2 ವರ್ಷದ ಬಾಲಕನಿಗೆ ಕಿಚ್ಚನಿಂದ ಪುನರ್ಜನ್ಮ ! ಬಾಲಕನ ಚಿಕಿತ್ಸೆಗೆ ಸುದೀಪ್ ನೀಡಿದ್ದೆಷ್ಟು ಗೊತ್ತಾ?

Cinema

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಎಡಗೈನಲ್ಲಿ ಮಾಡಿದ್ದು ಬಲಗೈಗೆ ಗೊತ್ತಾಗದಂತೆ ಸಹಾಯ ಮಾಡ್ತಾರೆ ನಮ್ಮ ಕಿಚ್ಚ. ಕರುನಾಡ ಮಗ ಕಿಚ್ಚ ಸುದೀಪ್ ಅನೇಕ ಸಮಾಜ ಸೇವೆಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಇವರು ಆ್ಯಂಗ್ರಿ ಮ್ಯಾನ್ ಸಹ ಹೌದು. ಕೂಲ್ ಕ್ಯಾಪ್ಟನ್ ಸಹ ಹೌದು. ಮನೆಯಲ್ಲಿ ಗುಡ್ ಕುಕ್ ಬೇರೆ. ಫ್ಯಾನ್ಸ್ ಗಳಿಗಂತೂ ಭಿನ್ನ ವಿಭಿನ್ನ ಸಿನಿಮಾಗಳನ್ನ ನೀಡಿ ರಂಜಿಸ್ತಾನೆ ಇರ್ತಾರೆ. ಕಿಚ್ಚ ಸುದೀಪ್ ಲುಕ್ ಗೆ, ಆ ಸ್ಟೈಲ್ ಗೆ ಫಿದಾ ಆಗದೇ ಇರೋರೇ ಇಲ್ಲ. ಇವನೊಂಥರ ರೂಲರ್, ಡಿಕ್ಟೆಟರ್, ಶಾಟ್೯ ಟೆಂಪರ್ ನಮ್ಮ ಕಿಚ್ಚ ಸುದೀಪ. ಮಲೆನಾಡಿನ ಹೆಮ್ಮೆಯ ಪುತ್ರ. ಸಿನಿಮಾ ಮಾತ್ರವಲ್ಲದೇ ತಮ್ಮ ಸಮಾಜ ಸೇವೆಗಳಿಂದಲೇ ಗುರುತಿಸಿಕೊಂಡಿರೋ ಕಿಚ್ಚ ಸುದೀಪ್, ಇದೀಗ ಮತ್ತೊಂದು ಸೇವೆ ಮಾಡಿ ಜನಮನ ಗೆದ್ದಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಮತ್ತೊಂದು ಸಾರ್ಥಕ ಸೇವೆ ನಡೆದಿದೆ. ಎರಡೂವರೆ ವರ್ಷದ ಬಾಲಕನ ಬಾಳಿಗೆ ಕಿಚ್ಚ ಸುದೀಪ್ ಬೆಳಕಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಯಡಗಾಲ ಗ್ರಾಮದ ನವೀನ್ ನಾಯಕ್ ಎಂಬುವವರ ಪುತ್ರ ಧನುಷ್ ಗೆ ಎಡಗಣ್ಣಿನ ಶಸ್ತ್ರ’ಚಿಕಿತ್ಸೆ ಅಗತ್ಯವಿತ್ತು. ಒಂಭತ್ತು ತಿಂಗಳ ಹಿಂದೆ ಧನುಷ್ ಗೆ ಚಿಕನ್ ಪಾಕ್ಸ್ ಆಗಿತ್ತು. ಮಗುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಚಿಕನ್ ಪಾಕ್ಸ್ ನಿಂದ ಕಣ್ಣಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಕಣ್ಣನ್ನ ತೆಗೆಯಲೇಬೇಕಾದ ಅನಿವಾರ್ಯತೆ ಎದುರಾಯಿತು. ಒಂದು ವೇಳೆ ಕಣ್ಣನ್ನ ಆಪರೇಷನ್ ಮಾಡಿ ತೆಗೆಯದೆ ಹೋದರೆ ಬಲಗಣ್ಣಿಗೂ ಕ್ಯಾನ್ಸರ್ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಕಳೆದ ಮೂರು ತಿಂಗಳ ಹಿಂದೆಯೇ ಶಸ್ತ್ರಚಿಕಿತ್ಸೆ ಮಾಡಿಸಲು ವೈದ್ಯರು ಸಲಹೆ ನೀಡಿದ್ದರು. ಆದರೆ, ಮಗುವಿನ ತಂದೆ ನವೀನ್ ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಮಗುವಿಗೆ ಆಪರೇಷನ್ ಮಾಡಿಸಲಾಗದೇ ಕುಟುಂಬಸ್ಥರು ಕಂಗಾಲಾಗಿದ್ದರು.

ಪರಿಸ್ಥಿತಿ ಕೈ ಮೀರಿದೆ ಅಂತ ನವೀನ್ ಕೊನೆಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಸದಸ್ಯರನ್ನ ಸಂಪರ್ಕ ಮಾಡಿ ಮಗುವಿನ ಆಪರೇಷನ್ ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಮಗುವಿನ ಆರೋಗ್ಯ ಪರಿಸ್ಥಿತಿ ಗಮನಿಸಿ ಕಣ್ಣಿನ ಆಪರೇಷನ್ ಗೆ ಅಗತ್ಯವಿರುವ ಹಣಕಾಸಿನ ಸಹಾಯ ಮಾಡಲು ಕಿಚ್ಚ ಚಾರಿಟೇಬಲ್ ಸೊಸೈಟಿ ಮುಂದಾಯ್ತು. ಸದ್ಯ ಧನುಷ್ ನಾಯಕ್ ಕಣ್ಣಿನ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಕ್ಯಾನ್ಸರ್ ಆಗಿರುವ ಕಣ್ಣನ್ನ ತೆಗೆದು ಹಾಕಿ ಕೃತಕ ಕಣ್ಣನ್ನ ಅಳವಡಿಸಿ, ಅದಕ್ಕೆ ಲೆನ್ಸ್ ಹಾಕಲಾಗಿದೆ. ಅಲ್ಲದೆ, ಆಪರೇಷನ್ ಆದ ಬಳಿಕ ಮೂರರಿಂದ ನಾಲ್ಕು ತಿಂಗಳು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದ್ದು, ಇದಕ್ಕೆ 2 ರಿಂದ 3 ಲಕ್ಷ ರೂಪಾಯಿ ಖರ್ಚಾಗಲಿದೆ. ಈ ಎಲ್ಲಾ ಚಿಕಿತ್ಸೆಯ ವೆಚ್ಚವನ್ನು ಕಿಚ್ಚ ಸುದೀಪ್ ಸೂಸೈಟಿ ಭರಿಸಲಿದೆ‌‌