ಕಿಚ್ಚ ಸುದೀಪ್ ತಲೆ ತಗ್ಗಿಸುವಂತೆ ಮಾಡಿದ ಮಗಳು ಸಾನ್ವಿ !ಅಷ್ಟಕ್ಕೂ ಆಗಿದ್ದೇನು ಗೊತ್ತಾ ?

Cinema
Advertisements

ಕಿಚ್ಚ ಸುದೀಪ್ ಕನ್ನಡದ ಹೆಮ್ಮೆಯ ನಟ. ಕರ್ನಾಟಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್ ನಟ. ಹೀಗೆ ತಮ್ಮದೇ ಆದ ಘನತೆ ಗೌರವ ಉಳ್ಳ ವ್ಯಕ್ತಿಗಳು ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳುವ ಸ್ವಲ್ಪ ಎಚ್ಚರದಿಂದ ಇರುವುದು ಅಗತ್ಯ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಆದಷ್ಟು ಜವಾಬ್ದಾರಿಯಿಂದ ಅದೆದುಕೊಳ್ಳುವುದು ಉತ್ತಮ. ಇಲ್ಲವಾದರೆ ವಿವಾದಗಳಿಗೆ ಗುರಿಯಾಬೇಕಾಗುತ್ತದೆ. ಈಗ ಕಿಚ್ಚ ಸುದೀಪ್ ಮಗಳು ಸಾನ್ವಿ ಇದೇ ರೀತಿ ಎಡವಟ್ಟು ಮಾಡಿಕೊಂಡಿದ್ದಾರೆ. ತನ್ನ ತಂದೆಗೆ ಮುಜುಗರ ವಾಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. ಸಾನ್ವಿಯವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮಗೆ ಏನಾದರೂ ಪ್ರಶ್ನೆ ಕೇಳಬಹುದು ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

[widget id=”custom_html-4″]

Advertisements

ಸಾನ್ವಿ ಹೀಗೆ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಿಮ್ಮ ಮಾತೃ ಭಾಷೆ ಯಾವುದು ಎಂಬ ಪ್ರಶ್ನೆಗೆ ತಮ್ಮ ಮಾತೃ ಭಾಷೆ ಮಲೆಯಾಳಂ ಎಂದು ಉತ್ತರಿಸಿದ್ದಾರೆ. ಇದನ್ನು ಕಂಡ ಕನ್ನಡಿಗರಿಗೆ ಬಹಳ ಬೇಸರವಾಗಿದೆ ಅದರಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದೆ. ಸುದೀಪ್ ಅಪ್ಪಟ ಕನ್ನಡಿಗ. ಅವರು ಮೂಲತಃ ಶಿವಮೊಗ್ಗದವರು. ಅವರ ತಂದೆ ತಾಯಿ ಕೂಡ ಅಪ್ಪಟ ಕನ್ನಡಿಗರು. ಸುದೀಪ್ ಅವರಿಗೆ ಕನ್ನಡದ ಮೇಲೆ ಎಷ್ಟು ಅಭಿಮಾನ ಗೌರವವಿದೆ ಎಂದರೆ ಅವರು ಹೋದಲ್ಲಿ ಬಂದಲ್ಲಿ ಕನ್ನಡ ಬಗ್ಗೆ ಕನ್ನಡ ಚಿತ್ರ ರಂಗದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಇತ್ತೀಚೆಗೆ ನಟನೊಬ್ಬ ಸುದೀಪ್ ಕುರಿತು ಇದನ್ನೇ ಹೇಳಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಭಾಷಣ ಮಾಡುವಾಗ ಯಾವುದೇ ಸಂಕೋಚವಿಲ್ಲದೆ ಮೊದಲು ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ವಂದಿಸುತ್ತಾ ಮಾತು ಪ್ರಾರಂಭಿಸುತ್ತಾರೆ. ಪರ ಭಾಷೆಯಲ್ಲಿ ತಮಗೇ ಅಪಾರ ಸ್ನೇಹಿತರು ಅಭಿಮಾನಿ ಬಳಗ ಇದ್ದರೂ ಎಂದು ಕನ್ನಡವನ್ನ ಎಂದೂ ಬಿಟ್ಟುಕೊಟ್ಟಿಲ್ಲ. ಬಕೆಟ್ ಹಿಡಿಯುವ ಕೆಲಸವನ್ನೂ ಮಾಡಿಲ್ಲ. ಸುದೀಪ್ ಇಂದಿಗೂ ಕನ್ನಡದ ಹೆಮ್ಮೆಯ ವ್ಯಕ್ತಿಯಾಗಿದ್ದಾರೆ ಎಂಬುದು ಸಂತೋಷದ ವಿಷಯ. ಇಂತಹವರ ಪುತ್ರಿ ಕನ್ನಡವನ್ನು ತನ್ನ ಮಾತೃ ಭಾಷೆ ಎಂದು ತಿಳಿದುಕೊಳ್ಳದೇ ಇರುವುದು ವಿಷಾದಕರ.

