ಸದ್ದಿಲ್ಲದೇ ಸುಧಾಮೂರ್ತಿಯವರು ಮಾಡಿರುವ ಕೆಲಸ ಏನು ಗೊತ್ತಾ ? ನಿಜಕ್ಕೂ ಕರುಣಾಮಯಿ ತಾಯಿ ನೀವು..

Inspire Kannada News
Advertisements

ಸ್ನೇಹಿತರೇ, ರಾಜ್ಯದ ಜನರು ಸಂಕಷ್ಟದ ಪರಿಸ್ಥಿತಯಲ್ಲಿದ್ದಾರೆ ಎಂದು ತಿಳಿದಾಗ ಮೊದಲು ಮುಂದೆ ಬರುವುದೇ ಕರುನಾಡಿನ ಅಮ್ಮನೆನೆಸಿರುವ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಕೂಡ ಆಗಿರುವ ಸುಧಾಮೂರ್ತಿ ಅಮ್ಮನವರು. ಸುಧಾಮೂರ್ತಿಯವರ ದಾನ ಧರ್ಮದ ಬಗ್ಗೆ ಮತ್ತೆ ಮೆತ್ತೆ ಹೇಳುವ ಅವಶ್ಯಕತೆಯೇ ಇಲ್ಲ. ನಿಮಗೆಲ್ಲಾ ಗೊತ್ತಿರುವ ವಿಷಯವೇ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ, ಕಳೆದ ವರ್ಷ ಬಂದ ಕೊ’ರೋನಾದ ಸಮಯದಲ್ಲಿ ಸುಧಾಮೂರ್ತಿಯವರು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ್ದರು. ಈಗ ಮತ್ತೆ ಈ ಸೋಂಕಿನಿಂದಾಗಿ ಜನ ಸಂಕಷ್ಟದ ಪರಿಸ್ಥಿತಿಯಲಿದ್ದು ಸುಧಾಮೂರ್ತಿಯವರು ಮಾಡಿರೋ ಕೆಲಸ ಕೇಳಿದ್ರೆ ನಿಮಗೂ ಅಚ್ಚರಿಯಾಗುತ್ತೆ..

[widget id=”custom_html-4″]

Advertisements

ಹೌದು, ರಾಜ್ಯ ರಾಜ್ಯದ ಜನರು ಸಂಕಷ್ಟದ ಪರಿಷ್ಟಿಯಲ್ಲಿದ್ದಾಗ ಸುಧಾಮೂರ್ತಿಯವರು ಕರುಣಾಮಯಿ ತಾಯಿಯಾಗಿ ತಮ್ಮ ಸೇವೆ ಮಾಡಲು ಮುಂದೆ ಬರುತ್ತಾರೆ. ಕಳೆದ ವರ್ಷ ಸ್ವತಃ ತಾವೇ ನಿಂತು ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ಫುಡ್ ಕಿಟ್ ಗಳನ್ನ ವಿತರಿಸಿದ್ದ ಸುಧಾಮೂರ್ತಿಯವರು, ಕೊ’ರೋನಾ ವಿರುದ್ಧ ಹೋರಾಡಲು ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಬರೋಬ್ಬರಿ 100 ಕೋಟಿ ಹಣ ಕೊಟ್ಟಿದ್ದರು. ಇನ್ನು ಈ ವರ್ಷ ಕೂಡ ಕೊ’ರೊನದಿಂದಾಗಿ ರಾಜ್ಯದ ಜನರು ಬಾರೀ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಬೆಡ್ ಹಾಗೂ ಆಕ್ಸಿಜೆನ್ ಸಿಗದೇ ಜೀ’ವ ಕಳೆದುಕೊಳ್ಳುವವರ ಸಂಖ್ಯೆ ದಿನದಿನ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

[widget id=”custom_html-4″]

ಇದೆ ಕಾರಣದಿಂದಾಗಿ ಮತ್ತೆ ಸುಧಾಮೂರ್ತಿ ಅಮ್ಮನವರು ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಬರೋಬ್ಬರಿ 100 ಕೋಟಿ ಹಣವನ್ನ ಡೊನೇಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲಿಗೆ ಕಳೆದ ವರ್ಷ ಈ ವರ್ಷ ಸೇರಿ ಒಟ್ಟಾಗಿ ಬರೋಬ್ಬರಿ ೨೦೦ ಕೋಟಿ ಹಣವನ್ನ ಸೋಂಕಿನ ವಿರುದ್ಧ ಹೊರಡುವ ಸಲುವಾಗಿ ಕೊಟ್ಟಂತಾಗಿದೆ. ಇನ್ನು ಈ ಹಣವನ್ನ ಆಸ್ಪತ್ರೆಗಳಿಗೆ ಅಗತ್ಯ ಇರೋ ಆಕ್ಸಿಜೆನ್, ವೆಂಟಿಲೇಟರ್ಸ್ ಸೇರಿದಂತೆ ಕೋವಿಡ್ ರೋಗಿಗಳಿಗೆ ಬೇಕಾಗಿರುವ ಅಗತ್ಯ ಮೆಡಿಸೆನ್ ಗಳನ್ನ ಕೊಳ್ಳಲು ಉಪಯೋಗಿಸಕೊಳ್ಳಬಹುದಾಗಿದೆ.

[widget id=”custom_html-4″]

ಜೊತೆಗೆ ಕಟ್ಟಡ ಕಾರ್ಮಿಕರು, ದಿನಕೂಲಿ ಕೆಲಸಗಾರರು ಹಾಗೂ ಆಟೋ ಚಾಲಕರಿಗೆ ಅಕ್ಕಿ ಸೇರಿದಂತೆ ಫುಡ್ ಕಿಟ್ ಗಳನ್ನ ನೀಡಲು ಹಾಗೂ ವ್ಯಾಕ್ಸಿನ್ ಪಡೆಯುವ ಸಲುವಾಗಿ ಜನರಲ್ಲಿ ಜಾಗ್ರತೆ ಮೂಡಿಸಲು ಈ ಹಣವನ್ನ ಬಳಸುತ್ತೇವೆ ಎಂದು ಸುಧಾಮೂರ್ತಿ ಅಮ್ಮನವರು ಹೇಳಿದ್ದಾರೆ. ಹಣ ಇದೆ ಅನ್ನೋದು ಮುಖ್ಯವಲ್ಲ ಅದನ್ನ ಸಂಕಷ್ಟದಲ್ಲಿರುವ ಜನರಿಗಾಗಿ ಉಪಯೋಗ ಮಾಡುವ ಹೃದಯವಂತ ಮನಸ್ಸು ಬೇಕು ಅಷ್ಟೇ.. ಒಟ್ಟಿನಲ್ಲಿ ಇಂತಹ ಕರುಣಾಮಯಿ ಅಮ್ಮನನ್ನ ಪಡೆದ ಕರ್ನಾಟಕದ ಜನರೇ ಭಾಗ್ಯಶಾಲಿಗಳು ಎಂದರೆ ತಪ್ಪಾಗೊದಿಲ್ಲ.