ಟೊಮೆಟೋ ಸೂಪ್ ಈ ರೀತಿ ಮಾಡಿದರೆ ಸೂಪರ್..

Kannada News
Advertisements

ಕರೋನಾ ಲಾಕ್ ಡೌನ್ ನಿಂದಾಗಿ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಅದು ಇದು ತಿನ್ನುವಂತೆ ಅನಿಸಿದರೂ ಸುಮ್ಮನೆ ಇರಬೇಕು. ಹೋಟೆಲ್ ಗಳು ಬಂದಾಗಿವೆ. ಇಂತಹ ಸಮಯದಲ್ಲಿ ಸೂಪ್ ಕುಡಿಯಬೇಕು ಎನಿಸಿದರೆ ಏನು ಮಾಡುತ್ತೀರಿ? ಬೇಸರ ಬೇಡ..

Advertisements

ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಹೇಗೆ ಟೊಮೋಟೊ ಸೂಪ್ ಮಾಡ ಬಹುದು ಎಂಬುದನ್ನು ಇಲ್ಲಿ ತಿಳಿಯೋಣ. ಬೇಕಾಗುವ ಸಾಮಗ್ರಿಗಳು..

ಟೊಮೋಟೊ,ಈರುಳ್ಳಿ, ಪಲಾವ್ ಎಲೆ, ಅಡುಗೆ ಎಣ್ಣೆ, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಬೆಳ್ಳುಳ್ಳಿ,ಆಲೂಗಡ್ಡೆ. Optional..ಬೆಣ್ಣೆ, ಬ್ರೆಡ್, ಫ್ರೆಶ್ ಕ್ರೀಮ್, ಕಾರ್ನ್ ಫ್ಲೋರ್

ಮಾಡುವ ವಿಧಾನ : ಒಂದು ಬಾಣಲಿಗೆ ಎಣ್ಣೆ ಬಿಟ್ಟು ಅದು ಬಿಸಿಯಾದ ನಂತರ ಮೂರು ಹೋಳು ಬೆಳ್ಳುಳ್ಳಿ , ಪುಲಾವ್ ಎಲೆ, ಈರುಳ್ಳಿ ಟೊಮೋಟೊ ಹಾಗೂ ಚನ್ನಾಗಿ ಉರಿಯಿರಿ. ಇದು ಆರಿದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ಮಿಕ್ಸಿ ಯಲ್ಲಿ ರುಬ್ಬಿಕೊಳ್ಳಿ.

ಒಂದು ಪಾತ್ರೆಯಲ್ಲಿ ಎಣ್ಣೆ ಬಿಟ್ಟು ಕಾದ ನಂತರ ಅದಕ್ಕೆ ರುಬ್ಬಿದ ಈ ಮಿಶ್ರಣವನ್ನೂ ಒಂದು ಜಾಲರೆಯಲ್ಲಿ ಸೋಸಿ ಹಾಕಿ. ನಂತರ ಒಂದು ಕಪ್ ನೀರಲ್ಲಿ ಒಂದು ಚಮಚ ಕಾರ್ನ್ ಫ್ಲೋರ್ ಕಲಸಿ ಬಿಡಿ. ಇದು ಇಲ್ಲವಾದಲ್ಲಿ ಬೇಯಿಸಿ ರುಬ್ಬಿದ ಆಲೂ ಗಡ್ಡೆ ಹಾಕಿ. ನಂತರ ಇದಕ್ಕೆ ಕಾಳು ಮೆಣಸಿನ ಪುಡಿ, ಗರಂ ಮಸಾಲ ಹಾಕಿ ಚೆನ್ನಾಗಿ ಕುದಿಸಿ. ನಿಮ್ಮ ಬಳಿ ಫ್ರೆಶ್ ಕ್ರೀಮ್ ಇದ್ದರೆ ಹಾಕಿ ಮತ್ತು ಬೆಣ್ಣೆ ಅಥವಾ ತುಪ್ಪ ಅಥವಾ ಎಣ್ಣೆ ಯಲ್ಲಿ ರೋಸ್ಟ್ ಮಾಡಿದ ಬ್ರೆಡ್ ಅನ್ನು ಕಟ್ ಮಾಡಿ ಹಾಕಿ. ರುಚಿಕರವಾದ ಸೂಪ್ ಸಿದ್ದವಾಗುತ್ತದೆ.