ಪ್ರತಿಯೊಂದು ಶತಕಕ್ಕೂ 1ಲಕ್ಷ ಸೇರಿಸಿ ಕೊರೋನಾ ನಿಯಂತ್ರಣಕ್ಕೆ ದೇಣಿಗೆ ಕೊಟ್ಟ ಕ್ರಿಕೆಟ್ ದಿಗ್ಗಜ..

News Sports

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ಆಗಿದ್ದು, ಇದರ ನೇರ ಪರಿಣಾಮ ಬಡವರು, ನಿರ್ಗತಿಕರು, ಭಿಕ್ಷುಕರ ಮೇಲೆ ಬಿದ್ದಿದೆ. ಇನ್ನು ಉದ್ಯಮಿಗಳು, ಸಿನಿಮಾ ನಟ, ನಟಿಯರು, ಆಟಗಾರರು ಸೇರಿದಂತೆ ಎಲ್ಲರೂ ತಮ್ಮ ಕೈಲಾದಷ್ಟು ದೇಣಿಗೆಯನ್ನ ಸರಕಾರಕ್ಕೆ ಕೊಡುತ್ತಿದ್ದಾರೆ. ಎಷ್ಟೋ ಸೆಲೆಬ್ರೆಟಿಗಳು ಎಷ್ಟೋ ಜನರಿಗೆ ಊಟ ಕೂಡ ಕೊಡುತ್ತಿದ್ದಾರೆ.

ಇನ್ನು ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರು ಕೂಡ ಪ್ರಧಾನಿಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅವರಲ್ಲಿ ಸಚ್ಚಿನ್ ಸೇರಿದಂತೆ ವಿರಾಟ್ ಕೋಹ್ಲಿ, ಧೋನಿ, ಸುರೇಶ ರೈನಾ ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ. ಈಗ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಣಿಗೆ ನೀಡಿದವರಲ್ಲಿಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಒಬ್ಬರಾಗಿದ್ದು ಬರೋಬ್ಬರಿ 59 ಲಕ್ಷರುಗಳನ್ನ ದೇಣಿಗೆಯಾಗಿ ನೀಡಿದ್ದಾರೆ.

ಆದರೆ ಹಲವರಲ್ಲಿ ೫೯ ಲಕ್ಷನೇ ಏಕೆ ಸುನಿಲ್ ಗವಾಸ್ಕರ್ ಅವರು ಫಂಡ್ ಆಗಿ ಕೊಟ್ಟಿದ್ದು ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಈಗ ಅವ್ರ ಪುತ್ರ ರೋಹನ್ ಗವಾಸ್ಕರ್ ಪುತ್ರ ರಿವೀಲ್ ಮಾಡಿದ್ದಾರೆ. ಸುನಿಲ್ ಗವಾಸ್ಕರ್ ಅವರು 1971ರಿಂದ 1987ರವರೆಗೂ ಭಾರತದ ಪರ ಅಂತರಾಷ್ತ್ರೀಯ ಕ್ರಿಕೆಟ್ ನಲ್ಲಿ ೩೫ ಶತಕಗಳನ್ನ ಸಿಡಿಸಿದ್ದರು. ಇನ್ನು ಮುಂಬೈ ಪರ ಕ್ರಿಕೆಟ್ ಆಡಿದ್ದ ಗವಾಸ್ಕರ್ ರವರು ೨೪ ಶತಕಗಳನ್ನ ಸಿಡಿಸಿದ್ದರು. ಹೀಗಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ೨೪ ಲಕ್ಷ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ೩೫ ಲಕ್ಷ ಕೊಟ್ಟಿದ್ದಾರೆ. ಅಂದರೆ ಪ್ರತಿಯೊಂದು ಸೆಂಚುರಿಗೆ ಒಂದು ಲಕ್ಷ ರೂನಂತೆ 59 ಲಕ್ಷ ರೂಪಾಯಿಗಳನ್ನ ಕೊಟ್ಟಿದ್ದಾರೆ.