ತಾಯಿ ಇನ್ನು ಬದುಕೋದಿಲ್ಲ ಎಂದು ತಿಳಿಯುತ್ತಿದ್ದಂತೆ ಕಾಡಿಗೆ ಹೋದ ತಾಯಿ ಮಗ ಮಾಡಿದ್ದೇನು ಗೊತ್ತಾ?

Kannada Mahiti

ಈ ಜಗತ್ತಿನಲ್ಲಿ ಯಾರಿಂದಾದರೂ ನಿಸ್ವಾರ್ತ ರೀತಿ ಸಿಗುತ್ತೆ ಅಂತಾದ್ರೆ ಅದು ಕೇವಲ ನಮಗೆ ಜನ್ಮ ಕೊಟ್ಟ ತಾಯಿಯಿಂದ ಮಾತ್ರ ಸಾಧ್ಯ. ಪ್ರತಿಫಲಾಪೇಕ್ಷವಿಲ್ಲದ ಅಪ್ಪಟ ಪ್ರೀತಿ ಅಮ್ಮನದು. ತಾನು ಕಷ್ಟಪಟ್ಟರು ಪರವಾಗಿಲ್ಲ ತನ್ನ ಮಕ್ಕಳು ಸುಖವಾಗಿರಬೇಕೆಂದು ಬಯಸುವ ತಾಯಿ, ಮಕ್ಕಳ ಜೀವನದ ಪ್ರತೀ ಮೆಟ್ಟಿನಲ್ಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ಹೀಗೆ ತಾಯಿಯ ಮಮತೆಯ ಬಗ್ಗೆ ಎಷ್ಟು ಹೇಳಿದರು ಸಾಲದು, ತಾಯಿಯ ನಿಸ್ವಾರ್ಥ ಪ್ರೀತಿಯನ್ನ ಬಣ್ಣಿಸಲು ಪದಗಳೇ ಸಾಲುವುದಿಲ್ಲ. ಆದರೆ ತಮಗೆ ಜನ್ಮ ಕೊಟ್ಟು ಬೆಳೆಸಿದ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ದೂಡುವ ಕೆಲಸ ಎಷ್ಟೋ ಮಕ್ಕಳು ಮಾಡುತ್ತಿದ್ದಾರೆ. ಆದ್ರೆ ಇಂತಹವರ ಮಧ್ಯೆ ತನಗೆ ಜನ್ಮ ಕೊಟ್ಟ ತಾಯಿಯನ್ನ ದೇವರಂತೆ ಆರಾಧಿಸುವ ಎಷ್ಟೋ ಮಕ್ಕಳು ಇದ್ದಾರೆ.

ಇದೆ ರೀತಿ ೨೦ವರ್ಷದ ಮಗನೊಬ್ಬ ತನ್ನ ತಾಯಿಯ ಮೇಲಿದ್ದ ಆಗಾಧ ಪ್ರೀತಿಯಿಂದ ಅಮ್ಮನಿಗೋಸ್ಕರ ಮಾಡಿದ ತ್ಯಾಗ ಮಾತ್ರ ಕಲ್ಲು ಹೃದಯದವರನ್ನ ಕರುಗಿಸುವಂತೆ ಮಾಡುತ್ತದೆ. ಹಾಗಾದ್ರೆ ಯಾರಿದು ಯುವಕ..ಏನಿದು ಕಣ್ಣೀರಿನ ಕತೆ ಎಂಬುದನ್ನ ತಿಳಿಯೋಣ ಬನ್ನಿ..೨೦ವರ್ಷದ ಆ ಹುಡುಗನ ಹೆಸರು ಕಾರ್ತಿಕ್ ಎಂದು. ನಮ್ಮ ಪಕ್ಕದ ತೆಲಂಗಾಣ ರಾಜ್ಯಕ್ಕೆ ಸೇರಿದ ಸೂರ್ಯ ಪೆಟ್ ನವನು. ಈ ಯುವಕನ ತಾಯಿಯ ಹೆಸರು ಚಿತ್ರಮಾಧವಿ ಎಂದು. ಆಕೆಗೆ ೩೮ವರ್ಷ. ತನ್ನ ತಾಯಿಯನ್ನ ದೇವರಂತೆ ಆರಾಧಿಸುತ್ತಿದ್ದ ಕಾರ್ತಿಕ್ ಹೈದರಾಬಾದ್ ನಲ್ಲಿ ಬಿಕಾಂ ಪದವಿ ಓದುತ್ತಿದ್ದ. ಆದರೆ ಇದರ ನಡುವೆಯೇ ದುರ್ದೈವ ತನ್ನ ತಾಯಿಗೆ ಕ್ಯಾನ್ಸರ್ ಕಾಯಿಲೆ ಬಂದಿದೆ ಎಂದು ತಿಳಿದ ಕಾರ್ತಿಕ್ ಗೆ ತನ್ನ ಜೀವನವೇ ಹೋದಂತಾಗುತ್ತದೆ. ಅಮ್ಮನಿಗೆ ಬಂದಿರುವ ಕಾಯಿಲೆಯನ್ನ ಹೇಗಾದರೂ ಮಾಡಿ ಗುಣ ಪಡಿಸಬೇಕೆಂದು ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಾನೆ. ಒಂದು ವರ್ಷಗಳ ಕಾಲ ಆಸ್ಪತ್ರೆಗಳನ್ನ ಸುತ್ತಾಡಿದ್ದೆ ಸುತ್ತಾಡಿದ್ದು, ಏನೂ ಪ್ರಯೋಜನ ಆಗುವುದಿಲ್ಲ. ಕಾರ್ತಿಕ್ ತಾಯಿಗೆ ಅದಾಗಲೇ ಹೆಮ್ಮಾರಿ ಕಾಯಿಲೆ ಫೈನಲ್ ಸ್ಟೇಜ್ ತಲುಪಿರುತ್ತದೆ.

