ಕೊರೋನಾ ನೆಪದಲ್ಲಿ ತನ್ನ 20ಜನ ಯುವತಿಯರ ಜೊತೆ ಐಷಾರಾಮಿ ಹೋಟೆಲ್ ಸೇರಿಕೊಂಡ ಮಹಾರಾಜ ಮಾಡ್ತಾ ಇರೋದೇನು ಗೊತ್ತಾ.?

News
Advertisements

ಇಡೀ ಜಗತ್ತಿನಾದ್ಯಂತ ಕೊರೋನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ದೊಡ್ಡ ದೊಡ್ಡ ಮುಂದುವರಿದ ದೇಶಗಳೇ ಇದರ ಪ್ರತಾಪಕ್ಕೆ ಕೈ ಕಟ್ಟಿ ಕುಳಿತಿವೆ. ಇದರ ಲಸಿಕೆಗಾಗಿ ದೊಡ್ಡ ಮಟ್ಟದಲ್ಲಿ ಸಂಶೋಧನೆಗಳು ನಡೆದಿವೆ. ಇನ್ನು ಕೊರೋನಾ ಸೋಂಕು ಅತೀ ವೇಗವಾಗಿ ಹರಡುತ್ತಿರುವುದರಿಂದ ಎಲ್ಲಾ ದೇಶಗಳಲ್ಲಿ ಲಾಕ್ ಡೌನ್ ಹೇರಲಾಗಿದೆ.

Advertisements

ಇನ್ನು ಇಂತಹ ತುರ್ತು ಪರಿಸ್ಥಿತಯ ಸಂಧರ್ಭದಲ್ಲಿ ರಾಜರು, ರಾಜಕೀಯ ನಾಯಕರು ಜನರೊಂದಿಗೆ ಇರಬೇಕು. ಆದರೆ ಇಲ್ಲೊಬ್ಬ ರಾಜ ಮಾಡಿದ್ದೆ ಬೇರೆ. ತನ್ನ ೨೦ ಜನ ಸಖಿಯರೊಂದಿಗೆ ಐಷಾರಾಮಿ ಹೋಟೆಲ್‌ ಸೇರಿಕೊಂಡಿದ್ದಾನೆ.

ಹೌದು ಥಾಯ್ಲೆಂಡ್ ನ ಆ ರಾಜನ ಹೆಸರೇ ಮಹಾ ವಜಿರ್ಲಾಂಕೋರ್ನ್. ಕೊರೋನಾ ತುರ್ತು ಪರಿಸ್ಥಿಯ ಈ ಸಂಧರ್ಭದಲ್ಲೂ ೬೭ ವರ್ಷದ ಈ ರಾಜ ೨೦ ಜನ ಯುವತಿಯರ ಜೊತೆ ಜರ್ಮನಿಯ ಬವಾರಿಯದಲ್ಲಿರುವ ಐಷಾರಾಮಿ ಒಂದರ ಹೋಟೆಲ್ ಬುಕ್ ಮಾಡಿದ್ದು, ಆಳುಕಾಳುಗಳೊಂದಿಗೆ ಅಲ್ಲೇ ಉಳಿದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ರಾಜನಿಗೆ ನಾಲ್ಕು ಜನ ಪತ್ನಿಯರಿದ್ದು ಅವರು ಈ ರಾಜನ ಜೊತೆಯೇ ಉಳಿದುಕೊಂಡಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.

ಆದರೆ ಥಾಯ್ಲೆಂಡ್ ದೇಶದಲ್ಲಿ ಕೊರೋನಾ ತಾಂಡವವಾಡುತ್ತಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಜನರು ಸಂಕಷ್ಟ ಎದುರಿಸುತ್ತಿದ್ದು ರಾಜನೆನಿಸಿಕೊಂಡವನು ಹೀಗೆ ಐಷಾರಾಮಿ ಹೋಟೆಲ್ ನಲ್ಲಿ ಐಷಾರಾಮಿ ಜೀವನ ನಡೆಸುವುತ್ತಿರುವುದಕ್ಕೆ ಆ ದೇಶದ ಜನರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.