ಕಬ್ಜ ನಯಾ ಅವತಾರದಲ್ಲಿ ಅಭಿನಯ ಚಕ್ರವರ್ತಿ ! ಹೇಗಿರಲಿದೆ ಗೊತ್ತಾ ಕಿಚ್ಚ-ಉಪ್ಪಿ ಜುಗಲ್ಭಂದಿ?

Cinema
Advertisements

ಒಬ್ರು ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ, ಸ್ಟೈಲಿಶ್ ಸ್ಟಾರ್..ಮತ್ತೊಬ್ರು ಮಲ್ಟಿ ಟ್ಯಾಲೆಂಟ್ ಡೈರೆಕ್ಟರ್, ರಿಯಲ್ ಸ್ಟಾರ್. ಇವರಿಬ್ಬರು ಒಂದೇ ಕಡೆ ಸೇರಿದ್ರೆ ಸುಮ್ನಿರೋದಕ್ಕೆ ಸಾಧ್ಯವೇ ಅಲ್ಲೊಂದು ಇತಿಹಾಸ ಶತಸಿದ್ಧ.. ಅರೆ, ಇದೇನಪ್ಪ ಯಾರ್ ಬಗ್ಗೆ ಇಷ್ಟೊಂದು ಬಿಲ್ಡಪ್ ಕೊಡ್ತಿದಿರಾ ಅನ್ಕೊಂಡ್ರಾ. ನಾವು ಬರೀ ಹೊಗಳಿದ್ರೆ ಸಾಲಲ್ಲ. ಬಿಲ್ಡಪ್ ಕೊಟ್ರೆ ನೋ ಯೂಸ್. ಅವರದ್ದು ಏನಿದ್ರು ರಿಯಲ್ ಮ್ಯಾಟರ್..ಎದೆಗೆ ನಾಟುವಂತಹ ನೇರಾ, ನೇರಾ ಮಾತುಗಳ ಕ್ಯಾರೆಕ್ಟರ್, ನಿರ್ದೇಶನದಲ್ಲೇ ಶೂಟ್ ಮಾಡುವ ಚಾಲಾಕಿ ಅವರು. ಬೇರೆ ಯಾರು ಅಲ್ಲ ಅದುವೇ ರಿಯಲ್ ಸ್ಟಾರ್ ಉಪ್ರೇಂದ್ರ. ಎ, ಉಪೇಂದ್ರ, ಓಂ, ನಂತಹ ಆಲ್ ಟೈಮ್ ಹಿಟ್ ಚಿತ್ರಗಳನ್ನ ನೀಡಿರೋ ಉಪ್ಪಿ..ಕನ್ನಡ ಚಿತ್ರರಂಗದ ಸ್ಟೈಲ್ ಕಿಂಗ್, ಮಾತಿನಲ್ಲೇ ಮೋಡಿ ಮಾಡೋ ಕಿಚ್ಚ ಸುದೀಪ. ಈ ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದು, ಮಲ್ಟಿ ಸ್ಟಾರ್ ಫಿಲ್ಮಿ ಮತ್ತೆ ಮುನ್ನೆಲೆಗೆ ಬಂದಿದೆ. ತಾಜ್ ಮಹಲ್, ಬ್ರಹ್ಮ, ಐ ಲವ್ ಯು ಚಿತ್ರಗಳನ್ನ ನಿರ್ದೇಶಿಸಿದ್ದ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳ್ತಿರುವ ಫಿಲ್ಮ್ ಕಬ್ಜ.

[widget id=”custom_html-4″]