ಇನ್ನು ನನ್ನ ಅಮ್ಮ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ಕಾರ್ತಿಕ್ ಗೆ ವೈದ್ಯರ ಮೂಲಕ ಗೊತ್ತಾಗುತ್ತದೆ. ಆಗ ಇದೆ ವೇಳೆ ಯಾರಿಗೂ ತಿಳಿಯದಂತೆ ಕಾರ್ತಿಕ್ ಮತ್ತು ತಾಯಿ ಚಿತ್ರಮಾಧವಿ ಪುಣ್ಯಕ್ಷೇತ್ರವಾದ ಶ್ರೀಶೈಲಂ ಗೆ ಹೋಗುತ್ತಾರೆ. ಆದರೆ ಇವರು ಹೋಗಿದ್ದು ದೇವಸ್ಥಾನಕ್ಕೆ ಅಲ್ಲ. ಇನ್ನು ತನ್ನ ತಾಯಿ ಬದುಕುವುದಿಲ್ಲ ಎಂದು ತಿಳಿದಿದ್ದ ಕಾರ್ತಿಕ್ ಅಮ್ಮನಿಲ್ಲದೆ ನಾನು ಹೇಗೆ ಜೀವನ ಮಾಡುವುದು ಎಂದು ಶ್ರೀಶೈಲಂ ದೇವಸ್ಥಾನದ ಪಕ್ಕದಲ್ಲಿರುವ ಕಾಡಿಗೆ ಹೋಗಿ ತಾಯಿ ಮಗ ಇಬ್ಬರು ಆ’ತ್ಮಹ’ತ್ಯೆ ಮಾಡಿಕೊಳ್ಳುತ್ತಾರೆ. ನನ್ನ ತಾಯಿ ಇಲ್ಲದ ಜೀವನ ನನಗೆ ಬೇಡ ಎಂದು ತನ್ನ ಜೀವನವನ್ನೇ ತ್ಯಾಗ ಮಾಡುತ್ತಾನೆ ಕಾರ್ತಿಕ್. ತಮ್ಮ ಖುಷಿ ಮತ್ತು ಸ್ವಾರ್ಥದ ಆಸೆಗಳಿಗಾಗಿ ತಂದೆ ತಾಯಿಗಳಿಗೆ ಕಷ್ಟಕೊಡುವ ಮಕ್ಕಳೇ ತುಂಬಿರುವ ಈ ಜಗದಲ್ಲಿ ಕಾರ್ತಿಕ್ ಗ್ರೇಟ್..ಆದರೆ ತನ್ನ ಜೀವನ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದು ಮಾತ್ರ ತಪ್ಪು..ಬದುಕಿದ್ದು ತಾಯಿ ಇರುವವರೆಗೂ ಅವರನ್ನ ಚೆನ್ನಾಗಿ ನೋಡಿಕೊಂಡು, ಬಳಿಕ ತಾಯಿಯ ಹೆಸರಲ್ಲಿ ಏನಾದರು ಸಾಮಾಜಿಕ ಕಾರ್ಯ ಮಾಡಬಹುದಿತ್ತು ಎನ್ನುವುದು ನಮ್ಮ ಅಭಿಪ್ರಾಯ..ಇದರ ಬಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ..