ನಾವು ಮಾಸ್ಕ್ ಹಾಕೋದೇ ಇಲ್ಲ ನಿಮ್ಮ ಕೈಲಿ ಏನ್ ಮಾಡೊಕ್ಕೆ ಆಗುತ್ತೆ ಮಾಡಿ ಎಂದವರನ್ನ ಬಸ್ಸಿನಲ್ಲಿದ್ದವರು ಮಾಡಿದ್ದೇನು ಗೊತ್ತಾ ?

News
Advertisements

ಲಾಕ್ ಡೌನ್ ಸಡಿಲಗೊಂಡ ಬಳಿಕ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಇದಕ್ಕೆಲ್ಲಾ ಜನರ ಬೇಜವಾಬ್ದಾರಿಯೇ ಮೂಲ ಕಾರಣ ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಖಡ್ಡಾಯವಾಗಿದೆ ಆದರೆ ಆರೋಗ್ಯದ ವಿಷಯದಲ್ಲೂ ನಿಯಮಗಳನ್ನ ಸರಿಯಾಗಿ ಪಾಲಿಸದೇ ದರ್ಪ ಮೆರೆಯುವವರು ನಮ್ಮಲ್ಲಿದ್ದಾರೆ ಎನ್ನುವುದೇ ವಿಚಿತ್ರ.

Advertisements

ಹೌದು ಬಸ್ಸಿನಲ್ಲಿ ಕುಳಿತಿದ್ದ ಮಾಸ್ಕ್ ಧರಿಸಿದ ಇಬ್ಬರು ಸಹ ಪ್ರಯಾಣಿಕರ ಜೊತೆ ಜಗಳ ಮಾಡಿಕೊಂಡಿದ್ದು ಸಹ ಪ್ರಯಾಣಿಕರೇ ಅವರನ್ನ ಬಸ್ಸಿನಿಂದ ಇಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ ಉಡುಪಿಯಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರು ಮಾಸ್ಕ್ ಧರಿಸದೇ ಕುಳಿತಿದ್ದರು ಇದನ್ನ ಗಮನಿಸಿದ ಸಹ ಪ್ರಯಾಣಿಕರು ಅವರಿಗೆ ಮಾಸ್ಕ್ ಧರಿಸಲು ಹೇಳುವಂತೆ ಕಂಡಕ್ಟರ್ ಬಳಿ ದೂರು ಕೊಟ್ಟಿದ್ದಾರೆ ಆದರೆ ಕಂಡಕ್ಟರ್ ಮಾತಿಗೂ ಸೊಪ್ಪು ಹಾಕದ ಆ ಇಬ್ಬರು ಮಾಸ್ಕ್ ಧರಿಸಲಿಲ್ಲ ಬಸ್ಸಿನಿಂದಲೂ ಕೆಳಗೆ ಇಳಿಯಲಿಲ್ಲ.

ಇಷ್ಟಕ್ಕೆ ನಿಲ್ಲದೆ ನಾವು ಮಾಸ್ಕ್ ಹಾಕೋದೇ ಇಲ್ಲ ಏನ್ ಮಾಡಿಕೊಳ್ಳುತ್ತೀರಾ ಮಾಡಿ ಎಂದು ಕಂಡಕ್ಟರ್ ಮತ್ತು ಸಹ ಪ್ರಯಾಣಿಕರಿಗೆ ಅವಾಜ್ ಹಾಕಿದ್ದಲ್ಲದೆ ಅವರ ಜೊತೆ ಜಗಳಕ್ಕೆ ಇಳಿದಿದ್ದಾರೆ ಇದರಿಂದ ಕೋಪ ನೆತ್ತಿಗೇರಿದ ಸಹ ಪ್ರಯಾಣಿಕರು ಅವರನ್ನ ಬೈದು ಬಸ್ಸಿನಿಂದ ಕೆಳಗಡೆ ಇಳಿಸಿದ್ದಾರೆ ತಮ್ಮ ಆರೋಗ್ಯದ ವಿಚಾರದಲ್ಲೂ ಜನ ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎಂದರೆ ಸರ್ಕಾರಗಳು ತಾನೇ ಏನು ಮಾಡೋದಕ್ಕೆ ಆಗುತ್ತೆ ಹೇಳಿ..