Advertisements

ಹೆಸರಲ್ಲೇ ಏನೋ ಡಿಫರೆಂಟ್ ಅರ್ಥ ಇದೆ. ಪವರ್ ಇದೆ ಅನಿಸುತ್ತೆ ಅಲ್ವಾ. ಹಾಗಾಗಿಯೇ ಡೈರೆಕ್ಟರ್ ಚಂದ್ರು ಉಪ್ಪಿಯನ್ನೇ ಹೀರೋ ಆಗಿ ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಅಲ್ದೆ, ಉಪ್ಪಿ ಜೊತೆ ಕಿಚ್ಚ ಸುದೀಪ್ ನಟಿಸುತ್ತಿರೋದು ಅಭಿಮಾನಿಗಳಿಗೆ ಸಕತ್ ಖುಷಿ ಕೊಟ್ಟಿದೆ. 70-80ರ ದಶಕದ ಸಿನಿಮಾದಂತೆ ಭಾಸವಾಗುತ್ತಿರುವ ಕಬ್ಜದಲ್ಲಿ, ಈ ಇಬ್ಬರು ಸೂಪರ್ ಸ್ಟಾರ್ ಗಳು ವಿಭಿನ್ನ ಪೋಸ್ಟರ್ ಗಳಿಂದಲೇ ಸೌಂಡ್ ಮಾಡ್ತಿದ್ದಾರೆ. ಇಲ್ಲಿ ಬಿಸಿ ಬಿಸಿ ಸುದ್ದಿ ಏನಪ್ಪ ಅಂದ್ರೆ, ಕಬ್ಜ ಸಿನಿಮಾದ ಮತ್ತೊಂದು ಪೋಸ್ಟರ್ ರಿವೀಲ್ ಆಗಿದ್ದು, ಹಾಲಿವುಡ್ ಸ್ಟೈಲ್ ನಲ್ಲಿ ಇದೆ. ಕಿಚ್ಚ-ಉಪ್ಪಿ ಜುಗಲ್ಭಂದಿ ಅನಾವರಣವಾಗಲಿದ್ದು, ಬಿಗ್ ಸ್ಟಾರ್ ಗಳ ನಯಾ ಅವತಾರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದಾರೆ. ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲೂ ಇದರ ಸೌಂಡ್ ಭರ್ಜರಿಯಾಗೆ ಕೇಳಿಸಲಿದೆ. ಕಬ್ಜ ಅನ್ನೋ ಬಿಗ್ ಸಿನಿಮಾದಲ್ಲಿ ಹಲವಾರು ಖ್ಯಾತನಾಮ‌ ನಟರು ಅಭಿನಯಿಸುತ್ತಿದಾರೆ.

[widget id=”custom_html-4″]

ಉಗ್ರಂ, ಕೆಜಿಎಫ್ ನಂತಹ ಹಿಟ್ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ರವಿ ಬಸ್ರೂರು, ಕಬ್ಜ ಚಿತ್ರಕ್ಕೂ ಟ್ಯೂನ್ ಹಾಕಿದ್ದಾರೆ. ಆರ್.ಚಂದ್ರು, ನಿರ್ದೇಶನದ ಕ್ಯಾಪ್ ಧರಿಸೋದ್ರ ಜೊತೆಗೆ ಬಂಡವಾಳ ಹಾಕಿ ನಿರ್ಮಾಪಕನ ಜವಾಬ್ದಾರಿ ಕೂಡ ವಹಿಸಿಕೊಂಡಿದ್ದಾರೆ. ಸ್ಪೆಷಲ್ ವಿಷ್ಯ ಏನಪ್ಪ ಅಂದ್ರೆ ಕಿಚ್ಚ ಹಾಗೂ ಉಪ್ಪಿ ಇಬ್ಬರು ಬಹುಭಾಷಾ ನಟರು. ಇವರಿಗೆ ಓವರ್ ಆಲ್ ಇಂಡಿಯಾದಲ್ಲಿ ಅಭಿಮಾನಿಗಳ ದಂಡೇ ಇದೆ. ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಕನ್ನಡದ ಸೂಪರ್ ಸ್ಟಾರ್ ಗಳು ಚಿರಪರಿಚಿತ. ಹಾಗಾಗಿ ಫ್ಯಾನ್ ಇಂಡಿಯಾ ಸಿನಿಮಾ ಮಾಡುವ ಪ್ಲಾನ್ ನಿರ್ದೇಶಕರದ್ದು. ಈಗಾಗ್ಲೇ ನಟ ಸುದೀಪ್ ಮತ್ತು ಉಪ್ಪಿ, ಮುಕುಂದ ಮುರಾರಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದು, ಅಭಿಮಾನಿಗಳು ಈ ಜೋಡಿಯನ್ನ ಮನಸಾರೆ ಒಪ್ಪಿ ಅಪ್ಪಿಕೊಂಡಿದ್ದರು. ಮತ್ತೆ ಇವರಿಬ್ಬರು ಒಂದಾಗಿ ನಟಿಸುತ್ತಿರೋದು ಹಲವು ಕುತೂಹಲ, ದಾಖಲೆಗಳಿಗೆ ಸಾಕ್ಷಿಯಾಗಿವೆ ಅನ್ನೋ ಮಾತಂತೂ ಸುಳ್ಳಲ್ಲ.