ನಿಮ್ಮ ಮೆದುಳನ್ನು ಹಾಳುಮಾಡುವ ಈ 5 ಹವ್ಯಾಸಗಳನ್ನು ಇವತ್ತೇ ಬಿಟ್ಟು ಬಿಡಿ !

Health
Advertisements

ನಮಗೆ ತಿಳಿಯದೆಯೇ ಕೆಲವೊಂದು ಹವ್ಯಾಸಗಳು ನಮ್ಮ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಕೆಲವೊಂದು ಹವ್ಯಾಸಗಳು ನಮ್ಮ ಮೆದುಳಿನ ಕಾರ್ಯ ಚಟುವವಟಿಕೆಗಳಿಗೆ ಮತ್ತೆ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಮೆದುಳನ್ನು ಹಾಳು ಮಾಡುವ ಹವ್ಯಾಸಗಳು

*ಬೆಳಗಿನ ಜಾವ ಅಥವಾ ಮುಂಜಾನೆ ವೇಳೆ ಹೆಚ್ಚು ನಿದ್ರಿಸುವುದು : ಕೆಲವರು ಹಗಲು ರಾತ್ರಿ ಎನ್ನದೆ ನಿದ್ರಿಸುತ್ತಾರೆ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಸೂರ್ಯ ನೆತ್ತಿಯ ಮೇಲೆ ಬಂದರೂ ಏಳದೆಯೆ ಮಲಗಿರುತ್ತಾರೆ. ಈ ಹವ್ಯಾಸ ಮೆದುಳಿನ ಆರೋಗ್ಯಕ್ಕೆ ಮಾರಕ. ಹೀಗೆ ಬೆಳಗ್ಗೆ ತಡವಾಗಿ ಹೇಳುವುದರಿಂದ ಮೆದುಳಿಗೆ ಹಾನಿ ಉಂಟಾಗುತ್ತದೆ.

Advertisements

*ಬೆಳಗ್ಗೆ ತಿಂಡಿ ತಿನ್ನದೇ ಇರುವುದು : ಕೆಲವರು ಕೆಲಸದ ಒತ್ತಡದಲ್ಲಿ ಬೆಳಗ್ಗಿನ ತಿಂಡಿಯನ್ನು ತಿನ್ನದೇ ಇರುತ್ತಾರೆ ಅಥವಾ ತಡವಾಗಿ ತಿನ್ನುತ್ತಾರೆ. ಹಾಗೆ ಮಾಡುವುದರಿಂದ ಅನೇಕ ಕಾಯಿಲೆಗಳು ಉಲ್ಬಣ ಗೊಳ್ಳುವುದಲ್ಲದೆ ಮೆದುಳಿಗೂ ಹಾನಿ ಉಂಟಾಗುತ್ತದೆ.

*ಊಟ ಮಾಡುವಾಗ ಟಿವಿ ನೋಡುವುದು : ನಾವು ಆಹಾರ ಸೇವಿಸುವಾಗ ಟಿವಿ, ಮೊಬೈಲ್ ಅಥವಾ ಯಾವುದೋ ಬೇರೆ ವಿಷಯದಲ್ಲಿ ಮುಳುಗಿ ಸೇವಿಸುವ ಆಹಾರದ ಕಡೆ ಗಮನ ಕೊಡದೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಹಲವು ಕಾಯಿಲೆಗಳು ರೂಪುಗೊಳ್ಳುತ್ತವೆ. ಮತ್ತು ಮೆದುಳನ್ನು ಹಾಳು ಮಾಡುತ್ತದೆ.

*ರಾತ್ರಿ ತಡವಾಗಿ ಮಲಗುವುದು : ಈಗಿನ ಪೀಳಿಗೆಗಂತೂ ತಡವಾಗಿ ಮಲಗುವುದೇ ಒಂದು ಹವ್ಯಾಸ ವಾಗಿ ಬಿಟ್ಟಿದೆ. ಇದು ಅಪಾಯಕಾರಿ. ನಮ್ಮ ಮೆದುಳಿಗೆ ರಾತ್ರಿಯ ವೇಳೆ ಹೀಗೆ ಒತ್ತಡ ಹಾಕುವುದರಿಂದ ಹಾನಿ ಉಂಟಾಗುತ್ತದೆ. ಇದರ ಬದಲು ರಾತ್ರಿ ಬೇಗ ಮಲಗಿ ಸರಿಯಾದ ವಿಶ್ರಾಂತಿ ಪಡೆದು ಬೇಗ ಎಳುವುದರಿಂದ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸುವುದಲ್ಲದೆ ಆರೋಗ್ಯವಾಗಿ ಇರುತ್ತದೆ.

*ಹೆಚ್ಚು ಸಿಹಿ ತಿನ್ನುವುದು : ಅಧಿಕವಾಗಿ ಸಿಹಿಯನ್ನು ಯಾವುದೇ ರೂಪದಲ್ಲಿ ತಿಂದರೂ ಅದು ನಮ್ಮ ಮೆದುಳಿನ ಆರೋಗ್ಯಕ್ಕೆ ಮಾರಕವೇ ಆಗಿದೆ.