26 ವರ್ಷದ ಈ ಜಿಲ್ಲಾಧಿಕಾರಿಯ ದಿಟ್ಟ ನಡೆಗೆ ಕೈ ಕಟ್ಟಿ ಕೂತ ಕೊರೋನಾ..ಇಡೀ ದೇಶಕ್ಕೆ ಮಾದರಿಯಾದ ಡಿಸಿ

News
Advertisements

ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆಗಿದ್ದು, ಹಾಲು, ತರಕಾರಿ, ದಿನಸಿವಸ್ತುಗಳನ್ನ ಬಿಟ್ಟರೆ, ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಹೊರಗಡೆ ಬರುವಂತಾಗಿದೆ. ಆದರೆ ಜನರು ಬೇಕಾಬಿಟ್ಟಿ ಹೊರಗಡೆ ಬರುತ್ತಿದ್ದು, ಜಿಲ್ಲಾಡಳಿತಗಳಿಗೆ ಇದು ತಲೆ ನೋವಿನ ಕೆಲಸವಾಗಿದೆ.

Advertisements

ರಾಜಸ್ಥಾನ ರಾಜ್ಯದ ಜಯಪುರದಿಂದ 260ಕಿಮೀ ದೂರದಲ್ಲಿರುವ ಭಿಲ್ವಾರ ಜಿಲ್ಲೆ ಕೊರೋನಾ ವೈರಸ್ ನ ಹಾಟ್ ಸ್ಪಾಟ್ ಆಗಿತ್ತು. ಆದರೆ ಅಲ್ಲಿನ ಜಿಲ್ಲಾಧಿಕಾರಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಹೌದು, ೨೬ ವರ್ಷದ ಜಿಲಾಧಿಕಾರಿಯಾಗಿರುವ ಟೀನಾ ಡಾಬಿ ತಮ್ಮ ಖಡಕ್ ನಿರ್ಧಾರಗಳಿಂದ ಅಲ್ಲಿನ ಜನರನ್ನ ಓಲೈಸಿ ಸಂಪೂರ್ಣವಾಗಿ ಲಾಕ್ ಡೌನ್ ಆಗುವಂತೆ ನೋಡಿಕೊಂಡು ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

ನೋಡಲು ಸುಂದರವಾಗಿರುವ ಕೇವಲ ೨೬ ವರ್ಷದ ಟೀನಾ ಡಾಬಿ ತಮ್ಮ ದಿಟ್ಟ ನಿರ್ಧಾರಗಳಿಂದಲೇ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ನೋಡಲು ಸಾಫ್ಟ್ ಆಗಿ ಕಾಣಿಸುವ ಟೀನಾ ಡಾಬಿ ನಿರ್ಧಾರಗಳಿಗೆ ಕೊರೋನಾವೆ ಏನೂ ಮಾಡಲಾಗದೆ ಕೈಕಟ್ಟಿ ಕುತಂತಾಗಿದೆ.

೨೦೧೬ರ ಐಎಎಸ್ ಅಧಿಕಾರಿಯಾಗಿರುವ ಇವರು IAS ನಲ್ಲಿ ಮೊದಲ ರ್ಯಾಂಕ್ ಪಡೆದವರು. ಇನ್ನ್ನು ಇವರು ಐಎಎಸ್ ಅಧಿಕಾರಿಯಾಗಿ ಮಾಡಿರುವ ಅನೇಕ ಕೆಲಸಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೈ ಎಂದಿದ್ದಾರೆ.