ಮಗಳೆಂದಕೊಂಡವಳ ಜೊತೆ ಆ ರೀತಿ ಕೆಲಸ ಮಾಡಲ್ಲ ಎಂದ ನಟ ವಿಜಯ್ ಸೇತುಪತಿ !

Cinema
Advertisements

ವಿಜಯ್ ಸೇತುಪತಿ..ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತುಂಬಾ ಬೇಡಿಕೆಯಲ್ಲಿರುವ ಹೆಸರು ಇದು. ನಾಯಕ ನಟ, ಖಳ ನಾಯಕ ಹಾಗೂ ಪೋಷಕ ಪಾತ್ರ ಯಾವುದೇ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುವ ಅದ್ಭುತ ನಟ. ಆದರೆ ಬಂದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ ನಟ ವಿಜಯ್ ಸೇತುಪತಿ. ಅವರು ಮಾಡುತ್ತಿರುವ ಪಾತ್ರಕ್ಕೆ ಮಹತ್ವ ಇದ್ದರೆ ಮಾತ್ರ ಆ ಪಾತ್ರ ಮಾಡಲು ಒಪ್ಪಿಗೆ ನೀಡುತ್ತಾರೆ. ಇದೆಲ್ಲದರ ನಡುವೆ ಇತ್ತೀಚಿಗೆ ಸಿನಿಮಾವೊಂದರ ಆಫರ್ ತಿರಸ್ಕರಿಸಿರುವ ನಟ ವಿಜಯ್ ಸೇತುಪತಿ ಏಕೆಂದು ಕಾರಣವನ್ನು ಕೂಡ ಬಹಿರಂಗ ಮಾಡಿದ್ದಾರೆ. ಹೌದು, ನಟಿ ಕೃತಿ ಶೆಟ್ಟಿ ಜೊತೆ ಹೀರೊ ಆಗಿ ನಟಿಸಲು ಬಂದ ಅವಕಾಶವನ್ನ ತಿರಸ್ಕರಿಸಿದ್ದಾರೆ.

Advertisements

ಇದಕ್ಕೆ ಕಾರಣವೂ ಇದೆ. ನಟ ವಿಜಯ್ ಸೇತುಪತಿ ಅವರು ನಟಿ ಕೃತಿ ಶೆಟ್ಟಿ ಅವರ ಜೊತೆ ಉಪ್ಪೆನಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಅದರಲ್ಲಿ ವಿಜಯ್ ಸೇತುಪತಿ ಕೃತಿ ಶೆಟ್ಟಿ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದರು. ತಂದೆ ಮಗಳ ಪಾತ್ರದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಸಿನಿರಸಿಕರಿಗೆ ತುಂಬಾ ಇಷ್ಟ ಕೂಡ ಆಗಿತ್ತು. ಹಾಗಾಗಿಯೇ ಇದೆ ಕೃತಿ ಶೆಟ್ಟಿ ಜೊತೆ ಹೀರೊ ಆಗಿ ಹೊಸದೊಂದು ಸಿನಿಮಾದಲ್ಲಿ ನಟಿಸುವ ಅವಕಾಶವನ್ನ ವಿಜಯ್ ಸೇತುಪತಿಯವರಿಗೆ ನೀಡಲಾಗಿತ್ತು. ಆದರೆ ಚಿತ್ರತಂಡದವರ ಕೊಟ್ಟ ಆಫರ್ ನ್ನ ನಟ ವಿಜಯ್ ಸೇತುಪತಿ ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ. ಇದಕ್ಕೆ ಸ್ಪಷ್ಟನೆಯನ್ನು ಕೂಡ ಕೊಟ್ಟಿದ್ದಾರೆ ನಟ ವಿಜಯ್ ಸೇತುಪತಿ.

ನಾನು ಈಗಾಗಲೇ ಕೃತಿ ಶೆಟ್ಟಿ ಅವರ ಜೊತೆ ತಂದೆಯ ಪಾತ್ರದಲ್ಲಿ ನಟಿಸಿದ್ದು ಆಕೆಯನ್ನ ತನ್ನ ಮಗಳೆಂದೇ ಭಾವಿಸಿದ್ದೇನೆ. ಒಮ್ಮೆ ಮಗಳೆಂದು ಭಾವಿಸಿದ ಮೇಲೆ ಆಕೆಯೊಂದಿಗೆ ರೋಮ್ಯಾನ್ಸ್ ಪಾತ್ರದಲ್ಲಿ ಅಭಿನಯ ಮಾಡುವುದು ಹೇಗೆ ಸಾಧ್ಯ. ಮುಂದೆಂದೂ ಜೀವನದಲ್ಲಿ ಅದು ಸಾಧ್ಯವೇ ಇಲ್ಲ. ಹಾಗಾಗಿ ನಾನು ಆ ಪಾತ್ರ ಮಾಡುವುದಿಲ್ಲ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ. ಇನ್ನು ಉಪ್ಪೆನಾ ಸಿನಿಮಾ ಮಾಡುವ ವೇಳೆ ನನಗೆ 15ವರ್ಷದ ಮಗನಿದ್ದ. ಇನ್ನು ಅದೇ ವೇಳೆ ನಟಿ ಕೃತಿ ಶೆಟ್ಟಿಗೆ ಕೇವಲ 17 ವರ್ಷ. ಹಾಗಾಗಿಯೇ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ನಾನು ಕೃತಿ ಶೆಟ್ಟಿಗೆ ನನ್ನನ್ನ ನಿನ್ನ ತಂದೆಯಂತಲೇ ತಿಳಿದುಕೋ ಎಂದು ಹೇಳಿದ್ದೆ ಎಡನು ವಿಜಯ್ ಸೇತುಪತಿ ಹೇಳಿದ್ದಾರೆ. ಒಟ್ಟಿನಲ್ಲಿ ತಮಿಳು ಸಿನಿಮಾರಂಗದಲ್ಲಿ ಹಲವಾರು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡು ಬ್ಯುಸಿಯಾಗಿರುವ ನಟ ವಿಜಯ್ ಸೇತುಪತಿ ತುಂಬಾ ಬೇಡಿಕೆಯಲ್ಲಿರುವ ನಟ ಎಂದೆನಿಸಿಕೊಂಡಿದ್ದಾರೆ.