ಲಾಕ್ ಡೌನ್ ವೇಳೆ ಸೀಜ್ ಆದ ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ

News
Advertisements

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು ದಿನನಿತ್ಯದ ಬಳಕೆ ವಸ್ತುಗಳಿಗಾಗಿ ಮಾತ್ರ ಜನರ ಹೊರಬರಬೇಕಾಗಿದೆ. ಆದರೆ ಸರ್ಕಾರಗಳು ಏನೇನು ಕಾನೂನುಗಳನ್ನ ಮಾಡಿದ್ರೂ ಜನರು ಅವುಗಳನ್ನ ಬ್ರೇಕ್ ಮಾಡದೆ ಇರೋದಿಲ್ಲ. ಹಾಗೆಯೆ ಲಾಕ್ ಡೌನ್ ಆದೇಶಗಳನ್ನು ಮೀರಿ ಬೇಕಾಬಿಟ್ಟಿ ರಸ್ತೆಗಿಳಿದ ವಾಹನಗಳನ್ನ ಬೆಂಗಳೂರು ಪೊಲೀಸರು ಸೀಜ್ ಮಾಡಿದ್ದರು.

Advertisements

ಇನ್ನು ಈಗ ಬಿಗ್ ಸೀಜ್ ಆದ ಮಾಲೀಕರಿಗೆ ಸಿಹಿಸುದ್ದಿಯೊಂದು ಬಂದಿದೆ. ಹೌದು, ಸೀಜ್ ಆಗಿರುವ ವಾಹನಗಳನ್ನ ಹಿಂದಿರುಗಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಕಮಿಷನ್ ರವರು ಟ್ವೀಟ್ ನಲ್ಲಿ ಹೇಳಿರುವಂತೆ ಲಾಕ್ ಡೌನ್ ಅವಧಿಯಲ್ಲಿ ನಿಯಮಗಳನ್ನ ಮೀರಿದ ಸುಮಾರು 30 ಸಾವಿರಕ್ಕೂ ಹೆಚ್ಚು ವಾಹನಗಳನಂ ಸೀಜ್ ಮಾಡಲಾಗಿದ್ದು, ಸಂಬಂಧಪಟ್ಟ ವಾಹನಗಳ ಮಾಲೀಕರು ತಮ್ಮ ವಾಹನಗಳ ಸೂಕ್ತ ದಾಖಾಲಾತಿಗಳನ್ನ ತೋರಿಸಿ ಜೊತೆಗೆ ದಂಡವನ್ನು ಸಹ ಕಟ್ಟಿ ಬಿಡುಗಡೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಇನ್ನು ಮೇ೧ ರ ಬಳಿಕ ಸೀಜ್ ಮಾಡಿದ ವಾಹನಗಳನ್ನ ಮಾಲೀಕರಿಗೆ ಹಿಂದಿರುಗಿಸಲಿದ್ದು, ಯಾರ ವಾಹನ ಮೊದಲು ಸೀಜ್ ಆಗಿದೆಯೋ, ಅಂತಹವರ ವಾಹನಗಳನ್ನ ಸೂಕ್ತ ದಾಖಲೆ ತೋರಿಸಿದಲ್ಲಿ ಹಿಂದಿರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ರವರು ಹೇಳಿದ್ದಾರೆ.