಿತ್ಯದ ಕಾಯಕವಾಗಿತ್ತು. ಇನ್ನು ೨೬ವರ್ಷದ ಸೋನಲ್ ಶರ್ಮಾ ಇಷ್ಟೆಲ್ಲಾ ಪ್ರತಿದಿನದ ಕಾಯಕದ ನಡುವೆಯೂ ಬಿಎ, ಎಲ್‌ಎಲ್‌ಬಿ, ಎಲ್‌ಎಲ್‌ಎಂ ಪದವಿಗಳನ್ನ ಮಾಡಿದ್ದು ಈ ಮೂರರಲ್ಲಿಯೂ ಸಹ ಚಿನ್ನದ ಪದಕಗಳನ್ನ ತನ್ನದಾಗಿಸಿಕೊಂಡಿರುವ ಗಟ್ಟಿಗಿತ್ತಿ ಹಳ್ಳಿಹುಡುಗಿ.

ಇನ್ನು ವಿಶೇಷ ಎಂದರೆ ಸೋನಲ್ ಶರ್ಮಾ ಯಾವುದೇ ಟ್ಯೂಷನ್ ಅಥ್ವಾ ಕೋಚಿಂಗ್ ಕ್ಲಾಸ್ ಗಳಿಗೆ ಹೋಗಿಲ್ಲ. ದೊಡ್ಡ ದೊಡ್ಡ ಪುಸ್ತಕಗಳನ್ನ ಹೊಂದಿಸಲು ಆರ್ಥಿಕ ಸಮಸ್ಯೆ ಅಡ್ಡ ಬಂದ ಕಾರಣ ಗ್ರಂಥಾಲಯದಲ್ಲೇ ಓದಿ ಕಾಲೇಜಿಗೆ ಹೋಗುತ್ತಿದ್ದವರು. ಇನ್ನು ೨೦೧೮ರಲ್ಲಿ ನಡೆದ ರಾಜಸ್ಥಾನ ಜುಡಿಷಿಯಲ್ ಸರ್ವಿಸ್ ಪರೀಕ್ಷೆಯನ್ನ ತನ್ನ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ ಪ್ರತಿಭಾವಂತೆ ಈ ಯುವತಿ. ಇನ್ನು ಇದರ ರಿಸಲ್ಟ್ ಬಂದಾಗ ಸೋನಲ್ ಶರ್ಮಾ ವೈಟಿಂಗ್ ಲಿಸ್ಟ್ ನಲ್ಲಿ ಇದ್ದಳು. ಆದರೆ ತಾನು ಪಟ್ಟಿದ್ದ ಶ್ರಮದ ಪ್ರತಿಫಲ ಎಂಬಂತೆ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ತರಭೇತಿಗೆ ಹಾಜರಾಗದಿದ್ದಾಗ ರಾಜಸ್ಥಾನ ಸರ್ಕಾರವು ವೈಟಿಂಗ್ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು ತರಭೇತಿಗೆ ಸೇರಬೇಕೆಂದು ಸೂಚನೆ ಕೊಟ್ಟಿತ್ತು. ಕೇವಲ ಒಂದು ಅಂಕ ಕಡಿಮೆ ಇದ್ದ ಕಾರಣ ಸೋನಲ್ ಶರ್ಮಾ ವೈಟಿಂಗ್ ಲಿಸ್ಟ್ ನಲ್ಲಿ ಇರಬೇಕಾಯಿತು ಎಂದು ಹೇಳಲಾಗಿದೆ. ಆದರೆ ಅವರು ಪಟ್ಟಿದ್ದ ಶ್ರಮ ಅವರನ್ನ ಕೈಬಿಡಲಿಲ್ಲ. ಸೋನಲ್ ಶರ್ಮಾ ಅಧಿಕೃತವಾಗಿ ಜಡ್ಜ್ ಆಗಿ ನೇಮಕಗೊಂಡಳು.

ಇನ್ನು ತನ್ನ ಸಾಧನೆಯ ಬಗ್ಗೆ ಮಾತನಾಡಿರುವ ಸೋನಲ್ ಶರ್ಮಾ ಇದಕ್ಕೆಲ್ಲಾ ಕಾರಣ ತನ್ನ ತಂದೆ ತಾಯಿ ಪಟ್ಟ ಶ್ರಮ. ಕೊಡಿಸಿದ ಉತ್ತಮ ಶಿಕ್ಷಣ. ನಮ್ಮ ತಂದೆ ನನಗೆ ಶಿಕ್ಷಣ ಕೊಡಿಸುವ ಸಲುವಾಗಿ ತುಂಬಾ ಸಾಲಗಳನ್ನು ಕೂಡ ಮಾಡಿಕೊಂಡರು. ಈಗ ನಾನು ನನ್ನ ಹೆತ್ತವರಿಗೆ ಸಂತೋಷದ ಜೀವನ ನೀಡಬಲ್ಲೆ ಎಂದು ಅವರು ಹೇಳಿದ್ದರು. ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಮನೆಯ ಬಗ್ಗೆ ತನ್ನ ಸ್ನೇಹಿತರೊಂದಿಗೆ ಹೇಳಲು ನಾಚಿಕಪಟ್ಟಿದ್ದು ಉಂಟು. ಆದರೆ ಈಗ ನನ್ನ ತಂದೆತಾಯಿಗಳ ಬಗ್ಗೆ ನನಗೆ ಅಪಾರ ಹೆಮ್ಮೆ ಆಗುತ್ತಿದೆ ಎಂದು ಯುವತಿ ಸೋನಲ್ ಶರ್ಮಾ ಹೇಳಿದ್ದಾರೆ.