ಈ ಹಳ್ಳಿಜನ ಪ್ರತೀ ದಿನ ರಾತ್ರಿ ಮಾತ್ರ ಜೈಲಿಗೆ ಹೋಗಿ ಬೆಳಗ್ಗೆ ಬರ್ತಾರೆ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

Kannada Mahiti
Advertisements

ಅಪರಾಧ ಮಾಡಿ ನಿತ್ಯ ನೂರಾರು ಮಂದಿ ಜೈಲಿಗೆ ಹೋಗ್ತಾನೇ ಇರ್ತಾರೆ. ಆದರೆ, ಸುಖಾ ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ. ಅಪರಾಧ ಮಾಡಿದವರು ಕೂಡ ಹೇಗಾದರೂ ತಪ್ಪಿಸಿಕೊಳ್ಳಬೇಕು ಅಂತಾನೆ ಪ್ರಯತ್ನ ಮಾಡ್ತಾರೆ. ಬಹಳಷ್ಟು ಜನ ತಪ್ಪಿಸಿಕೊಂಡೂ ಇರ್ತಾರೆ. ಆದ್ರೆ, ಬೇಕು ಬೇಕು ಅಂತ ಅರಾಮಾಗಿ ಜೈಲಿಗೆ ಹೋಗಿ ಬರೋರನ್ನು ನೀವೆಲ್ಲಾದ್ರೂ ನೋಡಿದ್ದೀರಾ. ಆದ್ರೆ, ಈ ಊರಿನಲ್ಲಿ ಮಾತ್ರ ನಿತ್ಯ ಜನ ಜೈಲಿಗೆ ಹೋಗಿ ಬರ್ತಾರೆ. ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ರಾತ್ರಿ ಜೈಲಿನಲ್ಲಿ ಇದ್ದು ಬೆಳಗ್ಗೆ ಬರ್ತಾರೆ. ಜೈಲು ಅಂದ್ರೆ ಅದೇನು ಪ್ರೀತಿನೋ ಇವರಿಗೆ, ತಾವು ಹೋಗೋದಲ್ಲದೇ ತಮ್ಮ ಮಕ್ಕಳು, ಮರಿಗಳನ್ನು ಕರೆದುಕೊಂಡು ಹೋಗ್ತಾರೆ. ಅಲ್ಲಿಯೇ ವಾಸ ಮಾಡ್ತಾರೆ. ಜೈಲು ಅಂದ್ರೆ ಶಿ’ಕ್ಷೆಗೆ ಒಳಪಡುವ ತಾಣ ಅಂತ ಅಂದುಕೊಂಡವರು ಕೂಡ ಒಮ್ಮೆ ದಂಗಾಗಿ ಬಿಡ್ತಾರೆ. ಒಮ್ಮೆ ಜೈಲು ಸೇರಿ ಬಂದವರಿಗಂತೂ ಇದು ಅಚ್ಚರಿ ಮೇಲೆ ಅಚ್ಚರಿ ಮೂಡಿಸುತ್ತೆ. ಇವರಿಗೆ ಜೈಲು ಒಂದು ರೀತಿ ಮನೆಯ ತರಾ ಆಗಿ ಬಿಟ್ಟಿದೆ. ನಿತ್ಯವೂ ಇಲ್ಲಿಗೆ ಹೋಗಿ ಬರ್ತಾರೆ. ಯಾಕೆ ಅನ್ನೋದಕ್ಕೆ ಒಂದು ಸ್ಪಷ್ಟ ಕಾರಣವೂ ಇದೆ. ಅದನ್ನು ಹೇಳ್ತೀವಿ.

