ನಾನು ಉಳಿಯೋತರ ಇಲ್ಲ ಎಂದ ನಟಿ ವಿಜಯಲಕ್ಷ್ಮಿ! ಅಸಲಿಗೆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ?

Cinema

ಚಂದನವನದಲ್ಲಿ ಟಾಪ್ ನಟಿಯಾಗಿ ಮೆರೆದಿದ್ದ ನಟಿ ವಿಜಯಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯಿಂದ ಸುದ್ದಿಯಾಗುತ್ತಲೇ ಇದ್ದಾರೆ. ಅವರು ಕೊಡುವ ಹೇಳಿಕೆಗಳಿಂದಲೇ ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ವಿಡಿಯೋವೊಂದನ್ನ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ಸೃಜನ್ ಲೋಕೇಶ್ ಅವರ ವಿಷಯದಿಂದ ಹಿಡಿದು ಕನ್ನಡದ ಟಾಪ್ ನಟರು ನನಗೆ ಸಹಾಯ ಮಾಡುತ್ತಿಲ್ಲ ಎಂದೆಲ್ಲಾ ಇದಕ್ಕೆ ಮೊದಲು ಹೇಳಿಕೆಗಳನ್ನ ಕೊಟ್ಟು ಸುದ್ದಿಯಾಗಿದ್ದ ನಟಿ ವಿಜಯಲಕ್ಷ್ಮಿ ಈಗ ಮತ್ತೆ ವಿಡಿಯೋವೊಂದನ್ನ ಹಂಚಿಕೊಂಡಿದ್ದು ನಾಬದುಕುವುದು ಅನುಮಾನ ಎಂದು ಆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಟಿ ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿಕೊಂಡಿರುವ ಹಾಗೆ, ನನಗೆ ಕೊರೋನಾ ಪಾಸಿಟೀವ್ ಆಗಿದ್ದು ಅಡರಿನ ನ್ಯುಮೋನಿಯಾ ಕೂಡ ಆಗಿತ್ತು. ಇದರಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾನು, ಚಿಕಿತ್ಸೆಗಾಗಿ ಹಣ ಇಲ್ಲದ ಕಾರಣ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದಿದ್ದೇನೆ. ಆದರೆ ಈಗ ಜ್ವರ ಜಾಸ್ತಿಯಾದ ಕಾರಣ ವಾಂತಿ ಮಾಡಿ ಮಾಡಿ ಸುಸ್ತಾಗಿದ್ದೇನೆ. ನಾನು ಒಂದು ವೇಳೆ ಇದರಿಂದ ಸ’ತ್ತು ಹೋದರೆ ಇವರೆಲ್ಲರೂ ಸೇರಿ ನನ್ನ ಪ್ರಾ’ಣ ತೆಗೆದರು ಅಂತ ನೀವು ಅರ್ಥಮಾಡಿಕೊಳ್ಳಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಸಹಾಯಕ್ಕಾಗಿ ಕಲಾವಿದರ ಸಂಘ ಸೇರಿದಂತೆ ಎಲ್ಲರನ್ನು ಕೇಳಿ ಕೇಳಿ ಈಗ ಸುಸ್ತಾಗಿದ್ದೇನೆ. ಯಾರು ಕೂಡ ನನ್ನ ಸಹಾಯಕ್ಕೆ ಬರುತ್ತಿಲ್ಲ.

ನನ್ನ ಅಭಿಮಾನಿಗಳು ಸೇರಿದಂತೆ ಎಲ್ಲರು ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ನನಗೆ ಯಾರಿಂದಲೂ ಸಹಾಯ ಸಿಗುತ್ತಿಲ್ಲ. ನನಗೆ ಮತ್ತಷ್ಟು ಎದುರಿಸಲು ಶಕ್ತಿಯು ಕೂಡ ಇಲ್ಲ. ಎಲ್ಲರು ಸೇರಿ ನನ್ನ ಕತೆ ಮುಗಿಸಿದ್ದಾರೆ. ನನ್ನ ಮುಂದೆ ಬದುಕುತ್ತೀನಾ ಇಲ್ಲವಾ ಎಂದು ನನಗೆ ಅನುಮಾನವಾಗುತ್ತಿದೆ. ಯಾರಿಂದಲೂ ಸಹಾಯ ಸಿಗದೇ ನನಗೆ ಈ ಸ್ಥಿತಿ ಬಂದಿದೆ ಎಂದು ನಟಿ ವಿಜಯಲಕ್ಷ್ಮಿ ಅವರು ವಿಡಿಯೋ ಮಾಡಿ ಅದರಲ್ಲಿ ತಮ್ಮ ನೋ’ವುಗಳನ್ನೆಲ್ಲಾ ತೋಡಿಕೊಂಡಿದ್ದಾರೆ.