ನಾನು ಈ ರಾಜ್ಯದ CM ಆಗ್ಬೇಕು..ನನ್ನ ಗೆಲ್ಲಿಸ್ತೀರಾ ಎಂದ ಉಪೇಂದ್ರ ! ಜನ ಕೊಟ್ಟ ಉತ್ತರ ಏನ್ ಗೊತ್ತಾ ? ನೀವೇನಂತೀರಾ ?

Cinema
Advertisements

ನಮಸ್ತೇ ಸ್ನೇಹಿತರೇ, ನಟ, ನಿರ್ದೇಶಕ ಹಾಗೂ ಪ್ರಜಾಕಿಯ ಪಕ್ಷದ ಸಂಸ್ಥಾಪಕ ಕೂಡ ಆಗಿರುವ ಉಪೇಂದ್ರ ಅವರು ಸಾಮಾಜಿಕ ಜಾಲತಾಣ ಮುಖಾಂತರ ಈಗೊಂದು ಪ್ರಶ್ನೆಯನ್ನ ಜನರ ಮುಂದಿಟ್ಟಿದ್ದಾರೆ. ಕೊ’ರೋನಾ ಸೋಂಕಿನಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಇದ್ದು ರೈತರು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಅನೇಕರು ತಾವು ಬೆಳದ ಟೊಮೊಟೋ ಸೇರಿದಂತೆ ಹೂ, ತರಕಾರಿಗಳನ್ನ ಬೀದಿಗೆ ಸುರಿಯುತ್ತಿದ್ದಾರೆ. ಹಾಗಾಗಿ ಅಂತಹ ರೈತರಿಂದ ಟೊಮೋಟೊವನ್ನ ಖರೀದಿಸಿ ಸಂಕಷ್ಟದಲ್ಲಿರುವ ಜನರಿಗೆ ಹಂಚುವ ಕೆಲಸ ಮಾಡಿದ್ದಾರೆ ನಟ ಉಪೇಂದ್ರ. ಈಗ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಯೊಂದನ್ನ ಎತ್ತಿರುವ ಉಪ್ಪಿ ನಾನು ಸಿಎಂ ಆಗಬೇಕು ? ನನ್ನನ್ನ ಗೆಲ್ಲುಸುತ್ತೀರಾ ಎಂದು ಕೇಳಿದ್ದಾರೆ.

[widget id=”custom_html-4″]

Advertisements

ಹೌದು, ನಾನು ನಿಮ್ಮ ಉಪೇಂದ್ರ ಈ ರಾಜ್ಯದ ಸಿಎಂ (ಮುಖ್ಯಮಂತ್ರಿ) ಆಗ್ಬೇಕು. ನಾನು ಎಲೆಕ್ಷನ್ ನಲ್ಲಿ ನಿಂತ್ರೆ ನೀವು ನನ್ನನ್ನ ಗೆಲ್ಲುಸುತ್ತೀರಾ ? ಇನ್ನು ಉಪ್ಪಿಯ ಪ್ರಶ್ನೆಗೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಸಕಾರಾತ್ಮಕವಾದ ಕಾಮೆಂಟ್ ಗಳು ಬಂದಿವೆ. ನಾನು ಎಲೆಕ್ಷನ್ ಗೆ ನಿಂತ್ರೆ ನೀವು ನನ್ನನ್ನ ಗೆಲ್ಲಿಸುತ್ತೀರೋ ಅಥ್ವಾ ಸೋಲುಸುತ್ತೀರೋ ? ಆದ್ರೆ ನಾನು ಚುನಾವಣೆಗೆ ಅಂತೂ ನಿಲ್ಲೋದಿಲ್ಲ. ಹಾಗಾದ್ರೆ ನಾನೇ ಸ್ಥಾಪನೆ ಮಾಡಿರುವ ಪ್ರಜಾಕೀಯ ಪಕ್ಷ ಏತಕ್ಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿರುತ್ತೆ ಅಲ್ಲವೇ..ನಾನು ಸಿಎಂ ಅಂದರೆ ಕಾಮನ್ ಮ್ಯಾನ್ (ಸಾಮಾನ್ಯ ಮನುಷ್ಯ) ನಾಗಿ ನಿಮ್ಮ ಜೊತೆಯಲ್ಲಿ ಇರುತ್ತೇನೆ. ಪ್ರಜಕೀಯ ಪಕ್ಷದ ವಿಚಾರಧಾರೆಗಳನ್ನ ನೀವು ಅರಿತು, ಅದನ್ನ ಪಾಲನೆ ಮಾಡಿ ಮತ ನೀಡಿ, ಕೆಲಸ ಕೊಟ್ರೆ ನಿಮ್ಮ ಜೊತೆ ಯಾವಾಗಲು ಸಂಪರ್ಕದಲ್ಲಿರುತ್ತೇನೆ. ನಿಮಗಾಗಬೇಕಾದ ಕೆಲಸವನ್ನ ಪ್ರತಿಯೊಂದು ಪೈಸೆ ಕೂಡ ಲೆಕ್ಕ ಕೊಟ್ಟು ಪಾರದರ್ಶಕವಾಗಿ ಮಾಡುವಂತೆ ಮಾಡುತ್ತೇನೆ. ಇನ್ನು ಉಪೇಂದ್ರವರು ಏನೆಲ್ಲಾ ಹೇಳಿದ್ದಾರೆ ತಿಳಿಯಲು ಕೆಳಗಡೆ ಏರೋ ಫೋಟೋ ನೋಡಿ..

[widget id=”custom_html-4″]

ಇನ್ನು ಉಪೇಂದ್ರ ಅವರು ತಮ್ಮ ಆಶಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರೋ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಹಾಗೂ ಅಭಿಯಾನಿಗಳಿಂದ ಸಕಾರಾತ್ಮಕವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನು ಲಾಕ್ ಡೌನ್ ವೇಳೆ ಉಪೇಂದ್ರ ಅವರು ಉಪೇಂದ್ರ ಅವರು ರೈತರು, ಸಿನಿಮಾ ಪೋಷಕ ಕಲಾವಿದರಿಗೆ ನೆರವಾಗಿರುವುದನ್ನ ನೋಡಿರುವ ಜನರು, ಉಪೇಂದ್ರ ಅವರ ವಿಚಾರಗಳಿಗೆ ನಮ್ಮ ಬೆಂಬಲ ಇದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸ್ನೇಹಿತರೇ, ಉಪೇಂದ್ರ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಾ ? ಬೇಡವಾ ? ಎಂದು ಕಾಮೆಂಟ್ ಮಾಡಿ ತಿಳಿಸಿ..