ಸೃಜನ್ ಲೋಕೇಶ್ ಜೊತೆ ಎಂಗೇಜ್ಮೆಂಟ್ ಆದ ಬಳಿಕ ಅಸಲಿಗೆ ನಡೆದಿದ್ದೇನು ಗೊತ್ತಾ? ಕಡೆಗೂ ಅಸಲಿ ಸತ್ಯ ಬಿಚ್ಚಿಟ್ಟ ವಿಜಯಲಕ್ಷ್ಮಿ!

Cinema
Advertisements

ವಿಜಯ ಲಕ್ಷ್ಮಿ ಎಂದ ಕೂಡಲೇ ನಮಗೆ ಒಂದು ಕ್ಷಣ ವಿಷ್ಣುವರ್ಧನ್ ಅವರ ಸೂರ್ಯವಂಶ ಚಿತ್ರ ಕಣ್ಣು ಮುಂದೆ ಬರುತ್ತದೆ. ಸೇವಂತಿಯೇ ಸೇವಂತಿಯೇ ಎಂಬ ಹಾಡು ಕಿವಿಯಲ್ಲಿ ಗುನುಗುತ್ತದೆ. ಆದರೆ ಇತ್ತೀಚೆಗೆ ವಿಜಯ್ ಲಕ್ಷ್ಮಿಯವರು ಮಾ’ನಸಿಕ ಸ್ಥಿತಿ ಸಹಜವಾಗಿದೆ ಅನಿಸುವುದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ, ವಿವಾದಕ್ಕೆ ಗುರಿಯಾಗುತ್ತಾರೆ. ಯಾವ್ಯಾವುದೋ ವಿಷಯ ಮಾತನಾಡುತ್ತಾರೆ ತಮಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಈ ಬೆನ್ನಲ್ಲೇ ಅವರ ಕುರಿತಾದ ಲೇಖನಗಳು ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ, ಕೆಲ ಮಾಧ್ಯಮಗಳಲ್ಲಿ ಮೂಡಿ ಬರುತ್ತಿವೆ. ಕೆಲವರು ವಿಜಯಲಕ್ಷ್ಮಿ ಬಗ್ಗೆ ಕನಿಕರದ ಮಾತುಗಳನ್ನು ಆಡಿದ್ದಾರೆ. ಇನ್ನೂ ಕೆಲವರು ಅವರ ಬಗ್ಗೆ ಋಣಾತ್ಮಕವಾಗಿ ತಮಗೆ ತೋಚಿದ್ದು ಬರೆಯುತ್ತಿದ್ದಾರೆ. ಅದರಲ್ಲೂ ಸೃಜನ್ ಮತ್ತು ವಿಜಯಲಕ್ಷ್ಮಿ ಅವರ ಪ್ರೀತಿ ಮತ್ತು ಎಂಗೇಜ್ ಮೆಂಟ್ ಮುರಿದು ಬಿದ್ದ ಸುದ್ದಿ ತುಂಬಾ ವೈರಲ್ ಆಗಿದೆ. ವಿಜಯಲಕ್ಷ್ಮೀ ಸೃಜನ್ ಗೆ ಕೈ ಕೊಟ್ಟಳು ಎಂಬ ಲೇಖನಗಳು ವಿಜಯ ಲಕ್ಷ್ಮಿ ಯವರ ಗಮನಕ್ಕೆ ಬಂದಿದೆ ಮತ್ತು ಅದು ಅವರಿಗೆ ಬಹಳ ನೋವುಂಟುಮಾಡಿದೆ. ಈ ಕುರಿತು ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

[widget id=”custom_html-4″]

