ಆಕ್ಸಿಜೆನ್ ಸಹಾಯ ಮಾಡಿ ಎಂದು ಸಿಎಂ ಹಾಗೂ ಜನರಿಗೆ ಕೇಳಿಕೊಂಡ ಸುರೇಶ್ ರೈನಾ ! ಆದ್ರೆ ಸೋನುಸೂದ್ ಮಾಡಿದ್ದೇನು ಗೊತ್ತಾ ?

Cinema
Advertisements

ಸ್ನೇಹಿತರೇ, ಈ ಕೊ’ರೋನಾ ಸೋಂಕು ದಿನದಿಂದ ದಿನಕ್ಕೆ ಇಡೀ ಭಾರತವನ್ನ ಆವರಿಸುತ್ತಲೇ ಇದೆ. ಬಡವ, ಬಲ್ಲಿದ, ಸೆಲೆಬ್ರೆಟಿ ಅನ್ನೋ ಭೇದ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಕಾಡುತ್ತಲಿದೆ. ಈ ಮ’ಹಾಮಾರಿಯಿಂದ ಕುಟುಂಬಗಳೇ ಇಲ್ಲವಾಗುತ್ತಿವೆ. ಇನ್ನು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆ’ಮ್ಲಜನಕದ ಜೊತೆಗೆ ಬೆಡ್ ಗಳ ಕೊರತೆ ಕೂಡ ಹೆಚ್ಚಾಗುತ್ತಿದೆ. ಸಾಮಾನ್ಯರು ಸೇರಿದಂತೆ ಸೆಲೆಬ್ರೆಟಿಗಳು ಕೂಡ ಬೆಡ್, ಆ’ಕ್ಸಿಜೆನ್ ಗಾಗಿ ಬೇಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಈಗ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರನಾಗಿರುವ ಸುರೇಶ್ ರೈನಾ ಅವರು ಕೂಡ ಆ’ಕ್ಸಿಜೆನ್ ಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಬೇಡಿಕೆಯಿಟ್ಟಿದ್ದಾರೆ.

[widget id=”custom_html-4″]

Advertisements

ಹೌದು, ಸುರೇಶ್ ರೈನಾ ಅವರ ಕುಟುಂಬದ ವ್ಯಕ್ತಿಗೂ ಕೊ’ರೋನಾ ಸೋಂಕು ತಗುಲಿದ್ದು, ಸೆಲೆಬ್ರೆಟಿಯಾಗಿರುವ ರೈನಾ ಕೂಡ ಸಂಕಟ, ಪರಿಸ್ಥಿತಿಯಲ್ಲಿದ್ದಾರೆ. ಹೌದು, ೬೫ವರ್ಷ ವಯಸ್ಸಾಗಿರುವ ರೈನಾ ಅವರ ಚಿಕ್ಕಮ್ಮನಿಗೂ ಸೋಂಕು ತಗುಲಿದ್ದು, ಉತ್ತರ ಪ್ರದೇಶದ ಮೀರತ್ ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅವರಿಗೆ ಆಕ್ಸಿಜೆನ್ ಸಿಲಿಂಡರ್ ಅವಶ್ಯಕತೆ ಇದ್ದು, ಸ್ವತಃ ಸುರೇಶ್ ರೈನಾ ಅವರೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಮತ್ತು ಜನರಿಗೆ ಟ್ವೀಟ್ ಮಾಡಿ ಆ’ಕ್ಸಿಜೆನ್ ಅವಶ್ಯಕೆತೆಇದೆ ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಸುರೇಶ್ ರೈನಾ ಅವರು ಟ್ವೀಟ್ ಮಾಡಿದ್ರು ಕೂಡ ಸಿಎಂ ಆದಿತ್ಯ ನಾಥ್ ಅವರಿಂದಾಗಲಿ, ಯಾರಿಂದಾಗಲಿ ಸಹಾಯ ಸಿಗಲಿಲ್ಲ.

[widget id=”custom_html-4″]

ಈಗ ನಟ ಸೋನು ಸೂದ್ ಅವರ ರೈನಾ ಸಹಾಯ ಮಾಡಲು ಮುಂದೆ ಬಂದಿದ್ದು, ಸುರೇಶ್ ರೈನಾ ಅವರು ಮಾಡಿರುವ ಟ್ವೀಟ್ ಗೆ ನನಗೆ ಬೇಕಾಗಿರುವ ಡೀಟೇಲ್ಸ್ ಅನ್ನ ಕಳುಹಿಸಿ ಕೊಡಿ ಸಹೋದರ, ನಾನು ಅತೀ ಶೀಘ್ರವಾಗಿ ಆ’ಕ್ಸಿಜೆನ್ ತಲುಪಿಸುವೆ ಎಂದು ರೀ ಟ್ವೀಟ್ ಮಾಡಿದ್ದಾರೆ. ಸುರೇಶ್ ರೈನಾ ಅವರು ಸೋನು ಸೂದ್ ಗೆ ಬೇಕಾದ ಡೀಟೇಲ್ಸ್ ಕಳುಹಿಸಿದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಸೋನು, ಇನ್ನು ಕೇವಲ ಹತ್ತು ನಿಮಿಷಗಳಲ್ಲಿ ನಿಮ್ಮ ಚಿಕ್ಕಮ್ಮ ಇರುವ ಆಸ್ಪತ್ರೆಗೆ ಆ’ಕ್ಸಿಜೆನ್ ಬಂದು ತಲುಪುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಸ್ನೇಹಿತರೇ, ನೋಡಿ ದೊಡ್ಡ ದೊಡ್ಡ ಸೆಲೆಬ್ರೆಟಿ ಗಳೇ ಆ’ಕ್ಸಿಜೆನ್ ಗಾಗಿ ಬೇಡಿಕೊಳ್ಳುತ್ತಿರುವಾಗ ಸಾಮಾನ್ಯರ ಪಾಡೇನು..ದಯವಿಟ್ಟು, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ, ತಪ್ಪದೆ ಮಾಸ್ಕ್ ಹಾಕಿ ಸ್ಯಾನಿಟೈಸರ್ ಬಳಸಿ, ಮನೆಯಲ್ಲಿದ್ದು ಸೇಫ್ ಆಗಿ ನಿಮ್ಮ ಕುಟುಂಬವನ್ನ ಈ ಸೋಂಕಿನಿಂದ ಕಾಪಾಡಿ ಎಂಬುದು ನಮ್ಮ ಕಳಕಳಿ..