ಶಾಕಿಂಗ್ ! ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಹಿಳೆ

News
Advertisements

ಒಂಬತ್ತು ತಿಂಗಳು ತನ್ನ ಮಗುವನ್ನ ಹೊಟ್ಟೆಯಲ್ಲಿಟ್ಟು ಸಾಕುವ ತಾಯಿ ಮಗುವು ಭೂಮಿಗೆ ಬರೋ ಆ ಮಧುರವಾದ ಕ್ಷಣಕ್ಕಾಗಿ ಕಾಯುತ್ತಿರುತ್ತಾಳೆ ಆದರೆ ಒಂಬತ್ತು ತಿಂಗಳ ಬಳಿಕ ತಾಯಿಯ ಗರ್ಭದಿಂದ ಬರುವ ಮಗು ಆ ತಾಯಿಯ ಕನಸುಗಳನ್ನೆಲ್ಲಾ ಛಿದ್ರಮಾಡುವ ಘಟನೆಗಳು ಅನೇಕ ಬಾರಿ ನಡೆದಿವೆ. ಹೌದು ತಾಯಿ ವಿಚಿತ್ರ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ಉಜ್ಬೇಕಿಸ್ತಾನದ ಹಳ್ಳಿಯೊಂದರಲ್ಲಿ ನಡೆದಿದೆ.

Advertisements

ತಾನೇ ಹೆತ್ತ ಮಗುವನ್ನ ನೋಡಿ ಆ ತಾಯಿ ಬೆಚ್ಚಿಬಿದ್ದಿದ್ದಾಳೆ. ವಿಚಿತ್ರ ಎಂದರೆ ಆ ಮಗುವಿಗೆ ಎರಡು ತಲೆಗಳಿದ್ದು ಗುಪ್ತಾಂಗ ಮಾತ್ರ ಒಂದೇ ಇರುವ ಗಂಡು ಮಗು ಜನಿಸಿದೆ. ಇನ್ನು ಆ ತಾಯಿಗೆ ಡೆಲಿವರಿ ಮಾಡಿಸಿದ ವೈದ್ಯರು ಹೇಳುವ ಪ್ರಕಾರ ತಾಯಿಯ ಗರ್ಭದಲ್ಲೇ ಅವು ಅವಳಿ ಮಕ್ಕಳಾಗಿದ್ದು ಹೀಗಿರುವ ಕಂಡಿಷನ್ಸ್ ಪ್ರಕಾರ ಒಂದೇ ಮಗು ಆಗಿದೆ. ಇನ್ನು ಆ ವಿಚಿತ್ರ ಮಗುವಿಗೆ ಕಿಡ್ನಿ ಹೃದಯ ಸೇರಿದಂತೆ ದೇಹದ ಎಲ್ಲಾ ಅಂಗಗಳು ಎರಡೆರಡು ಇದ್ದು ಗುಪ್ತಾಂಗ ಮಾತ್ರ ಒಂದೇ ಇದೆ ಎಂದು ಹೇಳಲಾಗಿದೆ.

ಇನ್ನು ವೈದ್ಯರು ಹೇಳುವ ಪ್ರಕಾರ ಎರಡೂವರೆ ಲಕ್ಷದಲ್ಲಿ ಇಂತಹ ಒಂದು ಪ್ರಕರಣ ಇದ್ದು ಇಂತಹ ಮಕ್ಕಳು ಹೆಚ್ಚು ಎಂದರೆ ೩೦ ರಿಂದ ೫೦ವರ್ಷ ಬದುಕುತ್ತವೆ ಎಂದು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮೊದಲಿಗೆ ಹೊಟ್ಟೆಯಲ್ಲಿ ಬೇರೆ ಬೇರೆಯಾಗಿಯೇ ಮಕ್ಕಳು ಬೆಳೆಯುತ್ತಿದ್ದರು ಆದರೆ ಜನ್ಮ ಆಗುವಷ್ಟರಲ್ಲಿ ಒಂದೊಕ್ಕೊಂದು ಸೇರಿಕೊಂಡಿವೆ ಎಂದು ಹೇಳಲಾಗಿದೆ. ಇನ್ನು ತಂದೆ ತಾಯಿಗೆ ಈ ವಿಷಯವನ್ನ ಮೊದಲೇ ತಿಳಿಸಿರುವ ವೈದ್ಯರು ಮಗು ಹುಟ್ಟುವಾಗ ಒಂದೊಕ್ಕೊಂದು ಜೋಡಿಸಿಕೊಂಡು ಹುಟ್ಟುತ್ತವೆ ಎಂದು ಹೇಳಿದ್ದರಂತೆ. ಇನ್ನು ಈಗ ಸಾಮಾನ್ಯ ಸ್ಥಿತಿಯಲ್ಲಿದ್ದು ಚಿಕಿತ್ಸೆ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.