Advertisements

ನಾನು ಮತ್ತು ಸೃಜನ್ ಒಳ್ಳೆಯ ಸ್ನೇಹಿತರಾಗಿದ್ದೆವು. ನಮ್ಮ ಮನೆಯಲ್ಲಿ ಮೂರು ಜನ ಹೆಣ್ಣು ಮಕ್ಕಳು. ನಾವು ಒಂದು ರೀತಿ ಸಂಕಷ್ಟದಲ್ಲಿದ್ದೆವು. ನನಗೆ ಒಂದು ಒಳ್ಳೆಯ ಜೀವನ ಕೊಡುವ ಒಳ್ಳೆಯ ಮನಸ್ಸು ಹಾಗು ಉದ್ದೇಶದಿಂದ ಸೃಜನ್ ಅವರು ನನ್ನನು ಮದುವೆಯಾಗಲು ಮುಂದೆ ಬಂದರು. ಅವರ ಪ್ರೀತಿ ನನಗೂ ಒಪ್ಪಿಗೆಯಾಯಿತು. ಇಬ್ಬರ ಕುಟುಂಬದವರೂ ಒಪ್ಪಿದರು. ನಂತರ ನಮ್ಮಿಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆಯಿತು. ನಮ್ಮ ಮನೆಯವರೇ ಎಂಗೇಜ್ ಮೆಂಟ್ ನ ಎಲ್ಲಾ ಖರ್ಚು ಭರಿಸಿದ್ದರು. ಅಷ್ಟೆಲ್ಲ ಕರ್ಚು ಮಾಡಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಮುರಿದುಕೊಳ್ಳಲು ಯಾರು ತಾನೇ ಇಷ್ಟ ಪಡುತ್ತಾರೆ. ಅದರಲ್ಲೂ ತನ್ನನು ಪ್ರೀತಿಸುವ ಹುಡುಗನ ಜೊತೆ ಮದುವೆ ಮುರಿಯಬೇಕು ಎಂದು ಯಾವ ಹುಡುಗಿ ಇಷ್ಟ ಪಡುತ್ತಾಳೆ. ಆದರೆ ನಾನು ಅಂದು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ನಮ್ಮಿಬ್ಬರ ಒಳಿತಿಗಾಗಿ. ನನ್ನ ಮಾತೃ ಭಾಷೆ ತಮಿಳು. ಈ ಕುರಿತು ಸೃಜನ್ ಅವರ ಕುಟುಂಬದ ಸದಸ್ಯರಲ್ಲಿ ಅಸಮಾಧಾನ, ಬೇಸರವಿತ್ತು. ನಿಶ್ಚಿತಾರ್ಥದ ಸಂದರ್ಭದಲ್ಲಿ ಮತ್ತು ಅದರ ನಂತರವೂ ಇದರ ಬಗ್ಗೆ ಕುಟುಂಬದವರಲ್ಲಿ ಚರ್ಚೆಯಾಗುತಿತ್ತು. ಸೃಜನ್ ಮತ್ತು ನನ್ನ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ. ಆದರೆ ನಮ್ಮಿಬ್ಬರ ಕುಟುಂಬಗಳ ನಡುವೆ ಹೊಂದಾಣಿಕೆ ಕಾಣಿಸಲಿಲ್ಲ.

[widget id=”custom_html-4″]