[widget id=”custom_html-4″]

Advertisements

ತಮ್ಮ ಮಕ್ಕಳು ಮರಿಗಳ ಜೊತೆ ಜನ ಜೈಲಿಗೆ ಹೋಗ್ತಿರೋರು, ಛತ್ತೀಸ್‍ಗಢ ಕಂಕೇರ್ ಜಿಲ್ಲೆಯ ಭಾನುಪ್ರತಾಪ್ಪುರ್ ಹಳ್ಳಿಯ ಜನರು. ಇವರಿಗೆ ತಮ್ಮ ಊರೇ ಬೇಡವಾಗಿದೆ. ತಾವು ಊರಲ್ಲಿದ್ದರೇ ಜೀವಂತ ಉಳಿಯಲ್ಲ, ತಮ್ಮ ಹೆಂಡತಿ ಮಕ್ಕಳೂ ಉಳಿಯಲ್ಲಾ ಅಂತ ಓಡೋಡಿ ಬಂದು ಜೈಲು ಸೇರುತ್ತಿದ್ದಾರೆ. ಹಾಗಾದ್ರೆ ಈ ಊರಿನಲ್ಲಿ ಏನಾಗಿದೆ. ಯಾರು ಈ ಊರ ಜನರಿಗೆ ಕಾಟ ಕೊಡ್ತಾ ಇದಾರೆ. ಯಾರ ಕಣ್ಣು ಈ ಊರ ಮೇಲೆ ಬಿದ್ದಿದೆ. ಛತ್ತೀಸ್ ಗಢದಲ್ಲಿ ನ’ಕ್ಸಲರೇನಾದ್ರೂ ಇವರಿಗೆ ತೊಂದ್ರೆ ಕೊಡ್ತಾ ಇದಾರಾ. ಇದ್ಯಾವ ಸಮಸ್ಯೆಯೂ ಇಲ್ಲಿ ಇಲ್ಲ. ಹೀಗಾಗಿ ಜನ ನ’ಕ್ಸಲರ ಭಯಕ್ಕೆ ಓಡಿಹೋಗಿ ಜೈಲು ಸೇರುತ್ತಿದ್ದಾರೆ ಅಂದುಕೊಂಡರೆ ಅದು ತಪ್ಪು. ಅಷ್ಟಕ್ಕೂ ಅವರೇಕೆ ಜೈಲಿಗೆ ಹೋಗ್ತಾರೆ ಅಂತ ಹೇಳ್ತೀವಿ ಕೇಳಿ. ಹೌದು, ಈ ಹಳ್ಳಿಯ ಜನ ನ’ಕ್ಸಲರ ಗುಂ’ಡಿನ ದಾ’ಳಿಗೆ ಹೆದರಲ್ಲ. ಅವರೆದುರು ಎದೆಯೊಡ್ಡಿ ನಿಲ್ಲುವ ಧೈರ್ಯವೂ ಇದೆಯಂತೆ. ಆದ್ರೆ, ಇವರನ್ನು ಭ’ಯಭೀತರಾಗಿಸಿದ್ದು ಗಜಪಡೆ. ಹೌದು, ಆನೆ ಹಿಂಡಿನ ದಾ’ಳಿ ಇವರಲ್ಲಿ ಎಲ್ಲಿಲ್ಲದ ಭಯ ಹುಟ್ಟಿಸಿ ಬಿಟ್ಟಿದೆ. ಊರಲ್ಲಿ ಇದ್ದರೆ ತಾನು ಬದುಕಲ್ಲ ಅಂತ ಭಯ ಬಿದ್ದು ಜೈಲಿಗೆ ಹೆಂಡತಿ, ಮಕ್ಕಳ ಸಮೇತ ಓಡೋಡಿ ಹೋಗ್ತಾರೆ. ಅಷ್ಟಕ್ಕೂ ಗಜಪಡೆಗಳು ಏನು ಮಾಡುತ್ತವೆ, ಹೆಚ್ಚು ಅಂದ್ರೆ ಹೊಲಗಳಲ್ಲಿದ್ದ ಬೆಳೆ ಹಾಳು ಮಾಡಿ ಹೋಗುತ್ತವೆ ಅಂದು ಕೊಂಡ್ರೆ ಅದು ತಪ್ಪು.

