ಈ ಟಿಕ್ ಟಾಕ್ ವಿಡಿಯೋ ನೋಡಿ ಆಸ್ಪತ್ರೆ ಸೇರಿದ್ರು 10 ಜನ..

News

ಇಡೀ ಜಗತ್ತು ಕೊರೋನಾ ಮಹಾಮಾರಿಯಿಂದ ನಲುಗುತ್ತಿದೆ. ಪ್ರಪಂಚದ ಎಲ್ಲಾ ದೇಶದ ವಿಜ್ನ್ಯಾನಿಗಳು ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳನ್ನ ಮಾಡುತ್ತಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಕೊರೋನಾ ಸೋಂಕನ್ನ ನಿಯಂತ್ರಣ ಮಾಡಬಲ್ಲ ಯಾವುದೇ ಲಸಿಕೆಯನ್ನ ಕಂಡುಹಿಡಿಯಲು ಆಗಿಲ್ಲ.

ಆದರೆ ಕೊರೋನಾ ದಿಂದ ನಿಮ್ಮನ ನೀವು ರಕ್ಷಣೆ ಮಾಡಿಕೊಳ್ಳಲು ಮನೆ ಮದ್ದು ಎಂಬ ವಿಡಿಯೋವೊಂದು ಟಿಕ್ ಟಾಕ್ ನಲ್ಲಿ ಓಡಾಡುತ್ತಿದೆ. ಇನ್ನು ಈ ವಿಡಿಯೋ ನೋಡಿದವರು ಅದನ್ನ ಉಪಯೋಗಿಸಿ ಆಸ್ಪತ್ರೆ ಸೇರಿದ್ದಾರೆ.

ಇನ್ನು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಕುರಿತಂತೆ ಬರುವ ಮನೆಮದ್ದು ವಿಡಿಯೊಗಳನ್ನ ನಂಬಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈಗ ಗ್ರಾಮೀಣ ಪ್ರದೇಶವೊಂದರಲ್ಲಿ ಕೊರೋನಾ ಕುರಿತಂತೆ ಹೇಳಿರುವ ಔಷಧಿಯನ್ನು ತೆಗೆದುಕೊಂಡು ಈಗ ಆಸ್ಪತ್ರೆ ಸೇರಿರುವ ಘಟನೆ ನಡೆದೆ. ಇನ್ನು ಇದು ಹೈದರಾಬಾದ್ ನ ಆಲಿ ಪಲ್ಲಿ ಎಂಬ ಗ್ರಾಮದಲ್ಲಿ ಎರಡು ಕುಟುಂಬದವರು ದತ್ತೂರಿ ಬೀಜದ ರಸ ಕುಡಿದ್ರೆ ಕೊರೋನಾ ವೈರಸ್ ತಡೆಯಬಹುದು ಎಂಬ ಟಿಕ್ ಟಾಕ್ ವಿಡಿಯೋ ನೋಡಿ ಅದರಂತೆ ದತ್ತೂರಿ ಬೀಜದಿಂದ ರಸ ಮಾಡಿ ಕುಡಿದಿದ್ದಾರೆ.

ಸುಮಾರು ಹತ್ತು ಮಂದಿ ಈ ರಸವನ್ನ ಕುಡಿದಿದ್ದು ಬಳಿಕ ಹೊಟ್ಟೆನೋವು ಬಂದಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇನ್ನು ಇದನ್ನ ನೋಡಿದ ಅಕ್ಕಪಕ್ಕದ ಮನೆಯವರು ಅವರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನು ಚಿಕಿತ್ಸೆ ಪಡೆದ ಬಳಿಕ ಇವರು ಮನೆಗೆ ಹೋಗಿದ್ದಾರೆ ಎಂದು ಹೇಳಲಾಗಿದೆ. ದಯವಿಟ್ಟು ಸೋಷಿಯಲ್ ಮೀಡಿಯಾಗಳಲ್ಲಿ ಕೊರೋನಾ ಕುರಿತಂತೆ ಬರುವ ಯಾವುದೇ ಮನೆಮದ್ದು, ಔಷಧಿಗಳನ್ನ ನಂಬಬೇಡಿ. ಸದ್ಯದ ಮಟ್ಟಿಗೆ ಕೊರೋನಾ ಸೋಂಕಿಗೆ ಯಾವುದೇ ಲಸಿಕೆ ಇಲ್ಲ. ಮನೆಯಲ್ಲೇ ಇರಿ, ಸೇಫ್ ಆಗಿರಿ.