ಬಿಗ್ ಬಾಸ್ ನಿಂದ ದೂರ ಉಳಿಯಲಿದ್ದಾರೆ ಸುದೀಪ್ ! ಈ 3ನಟರಲ್ಲಿ ಯಾರಾಗ್ತಾರೆ ಬಿಗ್ ಬಾಸ್ ನಿರೂಪಕ? ನಿಮ್ಮ ಆಯ್ಕೆ ಯಾರು ?

Advertisements

ಸ್ನೇಹಿತರೇ, ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಎಂದರೆ ಮೊದಲು ನೆನಪಿಗೆ ಬರುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಬಿಗ್ ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದಲೂ ಸುದೀಪ್ ಅವರು ನಿರೂಪಕರಾಗಿದ್ದು ತುಂಬಾ ಅಚ್ಚುಕಟ್ಟಾಗಿ ನಡೆಸುಕೊಡುತ್ತಿದ್ದಾರೆ. ಹಾಗಾಗಿ ಸುದೀಪ್ ಅವರು ಇಲ್ಲದ ಬಿಗ್ ಬಾಸ್ ಕಾರ್ಯಕ್ರಮವನ್ನ ಕನಸಿನಲ್ಲೂ ನೆನಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಸುದೀಪ್ ಅವರು ಬಿಗ್ ಬಾಸ್ ಸೀಸನ್ ೮ರ ಕೆಲವು ಎಪಿಸೋಡ್ ಗಳಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಹಾಗಾದ್ರೆ ಯಶಸ್ವಿಯಾಗಿ ಬಿಗ್ ಬಾಸ್ ಶೋಗಳನ್ನ ನಡೆಸಿಕೊಡುತ್ತಾ ಬಂದಿರುವ ಸುದೀಪ್ ಅವರು ದೂರ ಉಳಿಯುತ್ತಿರುವುದೇಕೆ ? ಆ ಎಪಿಸೋಡ್ ಗಳ ನಿರೂಪಕರು ಯಾರಾಗಲಿದ್ದಾರೆ ಎಂಬುದನ್ನ ತಿಳಿಯೋಣ ಬನ್ನಿ..

[widget id=”custom_html-4″]

Advertisements

ಹೌದು, ಸುದೀಪ್ ರವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದು, ವೈದ್ಯರು ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಈಗಾಗಲೇ ಕೊ’ರೋನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗಿ ಹರಡುತ್ತಿರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ದಿವಸಗಳ ಮಟ್ಟಿಗೆ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೆ ಕಾರಣದಿಂದಲೇ ಬಿಗ್ ಬಾಸ್ ಕೆಲ ಶೋಗಳಿಂದ ಸುದೀಪ್ ದೂರ ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇದೆ ವೇಳೆ ಸುದೀಪ್ ಮತ್ತೆ ಮರಳೋವರೆಗೂ ಯಾರು ನಿರೂಪಕರಾಗಲಿದ್ದಾರೆ ಎಂಬ ವಿಷಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.

[widget id=”custom_html-4″]

ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ನ ಮುಂದಿನ ಎಪಿಸೋಡ್ ಗಳ ನಿರೂಪಕರು ಈ ನಟರಾದರೆ ಚೆನ್ನಾಗಿರುತ್ತೆ ಎಂಬ ಚರ್ಚೆ ನಡೆಯುತ್ತಿದೆ. ಹೌದು, ಖ್ಯಾತ ನಟ, ಉತ್ತಮ ವಾಗ್ಮಿಯೂ ಆಗಿರುವ ನಿರೂಪಕರಾಗಿಯೂ ಯಶಸ್ವಿಯಾಗಿರುವ ರಮೇಶ್ ಅರವಿಂದ್ ಅವರು ಬಿಗ್ ಬಾಸ್ ನಿರೂಪಣೆಗೆ ಸೂಕ್ತರು ಎಂದು ಮೊದಲನೇ ಆಯ್ಕೆಯಾಗಿ ಕೇಳಿಬರುತ್ತಿದೆ.

ಇನ್ನು ಎರಡನೇ ಆಯ್ಕೆಯಲ್ಲಿ ಸ್ಟಾರ್ ನಟ, ಕನ್ನಡ ಕೋಟ್ಯಧಿಪತಿಯನ್ನ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಪುನೀತ್ ರಾಜ್ ಕುಮಾರ್ ಅವರ ಹೆಸರು ಕೇಳಿಬರುತ್ತಿದೆ. ಇನ್ನು ಮೂರನೆಯ ಆಯ್ಕೆಯಲ್ಲಿ ಕೆಜಿಎಫ್ ಹೀರೊ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ಕೇಳಿಬರುತ್ತಿರುವುದು ವಿಶೇಷವಾಗಿದೆ. ಸ್ನೇಹಿತರೇ, ಬಿಗ್ ಬಾಸ್ ನಿರೂಪಣೆಗೆ ಮೂವರು ನಟರು ಸೂಕ್ತರು ಎನ್ನುವಲ್ಲಿ ಯಾವುದೇ ಸಂದೇಹ ಇಲ್ಲ. ಆದರೆ ನಿಮ್ಮ ಪ್ರಕಾರ ಯಾವ ನಟ ಬಿಗ್ ಬಾಸ್ ನಿರೂಪಣೆ ಮಾಡಿದ್ರೆ ಚೆನ್ನಾಗಿರುತ್ತೆ ಎಂಬುದನ್ನ ಕಾ’ಮೆಂಟ್ ಮಾಡಿ ತಿಳಿಸಿ..