[widget id=”custom_html-4″]

ಯಾಕಂದ್ರೆ, ಛತ್ತೀಸ್‍ಗಢದ ಈ ಹಳ್ಳಿಯಲ್ಲಿ ಬೀಡು ಬಿಟ್ಟಿವೆ 30 ಆನೆಗಳ ಹಿಂಡು. ಈ ಹಳ್ಳಿ ಅಂದ್ರೆ ಆನೆಗಳಿಗೂ ಎಲ್ಲಿಲ್ಲದ ಪ್ರೀತಿ. ಹೊಲದಲ್ಲಿ ಬೆಳೆದ ಬೆಳೆಯನ್ನು ಅರ್ಧಂಬರ್ಧ ತಿಂದು ಹಾಳು ಮಾಡಿ ಹೋಗುವುದು ಮಾತ್ರ ಅಲ್ಲ. ರಾತ್ರಿ ವೇಳೆ ಮನೆಗಳ ಮೇಲೆ ದಿಢೀರ್ ದಾ’ಳಿ ಮಾಡುತ್ತವೆ. ಮನೆಯೊಳಗೆ ರೈತರು ದವಸ ಧಾನ್ಯಗಳನ್ನು ಶೇಖರಿಸಿಟ್ಟುಕೊಳ್ಳುತ್ತಾರೆ ಅಂತ ಈ ಆನೆಗಳಿಗೂ ಗೊತ್ತಾಗಿ ಬಿಟ್ಟದೆ. ಹೀಗಾಗಿ ಪ್ರತಿ ದಿನ ರಾತ್ರಿ ಮನೆಗಳ ಮೇಲೆ ದಾಳಿ ಮಾಡುತ್ತವೆ. ದವಸ-ಧಾನ್ಯನಗಳನ್ನು ತಿನ್ನುತ್ತವೆ. ಒಮ್ಮೆ ಜನ ಏನಾದ್ರೂ ಅಡ್ಡಿ ಪಡಿಸಿದ್ರೆ ಅವರೆ ಕಥೆ ಗೋವಿಂದ ಗೋವಿಂದ. ಸೇಮ್ ದ’ರೋಡೆಕೋರರಂತೆ ವರ್ತಿಸುವ ಈ ಆನೆಗಳ ದಾಳಿ ರಾತ್ರಿ ಮಾತ್ರ ಇರುತ್ತೆ. ಬೆಳಗ್ಗೆ ಕಾಡಿಗೆ ಹೋಗಿ ವಿಶ್ರಾಂತಿ ಪಡೆಯುತ್ತವೆ. ಆನೆಗಳಿಗೇನೋ ಇದು ಒಂದು ರೀತಿ ದಿನಚರಿ ಆಗಿಬಿಟ್ಟಿದೆ. ಆದ್ರೆ ಈ ಹಳ್ಳಿ ಜನಗಳಿಗೆ ಇದು ದೊಡ್ಡ ಸವಾಲಾಗಿ ಹೋಗಿದೆ. ಕಟ್ಟಿದ ಮನೆಯಲ್ಲಿ ಇರುವಂತಿಲ್ಲ. ಊಟ ಮಾಡಿ ನೆಮ್ಮದಿಯಿಂದ ಮಲಗುವಂತೆಯೂ ಇಲ್ಲ. ಆನೆ ದಾಳಿಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಅನ್ನುವುದು ಜನರಿಗೆ ದಿಕ್ಕು ತೋಚದಾಗಿದೆ. ಇನ್ನೇನು ಮಾಡೋದು ಅಂತ ಆ ಹಳ್ಳಿಯಿಂದ 10 ಕಿಲೋ ಮೀಟರ್ ದೂರದಲ್ಲಿರೋ ಭಾನುಪ್ರತಾಪ್ಪುರದ ಜೈಲಿಗೆ ಹೋಗುತ್ತಾರೆ. ಅಲ್ಲಿ ಆಶ್ರಯ ಪಡೆಯುತ್ತಾರೆ, ಜೈಲಿನ ಗೋಡೆಗಳ ಮಧ್ಯೆ ಇದ್ರೆ ಸೇಫ್ ಅಂತ ಇಲ್ಲೇ ಮಲಗಿ ಎದ್ದು ಹೋಗ್ತಾರೆ ಜನ.