ನನ್ನನು ಸೃಜನ್ ಕುಟುಂಬದವರು ಮನಸಾರೆ ಒಪ್ಪಿದ್ದಾರೆ ಎಂದು ನನಗೆ ಅನಿಸಲಿಲ್ಲ. ಆಗಲೇ ನಾನು ಸೃಜನ್ ಕೂರಿಸಿಕೊಂಡು ಕೆಲ ಮಾತುಗಳನ್ನು ಹೇಳಿದೆ. ಮದುವೆ ಎಂದರೆ ನಮ್ಮಿಬ್ಬರಿಗೆ ಸಂಭಂದ ಪಟ್ಟ ವಿಷಯವಲ್ಲ. ಎರಡು ಕುಟುಂಬದವರಿಗೆ ಸಂಭಂದಪಟ್ಟಿದ್ದು. ಒಂದು ವೇಳೆ ನನ್ನನ್ನು ನಿಮ್ಮ ಮನೆಯವರು ಮನಸಿಲ್ಲದೆ ನಿನ್ನ ಒತ್ತಾಯಕ್ಕೆ ಸೊಸೆ ಮಾಡಿಕೊಂಡರೆ ನಾಳೆ ನಿನ್ನ ಜೀವನಕ್ಕೆ ತೊಂದರೆಯಾಗುತ್ತದೆ. ಮುಂದೆ ಇದು ನಮ್ಮ ವೈವಾಹಿಕ ಜೀವನ ಹಾಳಾಗಲು ಕಾರಣವಾಗಬಹುದು. ಅಥವಾ ನೀನು ನಿನ್ನ ಮನೆಯವರಿಂದ ದೂರಾಗಬೇಕಾಗಿ ಬರುವುದು. ನಿನ್ನ ಮನೆಯವರು ತೋರಿಸಿದ ಹುಡುಗಿಯನ್ನು ಮದುವೆಯಾಗು. ಸುಖವಾಗಿ ಬಾಳು ಎಂದು ಹೇಳಿ ನನ್ನ ಮದುವೆಯನ್ನು ಮುರಿದುಕೊಂಡೆ. ಆ ನಂತರ ನಾನು ಅವರ ಜೀವನದಲ್ಲಿ ಹೋಗಿಲ್ಲ. ನಾನು ಅಂದು ಏನು ಆಸೆ ಪಟ್ಟಿದ್ದೆನೋ ಹಾಗೆ ಇಂದು ಸೃಜನ್ ಅವರು ಸುಖ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಈ ಕುರಿತು ನನಗೆ ತುಂಬಾ ಸಂತೋಷವಿದೆ. ಅಂದು ನಾವಿಬ್ಬರು ಕೂತು ಜವಬ್ದಾರಿಯಿಂದ ನಿರ್ಧಾರ ತೆಗೆದುಕೊಂಡಿದ್ದೆವು. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನೀವು ನಮ್ಮಿಬ್ಬರ ಸಂಬಂಧ, ಮದುವೆಯ ಬಗ್ಗೆ ದಯಮಾಡಿ ಏನೇನೋ ಸುದ್ದಿ ಹರಡಿಸಬೇಡಿ. ನನ್ನ ಬಗ್ಗೆ ಕೀಳಾಗಿ ಮಾತ ಮಾಡಬೇಡಿ. ಇದು ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಆಡಿರುವ ಮಾತುಗಳು.

[widget id=”custom_html-4″]

ಅಲ್ಲದೆ ಅವರು ಒಂದು ಅದ್ಬುತ ಮಾತೊಂದನ್ನು ಈ ಸಂದರ್ಭ ಹೇಳಿದ್ದಾರೆ. ಅದೇನೆಂದರೆ ಪ್ರೀತಿ ಎಂದರೆ ನಮಗೆ ಇಷ್ಟ ಅದವರನ್ನು ಪಡೆದುಕೊಳ್ಳುವುದು ಅಲ್ಲ. ಅವರು ಸಂತೋಷದಿಂದ ಬದುಕಲಿ ಎಂದು ಬಯಸುವುದು. ನಾನು ಕೂಡ ಅಂದು ಅದೇ ರೀತಿ ನಡೆದುಕೊಂಡಿದ್ದೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸೃಜನ್ ಅವರಿಗೆ ಕೈಕೊಟ್ಟು ವಿಜಯಲಕ್ಷ್ಮೀ ಬೀದಿಗೆ ಬಿದ್ದಳು ಎಂಬ ಮಾತುಗಳನ್ನು ಕೇಳಿ ಬಹಳ ಬೇಸರದಿಂದ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಸ್ವಲ್ಪ ಮಾನಸಿಕ ಸಮಸ್ಯೆ ಇರಬಹುದು ಆದರೆ ಮನಸು ತುಂಬಾ ಶುದ್ಧವಾಗಿಯೇ ಇದೆ. ಅವರಿಗೆ ಈ ಸಂದರ್ಭದಲ್ಲಿ ಆರ್ಥಿಕ ನೆರವು ಹಾಗೂ ಮಾನಸಿಕ ಬೆಂಬಲ ಅಗತ್ಯವಿದೆ. ಇಷ್ಟು ಸಿಕ್ಕರೆ ಅವರು ಮೊದಲಿನ ರೀತಿ ಆಗಬಹುದು. ಇಲ್ಲವೇ ಈಗಾಗಲೇ ವಿಜಯಲಕ್ಷ್ಮೀ ಎರಡು ಬಾರಿ ಆತ್ಮ ಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ ಮುಂದೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳ ಬಹುದು ಗೊತ್ತಿಲ್ಲ. ಇಂತಹ ಕಲಾವಿದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವುದು ಒಳಿತು.