46ವರ್ಷ ವಯಸ್ಸಾದ್ರೂ ಚಿರಯುವತಿಯಂತೆ ಕಾಣುವ ನಟಿ ಈಗೇನು ಮಾಡುತ್ತಿದ್ದಾರೆ ಗೊತ್ತಾ.?

Cinema
Advertisements

ಸ್ನೇಹಿತರೇ, ಸಿನಿಮಾ ರಂಗದ ಕೆಲವು ನಟಿಯರಿಗೆ ಎಷ್ಟು ವರ್ಷವಾದರೂ ವಯಸ್ಸು ಆದಂತೆ ಕಾಣಿಸುವುದಿಲ್ಲ. ಅಂತಹ ನಟಿಯರಲ್ಲಿ ಒಬ್ಬರು ಸುಮನ್ ರಂಗನಾಥ್. ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ೨೧ ವರ್ಶಗಳೇ ಕಳೆದಿದ್ದರು ಈಗಲೂ ಈ ನಟಿ ಚಿರಯುವತಿಯಂತೆ ಕಾಣುತ್ತಾರೆ. ಸಿಬಿಐ ಶಂಕರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಸುಮನ್ ರಂಗನಾಥ್ ಅವರವಯಸ್ಸು ಈಗ ೪೬ ಎಂದರೆ ನೀವು ನಂಬೋದಿಲ್ಲ. ಈಕೆಯನ್ನ ಸ್ಯಾಂಡಲ್ವುಡ್ ಎವರ್ ಗ್ರೀನ್ ಬ್ಯುಟಿ ಅಂತಲೇ ಕರೆಯುತ್ತಾರೆ.

[widget id=”custom_html-4″]

Advertisements

ನಟಿ ಸುಮನ್ ರಂಗನಾಥ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟದ್ದು ೧೯೮೯ರಲ್ಲಿ. ಜುಲೈ ೨೬, ೧೯೭೪ರಂದು ತುಮಕೂರಿನಲ್ಲಿ ಇವರ ಜನನವಾಗುತ್ತದೆ. ಇನ್ನು ಈಗಲೂ ಸಹ ಸಾಮಾಜಿಕ ಜಾಲತಾಣಗಲ್ಲಿ ಸುಮನ್ ಅವರಿಗೆ ದೊಡ್ಡದಾದ ಅಭಿಮಾನಿ ಬಳಗವೇ ಇದೆ. ಇನ್ನು ಕನ್ನಡ ಸೇರಿದಂತೆ, ತೆಲುಗು, ತಮಿಳು, ಬೋಜಪುರಿ ಹಾಗೂ ಬಂಗಾಳಿ ಭಾಷೆಗಳಲ್ಲೂ ಸಹ ಈ ನಟಿ ಅಭಿನಯಿಸಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ನಿರ್ಮಾಪಕರಾಗಿದ್ದ ಬಂಟಿ ವಾಲಿಯಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನ್ ರಂಗನಾಥ್ ಅವರ ಸಂಸಾರ ಹೆಚ್ಚು ಕಾಲ ಉಳಿಯಲಿಲ್ಲ. ಇವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಕಾರಣ 2007ರಲ್ಲಿ ಬಂಟಿ ವಾಲಿಯಾ ಅವರಿಂದ ವಿ’ಚ್ಚೇಧನ ಪಡೆಯುತ್ತಾರೆ.

[widget id=”custom_html-4″]

ಇನ್ನು ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸಿಂಗ್ ರಿಯಾಲಿಟಿ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ನೀರ್ ದೋಸೆ ಚಿತ್ರದ ಅಭಿನಯಕ್ಕಾಗಿ ಸೈಮಾ ಅವಾರ್ಡ್ ಪಡೆದುಕೊಂಡಿದ್ದ ಸುಮನ್ ರಂಗನಾಥ್ ಅವರು ಸದ್ದಿಲ್ಲದೇ ೨೦೧೯ರಲ್ಲಿ ಜ್ಯೂಲೈ ೬ರಂದು ಸಜನ್ ಎಂಬುವವರ ಜೊತೆ ಎರಡನೇ ಸಲ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮೊದಲೇ ಪರಿಚಯವಿದ್ದ ಸಜನ್ ಅವರು ಬೆಂಗಳೂರಿನ ಫುಡ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

[widget id=”custom_html-4″]

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಸಿಬಿಐ ಶಂಕರ್ ದಿಂದ ಹಿಡಿದು ದಂಡುಪಾಳ್ಯ, ಕಾವಲು ದಾರಿ, ಬುದ್ದಿವಂತ ಹೀಗೆ ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಯಾವುದೇ ಸಂದರ್ಶನದಲ್ಲಿ ಸುಮನ್ ರಂಗನಾಥ್ ಅವರಿಗೆ ಎದುರಾಗುವ ಪ್ರಶ್ನೆ ಒಂದೇ..ನಿಮ್ಮ ಸೌಂದರ್ಯದ ಗುಟ್ಟೇನು ಎಂಬ ಪ್ರಶ್ನೆ..ಇದರ ಬಗ್ಗೆ ಸ್ವತಃ ಸುಮನ್ ರಂಗನಾಥ್ ಅವರೇ ಹೇಳಿಕೊಂಡಿದ್ದು, ನನ್ನಲ್ಲಿ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ..ಸಮಯಕ್ಕೆ ಸರಿಯಾಗಿ, ಊಟ ನಿದ್ದೆಯನ್ನ ತಪ್ಪಿಸುವುದಿಲ್ಲ..ಚೆನ್ನಾಗಿ ನೀರು ಕುಡಿಯುತ್ತೇನೆ..ಇದೆ ನನ್ನ ಸೌಂದರ್ಯದ ಗುಟ್ಟು ಎಂದು ನಟಿ ಸುಮನ್ ರಂಗನಾಥ್ ಹೇಳಿಕೊಂಡಿದ್ದಾರೆ.