[widget id=”custom_html-4″]

ಪ್ರತಿ ದಿನ ಬೆಳಗ್ಗೆ ಊರಲ್ಲಿ ಇರುವ ಹಳ್ಳಿಯ ಜನ ಸಂಜೆ 4 ಗಂಟೆಗೆ ಊಟ ಮಾಡಿಕೊಂಡು ದೂರದಲ್ಲಿರುವ ಜೈಲಿಗೆ ಹೋಗಿ ಬಿಡ್ತಾರೆ. ಅಲ್ಲಿ ರಾತ್ರಿ ವಾಸ ಮಾಡಿಕೊಂಡು ಮಾರನೇ ದಿನ ಬೆಳಗ್ಗೆ ಮತ್ತೆ ಹಳ್ಳಿಗೆ ವಾಪಸ್ಸಾಗ್ತಾರೆ. ಈ ಹಳ್ಳಿಯಲ್ಲಿ ಇರುವ ಜನಸಂಖ್ಯೆ ಸುಮಾರು 400 ಜನ. ಇವರೆಲ್ಲ ಗುಂಪು ಗುಂಪಾಗಿ ಸಂಜೆಯಾಗುತ್ತಿದ್ದಂತೆ ಜೈಲಿಗೆ ಹೋಗ್ತಾರೆ. ಜೈಲಿನಲ್ಲಿ ಇವರಿಗೆ ಊಟ ಉಪಚಾರದ ವ್ಯವಸ್ಥೆ ಇಲ್ಲ. ಹೀಗಾಗಿ ಜನ ಮನೆಯಲ್ಲಿಯೇ ಊಟ ಮಾಡಿಕೊಂಡು ಹೊರಡುತ್ತಾರೆ. ಮಕ್ಕಳು, ಮರಿ ಇದ್ದವರು ಹಾಲು, ತಿಂಡಿಗಳನ್ನು ಬಾಕ್ಸ್ ಗೆ ತುಂಬಿಕೊಂಡು ಹೆಜ್ಜೆ ಹಾಕುತ್ತಾರೆ. ತಮ್ಮ ಹಳ್ಳಿಯಿಂದ ಜೈಲು 10ಕಿಲೋ ಮೀಟರ್ ದೂರವಿದೆ. ರಾತ್ರಿ ವೇಳೆ ಈ ಊರಲ್ಲಿ ಒಂದು ನರಪಿಳ್ಳೆಯೂ ಉಳಿಯಲ್ಲ. ಅಷ್ಟೇ ಏಕೆ ಹಗಲು ವೇಳೆ ಊರಿಗೆ ಬಂದು ಸೇರಿಕೊಂಡಿದ್ರು ದೂರದಲ್ಲಿರುವ ತಮ್ಮ ಹೊಲಕ್ಕೆ ಹೋಗುತ್ತಿಲ್ಲ. ಎಲ್ಲಿ ಆನೆಗಳು ದಾ’ಳಿ ನಡೆಸಿ ತುಳಿದು ಹಾಕಿ ಬಿಡುತ್ತವೋ ಅನ್ನೋ ಭಯ. ಹೊಲಕ್ಕೆ ಹೋಗಲಾಗುತ್ತಿಲ್ಲ, ಬೆಳೆ ಬೆಳೆಯಲು ಸಾಧ್ಯ ಆಗತ್ತಿಲ್ಲ. ಹೀಗಾದ್ರೆ ಹೇಗಪ್ಪಾ ಬದುಕೋದು ಅಂತಿದಾರೆ ಇಲ್ಲಿನ ಜನ. ಗಜಪಡೆಯ ಹಾವಳಿ ಎಷ್ಟರಮಟ್ಟಿಗೆ ಹೆಚ್ಚಿದೆ ಅಂದ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಇದು ದೊಡ್ಡ ಸವಾಲಾಗಿ ಬಿಟ್ಟಿದೆ,