[widget id=”custom_html-4″]

ಮಾತೃ ಭಾಷೆ ಎಂದರೆ ನಮ್ಮ ತಾಯಿ ಮಾತನಾಡುವ ಭಾಷೆ ಎಂಬ ಅರ್ಥ ಬರುವುದಿಲ್ಲ. ಮಾತೃ ಭಾಷೆ ಎಂದರೆ ನಮ್ಮ ನೆಲದ ಭಾಷೆ. ನಮಗೆ ಉಸಿರು ನೀಡುವ ಭಾಷೆ. ನಾವು ಯಾವ ವಂಶಕ್ಕೆ ಸೇರುತ್ತೇವೋ ಅವರ ಮೂಲತಃ ಭಾಷೆ. ಆದರೆ ಯಾಕೋ ಇದು ಸಾನ್ವಿ ಅವರಿಗೆ ಅರ್ಥವಾಗಿಲ್ಲ ಅನಿಸುತ್ತದೆ. ಅವರದು ಇನ್ನೂ ಚಿಕ್ಕ ವಯಸ್ಸು. ಚಿಕ್ಕ ಪುಟ್ಟ ತಪ್ಪುಗಳು ಆಗುವುದು ಸಹಜ. ಅದನ್ನು ಕ್ಷಮಿಸ ಬಹುದು. ಆದರೆ ಒಬ್ಬ ಕನ್ನಡದ ಹೆಮ್ಮೆಯ ವ್ಯಕ್ತಿಯ ಮಗಳಾಗಿದ್ದಿ ನಾಡು ನುಡಿಯ ಬಗ್ಗೆ ಮಾತನಾಡುವಾಗ ತುಂಬಾ ಎಚ್ಚರದಿಂದ ಇರುವುದು ಒಳಿತು. ಅಂದಹಾಗೆ ಸಾನ್ವಿಯ ತಾಯಿ ಅಂದರೆ ಸುದೀಪ್ ಅವರ ಪತ್ನಿ ಮೂಲತಃ ಕೇರಳದವರು. ಅವರ ಮಾತೃ ಭಾಷೆ ಮಲೆಯಾಳಂ. ಆದರೆ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸುದೀಪ್ ಮತ್ತು ಪ್ರಿಯಾ ಅವರದು ಪ್ರೇಮ ವಿವಾಹ. ಮದುವೆಯ ನಂತರ ಪ್ರಿಯಾ ಕನ್ನಡವನ್ನು ಚೆನ್ನಾಗಿ ಕಲಿತರು.ಸುದೀಪ್ ಅವರ ಕುಟುಂಬದವರ ಜೊತೆಗೂ ಕನ್ನಡದಲ್ಲೇ ಮಾತನಾಡಲು ಪ್ರಾರಂಭಿಸಿದರು. ಈಗ ಅವರು ಒಬ್ಬ ಹೆಮ್ಮೆಯ ಕನ್ನಡಿತಿಯಾಗಿ ಬದುಕುತ್ತಿದ್ದಾರೆ. ಹೀಗೆ ಮನೆಯವರೆಲ್ಲಿ ಕನ್ನಡದಲ್ಲೇ ಮಾತನಾಡುವಾಗ ತಮ್ಮ ಮಾತೃ ಭಾಷೆ ಮಲೆಯಾಳಂ ಹೇಗಾಯಿತು ಗೊತ್ತಿಲ್ಲ. ಆದರೆ ಈ ವಿಷಯವಾಗಿ ಸಾನ್ವಿ ಯವರ ಜೊತೆ ಸುದೀಪ್ ಕೂಡ ಟೀಕೆಗೆ ಗುರಿಯಾಗುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸುದೀಪ್ ಅವರನ್ನು ಟ್ರೊಲ್ ಮಾಡಲಾಗುತ್ತಿದೆ.

