ಈ ನಟಿಗೆ ಬೇರೆ ಕೆಲಸ ಇಲ್ಲ ಅನ್ನಿಸುತ್ತೆ..ಲಾಕ್ ಡೌನ್ ಕುರಿತು ಮೋದಿಯನ್ನ ವ್ಯಂಗ್ಯಮಾಡಿದ ನಟಿ ಮೇಲೆ ಕಿಡಿಕಾರಿದ ನೆಟ್ಟಿಗರು..

News
Advertisements

ಏನಾದರೂ ವಿವಾದ ಮಾಡಿ ಸುದ್ದಿಯಾಗಲು ಬಯಸುತ್ತಾರೆ ಅನೇಕರು. ಹಾಗೆಯೇ ತೆಲುಗು ಚಿತ್ರರಂಗದ ನಟಿ ಶ್ರೀರೆಡ್ಡಿ ಆಗಾಗ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುತ್ತಿರುತ್ತಾರೆ.ಈಗ ಪ್ರಧಾನಿ ಮೋದಿಯವರು ಲಾಕ್ ಡೌನ್ ಮೇ ೩ರ ತನಕ ವಿಸ್ತರಣೆ ಮಾಡಿರುವುದರ ಕುರಿತು ಮೋದಿ ಕುರಿತು ಮೇಲಿಂದ ಮೇಲೆ ಪ್ರಶ್ನೆಗಳನ್ನ ಕೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟಿ.

Advertisements

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೋದಿಯವರು ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ಕೊಟ್ಟಿದ್ದು, ಮತ್ತೆ ಮೇ ೩ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ನೀಡಿದ್ದಾರೆ. ಈ ಸೋಂಕಿಗೆ ಲಸಿಕೆ ಇಲ್ಲದ ಕಾರಣ ಸಾಮಾಜಿಕ ಅಂತರವೇ ಸದ್ಯಕ್ಕೆ ಇದಕ್ಕಿರುವ ಮದ್ದು. ಹಾಗಾಗಿ ಸಾಮಾನ್ಯ ಜನರಿಂದ ಪ್ರತಿಯೊಬ್ಬರೂ ಈ ನಿರ್ಧಾರವನ್ನ ಸ್ವಾಗತ ಮಾಡಿದ್ದಾರೆ. ಆದರೆ ನಟಿ ಶ್ರೀರೆಡ್ಡಿ ಮಾತ್ರ ಮೋದಿಯವರಿಗೆ ಪ್ರಶ್ನೆಗಳ ಪ್ರಶ್ನೆಗಳನ್ನ ಕೇಳುತ್ತಾ ವಿವಾದ ಮಾಡಿಕೊಂಡಿದ್ದಾರೆ.

ಇನ್ನು ನಟಿ ಫೇಸ್ಬುಕ್ ನಲ್ಲಿ ಕೇಳಿರುವ ಪ್ರಶ್ನೆಗಳು ಎರಡೆರಡು ಅರ್ಥವನ್ನ ಕಲ್ಪಿಸುತ್ತವೆ. ಪ್ರಧಾನಿ ಮೋದಿಯವರು ಮೇ ೩ರ ತನಕ ಲಾಕ್ ಡೌನ್ ವಿಸ್ತರಣೆ ಆಗಲಿದೆ ಎಂದು ಹೇಳಿದ್ದಾರೆ. ಇದರ ಮೂಲಕ ಆರೋಗ್ಯವಾಗಿ ಎಂದು ನೇರವಾಗಿ ಹೇಳಿದ್ದಾರೆ. ಇದರ ಜೊತೆಗೆ ಭಾರತದ ಆರ್ಥಿಕ ವ್ಯವಸ್ಥೆ ಕುಸಿದುಬಿದ್ದಿದೆ ಎಂದು ಹೇಳಿದ್ದು, ಪರೋಕ್ಷವಾಗಿ ಬಡವರಿಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ನಟಿ ಶ್ರೀರೆಡ್ಡಿ ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಮೋದಿಯವರ ನಿರ್ಧಾರದ ಕುರಿತು ವ್ಯಂಗ್ಯವಾಗಿ ಮಾತನಾಡಿರುವ ನಟಿ ಮೇ ೩ರ ಬಳಿಕ ಕೊರೋನಾ ವೈರಸ್ ಆಕಾಶಕ್ಕೆ ಶಿಫ್ಟ್ ಆಗಲಿದೆಯೇ ಎಂದು ಬರೆದುಕೊಂಡಿದ್ದು, ಬಡವರ ಬಗ್ಗೆ ಯೋಚಿಸಿ, ದಿನನಿತ್ಯದ ಬಳಕೆಯ ವಸ್ತುಗಳನ್ನತೆಗೆದುಕೊಳ್ಳಲಿಕ್ಕಾದರೂ ದುಡ್ಡು ಕೊಡಿ ಬರೆದುಕೊಂಡಿದ್ದು ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಮೇ ೩ರ ಬಳಿಕವೂ ಕೊರೋನಾ ಸೋಂಕಿತ ವ್ಯಕ್ತಿ ಹೊರಗಡೆ ಇದ್ದರೆ ಆತ ಸಾವಿರಾರು ಜನರಿಗೆ ಸೋಂಕನ್ನ ಹರಡಿಸಿರುತ್ತಾನೆ ಹಾಗೇನು ಮಾಡುತ್ತೀರಿ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದಾರೆ.

ಇನ್ನು ಶ್ರೀರೆಡ್ಡಿಯ ಈ ಪೋಸ್ಟ್ ಗೆ ನೆಟ್ಟಿಗರು ಸಖತ್ ಆಗೇ ತರಾಟೆ ತೆಗೆದುಕೊಂಡಿದ್ದಾರೆ. ಮೊದಲು ಜೀವ ಆಮೇಲೆ ಆರ್ಥಿಕತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೀಗೆ ಸುಮ್ಮನೆ ಪೋಸ್ಟ್ ಮಾಡುವುದನ್ನ ಬಿಟ್ಟು ಬಡವರು, ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಶ್ರೀರೆಡ್ಡಿ ಮೇಲೆ ಕಿಡಿಕಾರಿದ್ದಾರೆ.