ಅನಾಥ ಮಕ್ಕಳಿಗೋಸ್ಕರ ಸಿಂಗಂ ಸೂರ್ಯ ಮಾಡಿದ್ದೇನು ಗೊತ್ತಾ ? ನೀವು ತುಂಬಾ ಗ್ರೇಟ್ ಸರ್..

Advertisements

ಸ್ನೇಹಿತರೇ, ಸಿನಿಮಾ ನಟರನ್ನ ದೇವರಂತೆ ಆರಾಧಿಸುವ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನಿಗೋಸ್ಕರ ಏನಾದರೂ ಮಾಡಲು ರೆಡಿ ಇರುತ್ತಾರೆ. ಇನ್ನು ಅಭಿಮಾನಿಗಳಿಂದ ಜನರಿಂದ ಸ್ಟಾರ್ ಆಗಿ ಬೆಳೆದು ಕೋಟ್ಯಂತರ ರೂಪಾಯಿ ಜೇಬಿಗಿಳಿಸುವ ಬಹುತೇಕ ನಟರಲ್ಲಿ ಕೆಲ ನಟರು ಮಾತ್ರ ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಅಂತಹ ನಟರಲ್ಲಿ ಕಾಲಿವುಡ್ ನ ಸ್ಟಾರ್ ನಟ ಸೂರ್ಯ ಕೂಡ ಒಬ್ಬರು. ಹೌದು, ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಎನ್ನೋ ಗಾದೆ ಮಾತಿನಂತೆ ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಯೋಚನೆ ಮಾಡಿ ಇಡೀ ಚಿತ್ರರಂಗವೇ ಬಾಯಿಮೇಲೆ ಬೆರಳು ಇಟ್ಟುಕೊಳ್ಳುವಂತಹ ಕೆಲಸ ಮಾಡಿದ್ದಾರೆ.

[widget id=”custom_html-4″]

Advertisements

ಅನಾಥ ಮಕ್ಕಳಿಗೋಸ್ಕರ ತಾನು ವಾಸಮಾಡುತ್ತಿದ್ದ ಬರೋಬ್ಬರಿ 70 ಕೋಟಿ ಬೆಲೆಬಾಳುವ ಮನೆಯನ್ನ ಬಿಟ್ಟುಕೊಟ್ಟಿದ್ದಾರೆ. ಇನ್ನು ಸೂರ್ಯ ಅವರ ತಮ್ಮ ಕಾರ್ತೀಕ ಕೂಡ ತಮಿಳಿನಲ್ಲಿ ಸ್ಟಾರ್ ನಟರಾಗಿದ್ದಾರೆ. ಸೂರ್ಯ ಅವರ ಪತ್ನಿ ಜ್ಯೋತಿಕಾ ಕೂಡ ಸ್ಟಾರ್ ನಟಿಯಾಗಿ ಸಿನಿಮಾರಂಗದಲ್ಲಿ ಮೆರೆದವರು. ಇನ್ನು ನಟ ಸೂರ್ಯ ಅವರ ತಂದೆ ಕೂಡ ಸಿನಿಮಾರಂಗದಲ್ಲಿ ಅಭಿನಯಿಸಿದ್ದಾರೆ. ತಂದೆ ನಟರಾಗಿದ್ದರು ಕೂಡ ಸೂರ್ಯ ಶುರುವಿನ ದಿನಗಳಲ್ಲಿ ಟ್ರಾನ್ಸ್ ಪೋರ್ಟ್ ಒಂದರಲ್ಲಿ ೭೦೦ರೂ ಸಂಬಳಕ್ಕೆ ಕೆಲಸ ಮಾಡುತ್ತಿದ್ದರಂತೆ. ಹೀಗೆ ತಮಿಳು ಹಾಗೂ ತೆಲುಗಿನಲ್ಲಿ ಸ್ಟಾರ್ ನಟನಾಗಿ ಬೆಳೆದಿರುವ ನಟ ಸೂರ್ಯ ಅವರು ಅಭಿಮಾನಿಗಳನ್ನ ತುಂಬಾ ಪ್ರೀತಿಯಿಂದ ನೋಡುತ್ತಾರೆ.

[widget id=”custom_html-4″]

ಕೆಲ ದಿನಗಳ ಹಿಂದಷ್ಟೇ ಸೂರ್ಯ ಅವರ ಕಾಲಿಗೆ ಬಿದ್ದ ಅಭಿಮಾನಿಗೆ ಹೀಗೆಲ್ಲಾ ನನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡರಂತೆ. ಇನ್ನು ವಿಶೇಷ ಎಂದರೆ ಸೂರ್ಯ ಮತ್ತು ಕಾರ್ತಿಕ್ ಇಬ್ಬರೂ ಸಹೋದರರು ಮದುವೆಯಾದ ಮೇಲೂ ಸಹ ತಂದೆ ತಾಯಿಗಳ ಜೊತೆಯಲ್ಲಿ ಒಟ್ಟಾಗಿ ವಾಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ವಾಸ ಮಾಡುವ ಸಲುವಾಗಿ ಅದಕ್ಕೆ ತಕ್ಕಂತೆ ಹೊಸದಾದ ಮನೆಯನ್ನ ಕಟ್ಟಿಸಿರುವ ನಟ ಸೂರ್ಯ ತಾವಿದ್ದ ಹಳೇ ಮನೆಯನ್ನ ಮಾರಲು ಇಷ್ಟಪಡದೇ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆಯನ್ನ ಅನಾಥ ಮಕ್ಕಳಿಗೆ ದಾನವಾಗಿ ಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.