[widget id=”custom_html-4″]

ಸುದೀಪ್ ಎಲ್ಲ ಭಾಷೆಗಳನ್ನೂ ಮಾತನಾಡುತ್ತಾರೆ ಆದರೆ ಅವರಿಗೆ ಮಲೆಯಾಳಂ ಬರುವುದಿಲ್ಲ ವಂತೆ ಏಕೆಂದರೆ ಅದು ತುಂಬಾ ಕಷ್ಟ ಎಂದು. ಇದನ್ನು ಸ್ವತಃ ಸುದೀಪ್ ಅವರೇ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಇಂತಹವರ ಮಗಳು ಅದೇಗೆ ತನ್ನ ಮಾತೃ ಭಾಷೆ ಮಲೆಯಾಳಂ ಎಂದು ಸಾರ್ವಜನಿಕವಾಗಿ ಹೇಳಿದರು ಗೊತ್ತಿಲ್ಲ. ಒಂದು ವೇಳೆ ಸಾನ್ವಿ ಯವರ ತಾಯಿ ಪ್ರಿಯಾ ಅವರ ಮಾತೃ ಭಾಷೆ ಮಲೆಯಾಳಂ ಆಗಿರುವುದರಿಂದ ಗೊತ್ತಿಲ್ಲದೆ ಹಾಗೆ ಹೇಳಿದ್ದರೂ ಅದೂ ಸಹ ತಪ್ಪಾಗುತ್ತದೆ. ಏಕೆಂದರೆ ತಾವು ಹೀಗೆ ಹೇಳಿದರೆ ತಮ್ಮ ತಂದೆಯನ್ನು ಪ್ರೀತಿಯಿಂದ ಇಷ್ಟು ಎತ್ತರಕ್ಕೆ ಬೆಳೆಸಿದ ಕೋಟಿ ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆಯಾಗುತ್ತದೆ, ಎಂದು ಯೋಚಿಸಬೇಕಾಗುತ್ತದೆ. ಹುಟ್ಟಿದ್ದು ಕನ್ನಡ ಮಣ್ಣಲ್ಲಿ, ಅಪ್ಪಟ ಕನ್ನಡದ ಕುಟುಂಬದಲ್ಲಿ, ಇಷ್ಟೆಲ್ಲ ಯಶಸ್ಸು ಕೀರ್ತಿ ದೊರೆತಿರುವುದು ಕನ್ನಡಿಗರಿಂದ ಆದರೆ ತಮ್ಮ ಮಾತೃ ಭಾಷೆ ಕನ್ನಡ ಎಂಬುದು ಸಾನ್ವಿಗೆ ಅರಿವಿಲ್ಲ. ಇದು ನಿಜಕ್ಕೂ ಸುದೀಪ್ ಅವರು ತಲೆ ತಗ್ಗಿಸುವ ವಿಚಾರ. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳುವ ವರು ನಾಡು ನುಡಿಯ ವಿಚಾರದಲ್ಲಿ ತುಂಬಾ ಜವಾಬ್ದಾರಿಯಿಂದ ನಡೆದುಕೊಳ್ಳ ಬೇಕಾಗುತ್ತದೆ. ಇದೆಲ್ಲ ಸುದೀಪ್ ಅವರ ಗಮನಕ್ಕೆ ಬರುವುದು ಮೊದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಕುರಿತು ಸುದೀಪ್ ಹೇಗೆ ಪ್ರತಿಕ್ರಿಯಿಸುತ್ತಾರೆ ಮಗಳಿಗೆ ಬುದ್ದಿ ಮಾತುಗಳನ್ನು ಹೇಳುತ್ತಾರೋ ಅಥವಾ ಸಮರ್ಥಿಸಿಕೊಳ್ಳುತ್ತಾರೋ ಕಾದು ನೋಡಬೇಕು.