ಬಡತನದ ಬೇಗೆಯಲ್ಲಿ ಬೆಳೆದ ಕ್ರಿಕೆಟರ್ ನಟರಾಜನ್ ಅವರ ಈಗಿನ ಒಟ್ಟು ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ !

Sports

ಸ್ನೇಹಿತರೇ, ಭಾರತದಲ್ಲಿ ಐಪಿಎಲ್ ಕ್ರೀಡಾಕೂಟ ಶುರುವಾದ ಮೇಲೆ ಬೆಟ್ಟಿಂಗ್ ನಿಂದಾಗಿ ಯಾರು ಎಷ್ಟು ಹಣ ಕಳೆದುಕೊಂಡರೋ ಗೊತ್ತಿಲ್ಲ, ಆದರೆ ಎಷ್ಟೋ ಯುವ ಆಟಗಾರರ ಜೀವನವೇ ಬದಲಾಗಿ ಹೋಗಿದ್ದಂತೂ ನಿಜ. ಅಂತಹ ಆಟಗಾರರಲ್ಲಿ ಒಬ್ಬರು ತಮಿಳುನಾಡಿನ ವೇಗದ ಬೌಲರ್ ಆಗಿರುವ ನಟರಾಜನ್. ೧೯೯೧ ಮೇ ೨೭ರಂದು ತಮಿಳುನಾಡಿನ ಬಡ ಕುಟುಂಬವೊಂದರಲ್ಲಿ ಜನಿಸಿದ ನಟರಾಜನ್ ಅವರಿಗೆ ಈಗ ೨೫ವರ್ಷ ವಯಸ್ಸು. ಇನ್ನು ೨೦೧೭ರಲ್ಲಿ ಐಪಿಎಲ್ ನ ಪಂಜಾಬ್ ಪ್ರಾಂಚೈಸಿಯು ವೇಗದ ಬೌಲರ್ ನಟರಾಜನ್ ಅವರಿಗೆ ಬರೋಬ್ಬರಿ ೩ ಕೋಟಿ ಕೊಟ್ಟು ತಂಡದ ಆಟಗಾರನಾಗಿ ಖರೀದಿ ಮಾಡುವ ಮೂಲಕ ಎಲ್ಲರಲ್ಲೂ ಹಾಕಿತ್ತು.

ಇನ್ನು ಇಷ್ಟೊಂದು ಮೊತ್ತದ ಹಣ ಕೊಟ್ಟು ಖರೀದಿ ಆಗಿದ್ದ ೨೫ವರ್ಷದ ನಟರಾಜನ್ ಅವರ ಬಗ್ಗೆ ಆಗ ಸಾಕಷ್ಟು ಸುದ್ದಿಯಾಗಿತ್ತು. ಇನ್ನು ಖ್ಯಾತ ಕ್ರಿಕೆಟರ್ ನಟರಾಜನ್ ಅವರನ್ನ ೩೦ಬಾರಿ ಬಿಡ್ ಮಾಡಿದ್ದ ಕಾರಣ ಈ ಆಟಗಾರನ ಬಗ್ಗೆ ಕುತೂಹಲ ಹುಟ್ಟಲು ಕಾರಣವಾಗಿತ್ತು. ದುಬಾರಿ ಮೊತ್ತಕ್ಕೆ ಪಂಜಾಬ್ ತಂಡಕ್ಕೆ ಸೇಲ್ ಆಗಿದ್ದ ಟಿ. ನಟರಾಜನ್ ಅವರ ಬಾಲ್ಯ ಜೀವನದ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಸುದ್ದಿಗಳು ಹರಿದಾಡಿದ್ದವು. ಹೌದು, ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಟಿ. ನಟರಾಜನ್ ಅವರು ತಾವು ಜೀವನದಲ್ಲಿ ಅನುಭವಿಸಿದ ಏಳುಬೀಳುಗಳ ಬಗ್ಗೆ ಹಂಚಿಕೊಂಡಿದ್ದರು.

ಬಡತನದ ಬೇಗೆಯಲ್ಲಿ ಬೆಂದಿದ್ದ ತಂಗರಸು ನಟರಾಜನ್ ಅವರು ಬಾಲ್ಯದಲ್ಲಿ ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ಸಾಕಷ್ಟು ತೊಂದರೆಗಳಿಗೆ ಈಡಾಗಿದ್ದು, ಸ್ವತಃ ನಟರಾಜನ್ ಅವರೇ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಇನ್ನು ನಟರಾಜನ್ ಅವರಿಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ ಕೂಡ ಇದ್ದಾನೆ. ೨೦೧೨ರಲ್ಲಿ ನಡೆದಿದ್ದ ಕ್ರೀಡಾಕೂಟವೊಂದರಲ್ಲಿ ನಟರಾಜನ್ ಅವರ ಆಟ ಗಮನಿಸಿದ್ದ ಜೋಲೀ ರೋವರ್ಸ್ ಕ್ರಿಕೆಟ್ ಕ್ಲಬ್ ನ ಕೋಚ್ ಅವರು ನಟರಾಜನ್ ಅವರಿಗೆ ಆ ಕ್ರಿಕೆಟ್ ಕ್ಲಬ್ ನಲ್ಲಿ ಅವಕಾಶವನ್ನ ನೀಡುತ್ತಾರೆ. ಇನ್ನು ಇದೆ ಕ್ರಿಕೆಟ್ ಕ್ಲಬ್ ನಲ್ಲಿ ನಟರಾಜನ್ ಅವರಿಗೆ ಸೌಲಭ್ಯದ ಜೊತೆಗೆ ಉತ್ತಮ ತರಭೇತಿಯು ಸಿಕ್ಕಿತು.

ಸದ್ಯಕ್ಕೆ ನಟರಾಜನ್ ಅವರು ಈಗ ಐಪಿಎಲ್ ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ. ಬರೋಬ್ಬರಿ ನಾಲ್ಕು ಕೋಟಿಗೆ ಹೈದರಾಬಾದ್ ತಂಡ ಈ ಆಟಗಾರನನ್ನ ಖರೀದಿ ಮಾಡಿದೆ. ಇನ್ನು ಭಾರತ ಕ್ರಿಕೆಟ್ ತಂಡದ ಪರ ಕೂಡ ಆಡಿರುವ ಟಿ. ನಟರಾಜನ್ ಅವರು ಒಂದು ಕೋಟಿಯವರೆಗೆ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲವು ಜಾಹಿರಾತುಗಳನ್ನೂ ಕೂಡ ಮಾಡಿರುವ ನಟರಾಜನ್ ಅವರ ಒಟ್ಟು ಆಸ್ತಿ ೧೫ ಕೋಟಿಗಳವರೆಗೆ ಇದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಇದೆ ರೀತಿ ಐಪಿಎಲ್ ನಿಂದಾಗಿ ಬಡತನದಿಂದ ಬೆಳೆದು ಬಂದಿರುವ ಎಷ್ಟೋ ಯುವ ಆಟಗಾರರು ಕೋಟ್ಯಧಿಪತಿಗಳಾಗಿರುವುದಂತೂ ನಿಜ.