ಟ್ಯಾಕ್ಸ್ ಕಟ್ಟಲು ಹಣ ಇಲ್ಲ ಎಂದು ನಟ ವಿಜಯ್! ದಂಡ ವಿಧಿಸಿ ಛೀಮಾರಿ ಹಾಕಿದ ಕೋರ್ಟ್..ನಿಮಗೇನು ಹಣ ಮೇಲಿಂದ ಉದುರಿತಾ,ನಿಜವಾದ ನಾಯಕರಾಗಿ ಎಂದ ಕೋರ್ಟ್..

Cinema
Advertisements

ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ತೆರೆಮೇಲೆ ವಿಜೃಂಭಿಸುವ ನಟರು ರಿಯಲ್ ಲೈಫ್ ನಲ್ಲಿ ಮಾತ್ರ ಬೇರೆಯದೇ ರೀತಿ ನಡೆದುಕೊಳ್ಳುತ್ತಾರೆ. ಸಾವಿರಾರು ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ನಟರು ಚಿತ್ರಗಳ ಮೂಲಕ ಸಾಮಾಜಿಕ ಸಂದೇಶ ಸಾರಿದ್ರೆ ನಿಜ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿ ಮಾತ್ರ ಸೋಜಿಗವೆನಿಸುತ್ತದೆ. ಇದೆಲ್ಲಾ ಹೇಳಿದ್ದು ಏಕೆಂದರೆ, ಕೋಟ್ಯಂತರ ರೂಪಾಯಿ ನೀಡಿ ದುಬಾರಿ ಕಾರ್ ಗಳನ್ನ ಕೊಂಡಿರುವ ತಮಿಳಿನ ಸ್ಟಾರ್ ನಟ ವಿಜಯ್ ಅವರಿಗೆ ತೆರಿಗೆ ಕಟ್ಟಲು ಹಣವಿಲ್ಲವಂತೆ. ಈಗಂತ ಕೋರ್ಟ್ ನಲ್ಲಿ ಹೇಳಿಕೆ ಕೊಟ್ಟು ವಿಜಯ್ ಅವರಿಗೆ ನ್ಯಾಯಾಲಯ ಚೀಮಾರಿ ಹಾಕಿದ್ದಲ್ಲದೆ, 1 ಲಕ್ಷ ರೂಪಾಯಿಗಳ ದಂಡ ಕೂಡ ವಿಧಿಸಿದೆ..

[widget id=”custom_html-4″]

ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ವಿಜಯ್ ಅವರು ತೆರೆಮೇಲೆ ಹೀರೋನಂತೆ ಮಿಂಚಿದ್ದರೆ, ನಿಜಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಐಷಾರಾಮಿ ದುಬಾರಿ ಕಾರ್ ಗಳನ್ನ ಹೊಂದಿರುವ ವಿಜಯ್ ಅವರು ೨೦೧೨ರಲ್ಲಿ ತುಂಬಾ ದುಬಾರಿ ಕಾರ್ ಆದ ರೋಲ್ಸ್ ರಾಯ್ಸ್ ಘೋಸ್ಟ್ ನ್ನ ಇಂಗ್ಲೆಂಡ್ ನಿಂದ ಭಾರತಕ್ಕೆ ಆಮದು ಮಾಡಿಕೊಂಡಿದ್ದರು. ಈ ವೇಳೆ ಅವರು ಭಾರತದಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಆದರೆ ತೆರಿಗೆ ಕಟ್ಟಲು ಮನಸ್ಸು ಮಾಡದ ನಟ ವಿಜಯ್ ಅವರು ಮದ್ರಾಸ್ ನ ಹೈಕೋರ್ಟ್ ಗೆ ತೆರಿಗೆಯಲ್ಲಿ ವಿನಾಯತಿ ನೀಡುವಂತೆ ಅರ್ಜಿ ಹಾಕಿದ್ದರು. ಈಗ ೯ ವರ್ಷಗಳ ಕಾಲ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯವು ವಿಜಯ್ ಅವರಿಗೆ, ನೀವು ತೆರೆ ಮೇಲೆ ಮಾತ್ರ ಹೀರೊ ಆಗಿ ವಿಜೃಂಭಿಸಿದ್ರೆ ಸಾಲದು, ತೆರಿಗೆ ಕಟ್ಟಿ ನಿಜಜೀವನದಲ್ಲಿ ಕೂಡ ಹಿರೋಗಳಾಗಿ ಎಂದು ಚೀಮಾರಿ ಹಾಕಿದೆ.

[widget id=”custom_html-4″]

Advertisements

ಸಿನಿಮಾ ನಾಯಕ ನಟರು ಜನರನ್ನ ಪ್ರಭಾವಿಸುವ ಸಾಮರ್ಥ್ಯವನ್ನ ಹೊಂದಿರುತ್ತಾರೆ. ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ನೀವು ನಟರೇ ಹೀಗೆ ಮಾಡಿದಲ್ಲಿ ಅದು ಜನರಿಗೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ. ತೆರೆ ಮೇಲೆ ಮಾತ್ರ ಹೀರೊ ಆಗದೆ, ದೇಶದ ಅಭಿವೃದ್ದಿಗಾಗಿ ಕಟ್ಟಬೇಕಾದ ತೆರಿಗೆಗಳನ್ನ ಕಟ್ಟಿ ನಿಜ ನಿಜಜೀವನದಲ್ಲಿಯೂ ಕೂಡ ಹಿರೋಗಳಾಗಿ ಎಂದು ನ್ಯಾಯಾಲಯ ವಿಜಯ್ ಅವರನ್ನ ತರಾಟೆ ತೆಗೆದುಕೊಂಡಿದ್ದು, ೯ವರ್ಷಗಳ ಕಾಲ ಕೋರ್ಟ್ ನ ಸಮಯವನ್ನ ಹಾಳು ಮಾಡಿದಕ್ಕೆ 1 ಲಕ್ಷ ದಂಡ ಹಾಕಿದ ನ್ಯಾಯಾಲಯ ತಮಿಳುನಾಡಿನ ಸಿಎಂ ಪರಿಹಾರ ನಿಧಿಗೆ ಪಾವತಿ ಮಾಡುವಂತೆ ಆದೇಶ ನೀಡಿದೆ. ನಿಮಗೇನು ಹಣ ಆಕಾಶದಿಂದ ಉದಿರಿಲ್ಲ..ದೇಶದ ಬಡ ಜನರ ರ’ಕ್ತ ಮತ್ತು ಅವರ ಸತತ ಕಠಿಣ ಪರಿಶ್ರಮದ ಫಲವಾಗಿಯೇ ಇಂದು ನಿಮ್ಮಂತಹ ಶ್ರೀಮಂತ ವ್ಯಕ್ತಿಗಳಲ್ಲಿ ಹಣ ಶೇಖರಣೆಯಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನಟ ವಿಜಯ್ ಅವರನ್ನ ತರಾಟೆಗೆ ತೆಗೆದುಕೊಂಡಿದೆ.